ದೆಹಲಿಯ ಕರ್ನಾಟಕ ಭವನದಲ್ಲಿ ಕಿಚನ್ ವಿಭಾಗದ ನೌಕರನಾಗಿದ್ದ ಯುವಕ ಆತ್ಮಹತ್ಯೆ!

By Gowthami K  |  First Published Jul 3, 2024, 12:24 PM IST

ದೆಹಲಿಯ ಕರ್ನಾಟಕ ಭವನದಲ್ಲಿ ಕಿಚನ್ ವಿಭಾಗದ ನೌಕರನಾಗಿದ್ದ ತಾಲೂಕಿನ ಎಂ.ಬಿ. ಅಯ್ಯನಹಳ್ಳಿ ಯುವಕ ಹೊಸಹಳ್ಳಿ ಹೊರವಲಯದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 


ಕೂಡ್ಲಿಗಿ (ಜು.3): ದೆಹಲಿಯ ಕರ್ನಾಟಕ ಭವನದಲ್ಲಿ ಕಿಚನ್ ವಿಭಾಗದ ನೌಕರನಾಗಿದ್ದ ತಾಲೂಕಿನ ಎಂ.ಬಿ. ಅಯ್ಯನಹಳ್ಳಿ ಯುವಕ ಹೊಸಹಳ್ಳಿ ಹೊರವಲಯದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಸುಕಿನ ಜಾವ ನಡೆದಿದೆ. ಎಂ.ಬಿ. ಅಯ್ಯನಹಳ್ಳಿಯ ಮಾರುತಿ (35) ನೇಣಿಗೆ ಶರಣಾದ ದುರ್ದೈವಿ.

ಕೂಡ್ಲಿಗಿ ತಾಲೂಕು ಎಂ.ಬಿ. ಅಯ್ಯನಹಳ್ಳಿ ನಿವೃತ್ತ ಶಿಕ್ಷಕ ರಾಮಣ್ಣನವರ ಮಗನಾದ ಈ ಯುವಕ ದೆಹಲಿಯ ಕರ್ನಾಟಕ ಭವನದಲ್ಲಿ ಕಿಚನ್ ವಿಭಾಗದ ನೌಕರನಾಗಿದ್ದನು. ಈತ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

Tap to resize

Latest Videos

undefined

ಪತ್ನಿಯೊಂದಿಗೆ ಜೂನ್ 27ರಂದು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಈತ ನಂತರ ಚಳ್ಳಕೆರೆಗೆ ಬಂದು ಪತ್ನಿಯನ್ನು ತವರು ಮನೆಗೆ ಬಿಟ್ಟು ಹೆತ್ತವರನ್ನು ನೋಡಿಕೊಂಡು ಬರಲು ಎಂ.ಬಿ. ಅಯ್ಯನಹಳ್ಳಿಗೆ ಬಂದಿದ್ದ. ಮಾನಸಿಕವಾಗಿ ನೊಂದಿದ್ದ ಈತ ಸೋಮವಾರ ನಸುಕಿನ ಜಾವ ಹೊಸಹಳ್ಳಿ ಹೊರವಲಯದ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ ಎಂದು ಪತ್ನಿ ನೀಡಿದ ದೂರಿನಂತೆ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆತ್ತವರು, ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು.

ಬೆಂಗಳೂರು: ಮದುವೆಯಾದ ಹರೆಯದ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ತವರು ಮನೆ ಸೇರಿದ ಸೊಸೆ, ನೊಂದು ಅತ್ತೆ-ಮಾವ ನೇಣಿಗೆ!
ಬೆಂಗಳೂರು: ಮದುವೆಯಾದ ಮೂರೇ ತಿಂಗಳಿಗೆ ಪತಿ ತೊರೆದು ಸೊಸೆ ತವರು ಮನೆ ಸೇರಿದಳು ಎಂಬ ಕಾರಣಕ್ಕೆ ಮನನೊಂದು ಅತ್ತೆ-ಮಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.

ಕಾರು ಕದ್ದು ₹15 ಲಕ್ಷಕ್ಕೆ ರಾಜ್ಯ ಬಿಜೆಪಿ ಮುಖಂಡಗೆ ಮಾರಿದ ಕಳ್ಳರು!

ಬೈಯಪ್ಪನಹಳ್ಳಿ ನಿವಾಸಿಗಳಾದ ಚಂದ್ರಶೇಖರ್‌(54), ಶಾರದಾ(45) ಆತ್ಮಹತ್ಯೆಗೆ ಶರಣಾದವರು. ದಂಪತಿಗೆ ಇಬ್ಬರು ಗಂಡು ಮಕ್ಕಳು. ಹಿರಿಯ ಮಗ ಪ್ರಶಾಂತ್‌ಗೆ ಮೂರು ತಿಂಗಳ ಹಿಂದೆಯಷ್ಟೇ ಕೆ.ಆರ್‌.ಪುರದ ದೀಕ್ಷಾ ಜತೆ ಮದುವೆ ಮಾಡಿದ್ದರು. ಮಗ-ಸೊಸೆಗೆ ಹೊಂದಾಣಿಕೆ ಬಾರದೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆಗಳು ನಡೆಯುತ್ತಿದ್ದವು. ಇತ್ತೀಚೆಗೆ ಸೊಸೆ ದೀಕ್ಷಾ ಪತಿಯನ್ನು ತೊರೆದು ತವರು ಮನೆ ಸೇರಿದ್ದಳು. ಇದರಿಂದ ಚಂದ್ರಶೇಖರ್‌ ದಂಪತಿ ನೊಂದಿದ್ದರು. ಕಿರಿಯ ಮಗನನ್ನು ಸೋಮವಾರ ಸಂಜೆ ಅಂಗಡಿಗೆ ಹೋಗುವಂತೆ ದಂಪತಿ ಕಳುಹಿಸಿದ್ದರು. ಬಳಿಕ ರೂಮ್‌ ಬಾಗಿಲನ್ನು ಲಾಕ್‌ ಮಾಡಿ ಫ್ಯಾನಿಗೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

click me!