ವೇಗವಾಗಿ ಬಂದು ಟ್ರಾನ್ಸ್‌ಫಾರ್ಮರ್‌ ಏರಿದ ಬೈಕ್‌: ಸವಾರ ಪಾರು ವಿಡಿಯೋ ವೈರಲ್‌

Published : Jun 04, 2022, 10:40 AM ISTUpdated : Jun 05, 2022, 03:37 PM IST
ವೇಗವಾಗಿ ಬಂದು ಟ್ರಾನ್ಸ್‌ಫಾರ್ಮರ್‌ ಏರಿದ ಬೈಕ್‌: ಸವಾರ ಪಾರು ವಿಡಿಯೋ ವೈರಲ್‌

ಸಾರಾಂಶ

ಬೈಕ್ ಸವಾರನೋರ್ವ ಮಿತಿ ಮೀರಿದ ವೇಗದಲ್ಲಿ ಬಂದು ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಡುಕಿ: ಕೇರಳದ ಇಡುಕಿಯಲ್ಲಿ ಬೈಕ್ ಸವಾರನೋರ್ವ ವೇಗವಾಗಿ ಬಂದು ಬೈಕ್‌ ಮೇಲೆ ನಿಯಂತ್ರಣ ತಪ್ಪಿದ ಪರಿಣಾಮ ಆತನ ಹಿಡಿತದಿಂದ ತಪ್ಪಿದ ಬೈಕ್‌ ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ಮರವೇರಿದ ಘಟನೆ ಕೇರಳದ ಇಡುಕ್ಕಿಯ ವೆಲ್ಲಾಯಕುಂಡಿಯಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅನಾಹುತದಲ್ಲಿ ಪಾರಾದ ಬೈಕ್ ಸವಾರನನ್ನು ಕಟ್ಟಪ್ಪನ ವಲಿಯಕಂಡಮ್ ( Kattappana Valiyakandam) ನಿವಾಸಿ ವಿಷ್ಣು ಪ್ರಸಾದ್ (Vishnu Prasad) ಎಂದು ಗುರುತಿಸಲಾಗಿದೆ. 

ವಿಷ್ಣು ಪ್ರಸಾದ್ ತನ್ನ ಗೆಳೆಯನ ಬೈಕ್‌ನ್ನು ತೆಗೆದುಕೊಂಡು ಅತೀಯಾದ ವೇಗದಲ್ಲಿ ಬಂದಿದ್ದಾನೆ. ಈ ವೇಳೆ ಬೈಕ್ ಆತನ ನಿಯಂತ್ರಣ ತಪ್ಪಿ ಆತ ಒಂದು ಕಡೆ ಬಿದ್ದಿದ್ದಾರೆ ಬೈಕ್ ಮೂರು ಪಲ್ಟಿ ಹೊಡೆದು ಟ್ರಾನ್ಸ್‌ಫಾರ್ಮರ್‌ ಮರವೇರಿದೆ. ಘಟನೆಯ ಬಳಿಕ ಆತ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಘಟನೆಯ ಬಳಿಕ ಕೇರಳ(kerala)  ವಿದ್ಯುತ್‌ ಬೋರ್ಡ್‌ನ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿಸಿ ಹೆಚ್ಚಿನ ಅನಾಹುತವಾಗದಂತೆ ತಡೆದಿದ್ದಾರೆ. 

"

ಬೆಂಗಳೂರು: ಕಾರು ಟರ್ನ್ ಮಾಡೋಕೆ ಹೋಗಿ ಬೈಕ್ ಸವಾರನ ಮೇಲೆ ಹತ್ತಿಸಿದ ವೈದ್ಯೆ

ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕಾಣಿಸುವಂತೆ ವೇಗವಾಗಿ ಬಂದ ಈತ ನಿಯಂತ್ರಣ ತಪ್ಪಿ ಒಂದೆಡೆ ಬಿದ್ದರೆ ಬೈಕ್‌ ಒಂದೂವರೆ ಮೀಟರ್‌ಗೂ ಅಧಿಕ ಎತ್ತರಕ್ಕೆ ನೆಗೆದು ಟ್ರಾನ್ಸ್‌ಫಾರ್ಮರ್ ಏರಿದೆ. ಇದನ್ನು ನೋಡಿದ ಸ್ಥಳೀಯರು ಹಾಗೂ ಇತರ ವಾಹನ ಸವಾರರು ಓಡಿ ಬಂದು ಸವಾರನ ನೆರವಿಗೆ ಧಾವಿಸಿದ್ದಾರೆ. ಆದರೆ ಸವಾರ ಯಾವುದೇ ಹಾನಿಯಾಗದೇ ಸ್ಥಳದಿಂದ ಹೊರಟು ಹೋಗಿದ್ದಾನೆ. ಇದಾದ ಬಳಿಕ ವಿದ್ಯುತ್ ಸ್ಥಗಿತಗೊಳಿಸಿದ ಕೇರಳ ವಿದ್ಯುತ್ ಪ್ರಸರಣ ನಿಗಮ ಜೆಸಿಬಿ ಮೂಲಕ ಬೈಕ್‌ನ್ನು ಹೊರಗೆ ತೆಗೆದಿದ್ದು, ಸವಾರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 

ಅಪರಿಚಿತನಿಗೆ ಡ್ರಾಪ್ ಕೊಡಲು ಹೋಗಿ, ಮೊಬೈಲ್, ಗಾಡಿ ಕಳೆದುಕೊಂಡ ಬೈಕ್ ಸವಾರ..!
 

ಬೆಟ್ಟದಿಂದ ಬಿದ್ದ ಬೃಹತ್‌ ಬಂಡೆಯೊಂದು ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್‌ಗೆ ಬಡಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೇರಳದ ತಾಮರಸ್ಸೆರಿಯಲ್ಲಿ ಕಳೆದ ಏಪ್ರಿಲ್‌ನಲ್ಲಿ ನಡೆದಿತ್ತು. ಈ ದೃಶ್ಯ ಆತನ ಹಿಂದೆಯೇ ಚಲಿಸುತ್ತಿದ್ದ ಮತ್ತೊಬ್ಬ ಬೈಕ್ ಸವಾರನ  ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಲ್ಲು ಬಡಿಯುತ್ತಿದ್ದಂತೆ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಎಡಬದಿಯ ಕಮರಿಗೆ ಬೀಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.

ಈ ದೃಶ್ಯ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಭಯಾನಕ ದೃಶ್ಯ ಕಂಡ ಜನ ಶಾಕ್ ಆಗಿದ್ದರು. ಸಾವು ಹೇಗೆ ಬೇಕಾದರೂ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕಲ್ಲು ಬಂದು ಸವಾರನಿಗೆ ಬಡಿಯುತ್ತಿದ್ದಂತೆ ಆತ ಬೈಕ್‌ ಮೇಲಿನ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದು ಸಾವನ್ನಪ್ಪಿದ್ದಾನೆ. ಅವನ ಹಿಂದೆ ಇದ್ದ ಇನ್ನೊಬ್ಬ ಬೈಕರ್ ಅಪಘಾತವನ್ನು ನೋಡಿದ ನಂತರ ವಿಡಿಯೋ ರೆಕಾರ್ಡ್‌ ಅನ್ನು ಥಟ್ಟನೆ ನಿಲ್ಲಿಸಿದ್ದಾನೆ. ಮೃತ ವ್ಯಕ್ತಿಯನ್ನು ಮಲಪ್ಪುರಂ ಮೂಲದ 20 ವರ್ಷದ ಯುವಕ ಎಂದು ಗುರುತಿಸಲಾಗಿದೆ.

ಪೊಲೀಸರಿಗೇ ಗುದ್ದಿದ ಬೈಕ್ ಸವಾರ.
ಬೈಕ್ ಸವಾರನೊಬ್ಬ ಮದ್ಯಪಾನ ಮಾಡಿ ಟ್ರಾಫಿಕ್(Traffic Police) ಎಎಸ್‌ಐಗೆ ಗುದ್ದಿದ ಘಟನೆ ನಗರದ ಪೀಣ್ಯ ಫ್ಲೈ ಓವರ್ ಬಳಿ ನಡೆದಿದೆ. ಪ್ಲೈ ಓವರ್ ಕ್ಲೋಸ್ ಇದ್ದಿದ್ದು ತಿಳಿಯದೇ ವೇಗವಾಗಿ ಬಂದು ಕರ್ತವ್ಯದಲ್ಲಿದ್ದ ಎಎಸ್‌ಐ ರಾಜಶೇಖರಯ್ಯ ಅವರಿಗೆ ಗುದ್ದಿದ್ದಾನೆ.  ಅತನನ್ನ ನಿಲ್ಲಿಸಲು ಹೋದಾಗ ಎಎಸ್‌ಐ ರಾಜಶೇಖರಯ್ಯಗೆ ಬೈಕ್ ಡಿಕ್ಕಿ ಹೊಡೆದಿದೆ. ಎಎಸ್‌ಐ ರಾಜಶೇಖರಯ್ಯ ಅವರ ಕೈಗೆ ಗಂಭೀರವಾದ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ರಾಜಶೇಖರಯ್ಯಗೆ ಚಿಕಿತ್ಸೆ(Treatment) ಕೊಡಿಸಲಾಗುತ್ತಿದೆ. ಯಶವಂತಪುರ ಸಂಚಾರ ಪೊಲೀಸರು(Police) ಬೈಕ್ ಸವಾರನನ್ನ ವಶಕ್ಕೆ ಪಡೆದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ