ಚುನಾವಣಾ ಕರ್ತವ್ಯಕ್ಕೆ ಹೊರಟಿದ್ದ ಬಸ್ ಪಲ್ಟಿ, ಹಲವರಿಗೆ ಗಾಯ!

By Gowthami K  |  First Published May 2, 2023, 3:47 PM IST

ಚುನಾವಣಾ‌ ಕರ್ತವ್ಯದ ಭಾಗವಾಗಿರುವ ತರಬೇತಿ ಕಾರ್ಯಕ್ಕೆ ಸಿಬ್ಬಂದಿ ಕರೆದೊಯ್ಯುತ್ತಿದ್ದ ಸಾರಿಗೆ ಸಂಸ್ಥೆಯ  ಪಲ್ಟಿಯಾಗಿ ಹಲವರು ಗಾಯಗೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.


ವಿಜಯಪುರ (ಮೇ .2) :‌ ಚುನಾವಣಾ‌ ಕರ್ತವ್ಯದ ಭಾಗವಾಗಿರುವ ತರಬೇತಿ ಕಾರ್ಯಕ್ಕೆ ಸಿಬ್ಬಂದಿ ಕರೆದೊಯ್ಯುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮುದ್ದೇಬಿಹಾಳ ತಾಲೂಕು ಹಳ್ಳೂರ ಕ್ರಾಸ್ ಹತ್ತಿರ ವಿಜಯಪುರ ಮುಖ್ಯ ರಸ್ತೆ ಪಕ್ಕದ ತಗ್ಗಿನಲ್ಲಿ ಪಲ್ಟಿಯಾಗಿ ಹಲವರು ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ 8-10 ಗಂಟೆಗೆ ನಡೆದಿದೆ. ಬಸ್ಸಿನ‌ ಎಕ್ಸೆಲ್ ತುಂಡಾಗಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.  ತಕ್ಷಣ ಸ್ಥಳಕ್ಕೆ ಅಂಬ್ಯೂಲೆನ್ಸ ಕರೆಸಲಾಗಿದ್ದು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಹಿಂದಿನ ಬಸ್ಸಿನಲ್ಲಿದ್ದವರು ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ. ಚುನಾವಣಾಧಿಕಾರಿ ಚಂದ್ರಕಾಂತ‌ ಪವಾರ, ತಹಶೀಲ್ದಾರ ರೇಖಾ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮುದ್ದೇಬಿಹಾಳದ ಸರ್ಕಾರಿ ಮತ್ತು ಖಾಸಗಿ ಅನುದಾನಿತ ನೌಕರರನ್ನು ಸಿಂದಗಿ ವಿಧಾನಸಭಾ‌ ಮತಕ್ಷೇತ್ರದ ತರಬೇತಿಗೆ ನಿಯೋಜಿಸಿದ್ದರಿಂದ‌ ಅವರನ್ನು ಬಸ್ ಮೂಲಕ ಸಿಂದಗಿಗೆ ಕರೆದೊಯ್ಯುವಾಗ ಈ ಘಟನೆ ನಡೆದಿದೆ.

Bengaluru: ಮಧ್ಯರಾತ್ರಿ ಮಹಿಳೆ-ಮಕ್ಕಳಿದ್ದ ಮನೆ ನುಗ್ಗಿದ ಆರೋಪ, ಇನ್ಸ್ಪೆಕ್ಟರ್ ವಿರುದ್ದ ಪೊಲೀಸ್

Tap to resize

Latest Videos

ಮಂಗಳೂರು: ಉಪ್ಪಿನಂಗಡಿ ಅರಫಾ ಶಾಲಾ ಬಳಿ ಬೈಕ್‌ ಮತ್ತು ಸ್ಕೂಟಿ ನಡುವೆ ಸಂಭಸಿದ ಡಿಕ್ಕಿ ಅಪಘಾತದಲ್ಲಿ ಬೈಕ್‌ ಸವಾರ ಮಹೇಶ್‌ (31) ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ಸಂಭಸಿದೆ. ಮಹೇಶ್‌ ಮೂಲತಃ ಮಂಡ್ಯದ ನಿವಾಸಿಯಾಗಿದ್ದು, ಜೆಸಿಬಿ ಆಪರೇಟರ್‌ ಆಗಿದ್ದಾರೆ. ನೆಲ್ಯಾಡಿಗೆ ಬೈಕ್‌ ನಲ್ಲಿ ಹೋಗುತ್ತಿದ್ದಾಗ ಸ್ಕೂಟಿ ಡಿಕ್ಕಿ ಹೊಡೆದು ಬೈಕ್‌ ಸವಾರ ರಸ್ತೆಗೆ ಎಸೆಯಲ್ಪಟ್ಟರು. ಈ ವೇಳೆ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಕಾರಿನಡಿಗೆ ಸಿಲುಕಿದ ಮಹೇಶ್‌ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಸ್ಕೂಟಿ ಸವಾರ ಬಿಜು ಕುಮಾರ್‌ (47) ಗಾಯಗೊಂಡಿದ್ದು , ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

CHEATING CASE: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಯುವರಾಜ್ ಸ್ವಾಮಿಯಿಂದ ಮತ್ತೊಂದು ಬೃಹತ್ ವಂಚನೆ!

ರಸ್ತೆ ಅಪಘಾತ: ಓರ್ವ ಸಾವು
ಮೂಲ್ಕಿ: ಬೈಕ್‌ಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬೈಕ್‌ ಸವಾರ ಮೃತಪಟ್ಟಘಟನೆ ನಡೆದಿದೆ. ಪಡುಪಣಂಬೂರು ನಿವಾಸಿ ತಂಗರಾಜ್‌ (49) ಮೃತಪಟ್ಟವರು. ಅವರು ಭಾನುವಾರ ಪಡುಪಣಂಬೂರು ಪೆಟ್ರೋಲ್‌ ಪಂಪ್‌ ಕಡೆಯಿಂದ ಬೈಕ್‌ನಲ್ಲಿ ಡಿವೈಡರ್‌ ಕಡೆಗೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಅವರನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!