ಸಿಧು ಮೂಸೇವಾಲಾ ಹತ್ಯೆ: ತನಿಖೆಯಲ್ಲಿ ಬಯಲಾಯ್ತು 'ಅಣ್ಣನ ಹತ್ಯೆ' ಸೇಡಿನ ವಿಚಾರ!

By Suvarna News  |  First Published Jun 4, 2022, 7:49 AM IST

* ಹತ್ಯೆಯಲ್ಲಿ ಅಣ್ಣನ ಗ್ಯಾಂಗ್‌ ಕೈವಾಡ, ನನ್ನ ಪಾತ್ರವಿಲ್ಲ: ಲಾರೆನ್ಸ್‌ ಬಿಷ್ಣೋಯ್‌

* ನನ್ನ ಅಣ್ಣನ ಹತ್ಯೆಗೆ ಪ್ರತೀಕಾರವಾಗಿ ಸಿಧು ಹತ್ಯೆ


ನವದೆಹಲಿ(ಜೂ.04): ಪಂಜಾಬಿ ಗಾಯಕ ಸಿಧು ಮೂಸೇವಾಲಾ ಹತ್ಯೆಯಲ್ಲಿ ತಮ್ಮದೇ ಗ್ಯಾಂಗ್‌ ಸದಸ್ಯರ ಕೈವಾಡವಿದೆ ಎಂದು ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ದೆಹಲಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

‘ನನ್ನ ಹಿರಿಯ ಸಹೋದರ ವಿಕ್ಕಿ ಮಿದ್ದುಖೇರಾನ ಗ್ಯಾಂಗ್‌, ಮೂಸೇವಾಲಾನ ಹತ್ಯೆ ಮಾಡಿದೆ. ಇದು ನನ್ನ ಕೆಲಸವಲ್ಲ. ನಾನು ಜೈಲಿನಲ್ಲಿದ್ದೆ. ಫೋನು ಕೂಡಾ ಬಳಕೆ ಮಾಡಲಿಲ್ಲ. ಹೀಗಾಗಿ, ಹತ್ಯೆಯಲ್ಲಿ ತನ್ನ ಕೈವಾಡವಿಲ್ಲ’ ಎಂದು ಬಿಷ್ಣೋಯ್‌ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

ಸಿಧು ಹಂತಕರ ಸಿಸಿಟೀವಿ ಪತ್ತೆ:

ಸಿಧು ಅವರ ಹತ್ಯೆಯ 4 ದಿನಗಳ ಮುಂಚಿತವಾಗಿ ಹಂತಕರು ಕಾರಿನಲ್ಲಿ ಹರಾರ‍ಯಣದ ಫತೇಹಾಬಾದ್‌ ಜಿಲ್ಲೆಯಿಂದ ಪಂಜಾಬಿನ ಮಾನ್ಸಾಗೆ ಬಂದ ಸಿಸಿಟೀವಿ ವಿಡಿಯೋ ಪತ್ತೆಯಾಗಿದೆ.

ಸಿಎಂ ಸಾಂತ್ವನ: ಈ ನಡುವೆ ಪಂಜಾಬ್‌ ಸಿಎಂ ಭಗವತ್‌ ಸಿಂಗ್‌ ಮಾನ್‌, ಶುಕ್ರವಾರ ಮೂಸೇವಾಲಾ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಮತ್ತೊಂದೆಡೆ ಸಿಧು ಹತ್ಯೆ ಕುರಿತು ಸಿಬಿಐ ತನಿಖೆಗೆ ಮನವಿ ಮಾಡಿ ಪಂಜಾಬ್‌ನ ಬಿಜೆಪಿ ನಾಯಕ ಜಗಜೀತ್‌ ಸಿಂಗ್‌ ಸುಪ್ರೀಂಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪಂಜಾಬ್‌: ಗಣ್ಯರ ಭದ್ರತೆ ರದ್ದು ಆದೇಶವೇ ರದ್ದು

424 ಗಣ್ಯರ ಭದ್ರತೆ ರದ್ದುಪಡಿಸಿದ್ದ ಪಂಜಾಬ್‌ನ ಆಪ್‌ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಎಲ್ಲ ಗಣ್ಯರಿಗೆ ಜೂ.7ರಿಂದ ಭದ್ರತೆ ನೀಡುವುದಾಗಿ ತಿಳಿಸಿದೆ.

ಭದ್ರತೆ ಹಿಂತೆಗೆತ ಬಳಿಕ ಗಾಯಕ ಸಿಧು ಮೂಸೇವಾಲಾ ಹತ್ಯೆಯಾಗಿದ್ದರು. ಸರ್ಕಾರ ಭದ್ರತೆ ಹಿಂಪಡೆದಿದ್ದೇ ಸಿಧು ಹತ್ಯೆಗೆ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸರ್ಕಾರ, ಭದ್ರತೆ ಮರಳಿಸುವ ನಿರ್ಧಾರ ಕೈಗೊಂಡಿದೆ.

‘ರಾಜ್ಯದಲ್ಲಿ 424 ಗಣ್ಯರಿಗೆ ನೀಡಿದ್ದ ಭದ್ರತೆಯನ್ನು ಮರಳಿ ನೀಡಲಾಗುವುದು’ ಎಂದು ಪಂಜಾಬ್‌ ಸರ್ಕಾರ ಗುರುವಾರ ಪಂಜಾಬ್‌-ಹರ್ಯಾಣ ಹೈಕೋರ್ಚ್‌ಗೆ ತಿಳಿಸಿದೆ. ಭದ್ರತೆ ರದ್ದು ಪ್ರಶ್ನಿಸಿ ಮಾಜಿ ಸಚಿವ ಒ.ಪಿ. ಸೋನಿ ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿದೆ.

ಈ ನಡುವೆ, ಭದ್ರತೆ ರದ್ದತಿಗೆ ಕಾರಣ ನೀಡಿರುವ ಸರ್ಕಾರ, ‘ಜೂ.6ರಂದು ನಡೆಯಲಿರುವ ಆಪರೇಶನ್‌ ಬ್ಲೂಸ್ಟಾರ್‌ ವಾರ್ಷಿಕೋತ್ಸವಕ್ಕೆ ಭದ್ರತಾ ಸಿಬ್ಬಂದಿಗಳ ಅವಶ್ಯಕತೆ ಇದ್ದ ಕಾರಣ ಭದ್ರತೆಯನ್ನು ವಾಪಸ್‌ ಪಡೆಯಲಾಗಿತ್ತು’ ಎಂದು ತಿಳಿಸಿದೆ.

click me!