ಬೆಂಗಳೂರು ರೇವಾ ಕಾಲೇಜು ವಿದ್ಯಾರ್ಥಿ ಕೊಲೆಗೆ ಬಿಗ್‌ ಟ್ವಿಸ್ಟ್‌: ಮೋಜಿಗಾಗಿ ಚಾಕು ಚುಚ್ಚಿದ ಆರೋಪಿ!

Published : May 02, 2023, 04:20 PM IST
ಬೆಂಗಳೂರು ರೇವಾ ಕಾಲೇಜು ವಿದ್ಯಾರ್ಥಿ ಕೊಲೆಗೆ ಬಿಗ್‌ ಟ್ವಿಸ್ಟ್‌: ಮೋಜಿಗಾಗಿ ಚಾಕು ಚುಚ್ಚಿದ ಆರೋಪಿ!

ಸಾರಾಂಶ

ಬೆಂಗಳೂರಿನ ಪ್ರತಿಷ್ಠಿತ ರೇವಾ ಕಾಲೇಜಿನ ಫೆಸ್ಟ್‌ನಲ್ಲಿ ಗುಜರಾತ್‌ ಮೂಲದ ಇಂಜನಿಯರಿಂಗ್‌ ವಿದ್ಯಾರ್ಥಿ ಕೊಲೆಗೆ ಮೂರು ದಿನಗಳ ನಂತರ ಭರ್ಜರಿ ಟ್ವಿಸ್ಟ್‌ ಸಿಕ್ಕಿದೆ.

ಬೆಂಗಳೂರು (ಮೇ 2): ಬೆಂಗಳೂರಿನ ಪ್ರತಿಷ್ಠಿತ ರೇವಾ ಕಾಲೇಜಿನ ಫೆಸ್ಟ್‌ನಲ್ಲಿ ಗುಜರಾತ್‌ ಮೂಲದ ಇಂಜನಿಯರಿಂಗ್‌ ವಿದ್ಯಾರ್ಥಿ ಕೊಲೆಗೆ ಮೂರು ದಿನಗಳ ನಂತರ ಭರ್ಜರಿ ಟ್ವಿಸ್ಟ್‌ ಸಿಕ್ಕಿದೆ. ಕಾಲೇಜಿನಲ್ಲಿ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಜಗಳದ ವೇಳೆ ಜೋಶ್‌ ಸಿಗುತ್ತಿಲ್ಲವೆಂದು, ಎದುರಾಳಿ ಯುವಕನ ಎದೆಗೆ ಚಾಕು ಚುಚ್ಚಲಾಗಿದೆ. ಆದರೆ, ರಕ್ತಸ್ರಾವಗೊಂಡ ವಿದ್ಯಾರ್ಥಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಏಪ್ರಿಲ್ 28ರ ರಾತ್ರಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ‘ರೇವೋತ್ಸವ’ ಹೆಸರಿನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಗಲಾಟೆಯಾಗಿ 4ನೇ ವರ್ಷ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ ಭಾಸ್ಕರ್‌ ಜಟ್ಟಿ (22) ಎಂಬಾತನ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಮತ್ತೊಬ್ಬ ವಿದ್ಯಾರ್ಥಿ ಶರತ್‌ ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯೊಬ್ಬನನ್ನು ಬಂಧಿಸಲಾಗಿತ್ತು.

ಬೆಂಗಳೂರು: ರೇವಾ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಯ ಭೀಕರ ಕೊಲೆ!

ಪೊಲೀಸ್‌ ವಿಚಾರಣೆ ವೇಳೆ ಬಿಗ್‌ ಟ್ವಿಸ್ಟ್‌ : ಇನ್ನು ಕಾಲೇಜು ಉತ್ಸವದಲ್ಲಿ ಭೀಕರ ಕೊಲೆಯಾದ ಕಾರಣ ಹುಡುಕಿ ಹೊರಟಾಗ ಹುಡುಗಿ ವಿಚಾರಕ್ಕೆ ಕೊಲೆಯಾಗಿದೆ ಎಂದು ಕಂಡುಬಂದಿತ್ತು. ಇನ್ನು ಕೊಲೆಯಾದ ವಿದ್ಯಾರ್ಥಿಯ ಸ್ನೇಹಿತ ಬೇರೊಂದು ಹುಡುಗಿಯೊಂದಿಗೆ ಮಾತನಾಡಿದ್ದ ಎಂಬ ವಿಚಾರಕ್ಕೆ ಆರಂಭವಾಗಿದ್ದ ಜಗಳ ನಡೆದಿತ್ತು. ಈ ವೇಳೆ ಸ್ನೇಹಿತನ ಪರವಹಿಸಿ ಭರತ್‌ ಜೆಟ್ಟಿ ಕೂಡ ಹೋಗಿದ್ದನು. ಆದರೆ, ಕಾಲೇಜು ಉತ್ಸವದ ವೇಳೆ ಎರಡೂ ಗುಂಪುಗಳಲ್ಲಿ ಜಗಳ ನಡೆದು ಕೊಲೆಯಾಗಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ಜಗಳ ಮಾಡುತ್ತಿದ್ದವರು ನಾವು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.  ನಂತರ ಮತ್ತಷ್ಟು ತನಿಖೆ ಆರಂಭಿಸಿದ ಪೊಲೀಸರಿಗೆ ವಿದ್ಯಾರ್ಥಿಯ ಕೊಲೆಯ ಬಗ್ಗೆ ಮತ್ತೊಂದು ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

ಮೋಜಿಗಾಗಿ ಚಾಕು ಚುಚ್ಚಿದ ಯುವಕ: ಕಾಲೇಜು ಉತ್ಸವದ ವೇಳೆ ಸಾವಿರಾರು ವಿದ್ಯಾರ್ಥಿಗಳು ಖುಷಿಯಲ್ಲಿ ತೇಲಾಡುತ್ತಿದ್ದರು. ಆದರೆ, ಇಲ್ಲಿ ಭರತ್‌ ಜೆಟ್ಟಿ ಸ್ನೇಹಿತ ಹಾಗೂ ಇನ್ನೊಂದು ಗುಂಪಿನ ನಡುವೆ ಜಗಳ ನಡೆಯುತ್ತಿತ್ತು. ಇದನ್ನು ಜಗಳದಲ್ಲಿ ಹೆಚ್ಚಿನ ಜೋಶ್‌ ಬರಬೇಕು ಎಂದು ಇಂಜಿನಿಯಿಂಗ್‌ ವಿದ್ಯಾರ್ಥಿ ಭರತ್‌ ಜೆಟ್ಟಿ ಎದೆಗೆ ಬಿಕಾಂ ಓದುತ್ತಿದ್ದ ಅನಿಲ್‌ ಎಂಬಾತ ಚಾಕುವನ್ನು ಚುಚ್ಚಿದ್ದಾನೆ. ಆದರೆ, ದುರಾದೃಷ್ಟ ಎಂಬಂತೆ ಯುವಕನ ಎದೆಗೆ ತೂರಿಸಿದ್ದ ಚಾಕು ಆತನ ಜೀವವನ್ನೇ ತೆಗೆದು ಹಾಕಿತ್ತು. ಈ ಘಟನೆಯ ಬೆನ್ನಲ್ಲೇ ಕೊಲೆ ಆರೋಪಿಗಳು ಕಾರಿನಲ್ಲಿ ಮೂಡಿಗೆರೆಗೆ ಪರಾರಿಯಾಗಿದ್ದು, ಅರಣ್ಯದ ತಗ್ಗು ಪ್ರದೇಶವೊಂದರಲ್ಲಿ ತಲೆಮರೆಸಿಕೊಂಡಿದ್ದರು.

ಸಂಭ್ರಮದ ವೇಳೆ ಸೂತಕ ವಾತಾವರಣ: ಪ್ರತಿಷ್ಠಿತ ಕಾಲೇಜು ಉತ್ಸವಗಳು ಸಾವಿರಾರು ವಿದ್ಯಾರ್ಥಿಗಳಿಗೆ ಖುಷಿ ಹಂಚುವ ಸಂಭ್ರಮವಾಗಿರುತ್ತದೆ. ಎಲ್ಲ ವಿದ್ಯಾರ್ಥಿಗಳ ಜೀವನದ ಬಹುಮುಖ್ಯ ಘಟನೆಗಳಲ್ಲಿ ಕಾಲೇಜು ಉತ್ಸವವೂ ಒಂದಾಗಿ ನಿಲ್ಲುತ್ತದೆ. ಆದರೆ, ರೇವಾ ಕಾಲೇಜಿನಲ್ಲಿ ನಡೆದ 2023ನೇ ಸಾಲಿನ ಉತ್ಸವದಲ್ಲಿ ಇನ್ನು ಇಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಲು ಕೆಲವೇ ತಿಂಗಳು ಬಾಕಿಯಿದ್ದ ವಿದ್ಯಾರ್ಥಿಯ ಜೀವನವೇ ದುರಂತ ಅಂತ್ಯವಾಗಿದೆ. ವಿದ್ಯಾರ್ಥಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಕೊಲೆ ಮಾಡಿದವರೂ ಕೂಡ ವಿದ್ಯಾರ್ಥಿಗಳಾಗಿದ್ದು, ಅವರ ಜೀವನವೂ ನಾಶವಾದಂತಾಗಿದೆ.

ಲವ್‌ ಫೇಲ್ಯೂರ್: ಪೊಲೀಸ್‌ ಕ್ವಾಟ್ರಸ್‌ ಮೇಲಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ!

ಮೂಡಿಗೆರೆ ಅರಣ್ಯದಲ್ಲಿ ಅವಿತಿದ್ದ ವಿದ್ಯಾರ್ಥಿ: ಇನ್ನು ಕಾಲೇಜು ಉತ್ಸವದಲ್ಲಿ ಮೋಜಿಗಾಗಿ ಚಾಕು ಚುಚ್ಚಿದ ಯುವಕನನ್ನು ಅನಿಲ್‌ (2ನೇ ವರ್ಷದ ಬಿಕಾಂ ವಿದ್ಯಾರ್ಥಿ) ಎಂದು ಗುರುತಿಸಲಾಗಿದೆ. ಗಲಾಟೆಯ ವೇಳೆ ಜೋಶ್ ಬರಬೇಕಿ ಎಂದು ಚಾಕು ಹಾಕಿದ್ದನು. ಪ್ರಮುಖ ಆರೋಪಿ ಅನಿಲ್ ಮತ್ತು ಗಲಾಟೆ ಮಾಡಿದ್ದ ಮತ್ತೊಬ್ಬ ಆರೋಪಿ ಶೃಂಗನನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರೂ ಮೂಡಿಗೆರೆಯ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿದ್ದರು. ಇವರ ಸ್ನೇಹಿತನ ಪೋನ್ ಲೋಕೇಷನ್ ಆಧರಿಸಿ ಬಾಗಲೂರು ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ