Bengaluru: ಐಷಾರಾಮಿ ಜೀವನಕ್ಕೆ ಉದ್ಯೋಗವೇ ಬೇಡ, ಕಳ್ಳತನವೇ ಸಾಕು! ರಫೀಕ್‌ನ ಕಳ್ಳಾಟ ಬಯಲು

By Sathish Kumar KH  |  First Published Jul 23, 2023, 10:55 AM IST

ಬೆಂಗಳೂರಿನಲ್ಲಿ ಐಷಾರಾಮಿ ಜೀವನ ಮಾಡಲು ಯಾವುದೇ ಉದ್ಯೋಗ ಬೇಡವೆಂದು ಕಳ್ಳತನ ಮಾಡಿಕೊಂಡಿದ್ದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.


ಬೆಂಗಳೂರು (ಜು.23): ಪ್ರತಿನಿತ್ಯ ಕಷ್ಟಪಟ್ಟು ದುಡಿದರೂ ಬೆಂಗಳೂರಿನಲ್ಲಿ ನೆಮ್ಮದಿಯಾಗಿ ಜೀವನ ಮಾಡುವುದಕ್ಕೂ ಆಗುವುದಿಲ್ಲ. ಅಂತಃದ್ದರಲ್ಲಿ ಇಲ್ಲೊಬ್ಬ ಯುವಕ ಯಾವುದೇ ಉದ್ಯೋಗ ಮಾಡದಿದ್ದರೂ ಐಷಾರಾಮಿ ಜೀವನ ಮಾಡುತ್ತಿದ್ದಾನೆ. ಈತ ಐಷಾರಾಮಿ ಜೀವನಕ್ಕೆ ಕಳ್ಳತನ ಆಯ್ಕೆ ಮಾಡಿಕೊಂಡಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐಷಾರಾಮಿ ಜೀವನ ಮಾಡೋರಿಗಂತೂ ಕಡಿಮೆಯಿಲ್ಲ. ಕಷ್ಟಪಟ್ಟು ದುಡಿದರೂ ನೆಮ್ಮದಿಯಾಗಿ ಜೀವನ ಮಾಡಲು ಆಗುತ್ತಿಲ್ಲ ಎಂದು ಶೇ.80 ಜನರು ಕೊರಗುತ್ತಿದ್ದರೆ ಬಾಕಿ 20 ಪರ್ಸೆಂಟ್‌ ಜನರು ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಆದರೆ, ಇದರಲ್ಲಿ ಕೆಲವೊಂದಿಷ್ಟು ಜನರು ಯಾವುದೇ ಆದಾಯ ಇಲ್ಲದಿದ್ದರೂ ಮೋಸಮ ಕಳ್ಳತನ ಹಾಗೂ ವಂಚನೆ ಮಾಡಿಕೊಂಡೇ ಐಷಾರಾಮಿ ಜೀವನ ಮಾಡುವುದು ಕಂಡುಬರುತ್ತಿದೆ. ಅದರಲ್ಲಿ ಈ ಕಳ್ಳ ರಫೀಕ್‌ ಕೂಡ ಐಷಾರಾಮಿ ಜೀವನಕ್ಕೆ ಕಳ್ಳತನದ ಮಾರ್ಗವನ್ನು ಅನುಸರಿಸಿ ಈ ಬಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

Latest Videos

undefined

Bengaluru crime: ವಾಹನ ಸಮೇತ ಟೊಮೆಟೋ ದೋಚಿದ್ದ ದಂಪತಿ ಸೆರೆ

ಬೀಗ ಹಾಕಿದ ಮನೆಗಳೇ ಈತನ ಟಾರ್ಗೆಟ್‌:  ಐಷಾರಾಮಿ ಜೀವನಕ್ಕೆ ಕಳ್ಳತನವನ್ನೇ ವೃತ್ತಿ ಮಾಡಿಕೊಂಡ ವ್ಯಕ್ತಿ ರಫೀಕ್ (29) ಬಂಧಿತ ಆರೋಪಿ ಆಗಿದ್ದಾನೆ. ಮೂಲತಃ ತುಮಕೂರು ಮೂಲದ ಕಳ್ಳನಾಗಿದ್ದಾನೆ. ಈತ ಕಳೆದ ಒಂದು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನು. ಅಲ್ಲಿಂದ ಬಿಡುಗಡೆಯಾಗಿ ಬಂದ ಬಳಿಕವೂ ನೆಲಮಂಗಲ ಹಾಗೂ ರಾಜಾಜಿನಗರದಲ್ಲಿ ಕಳ್ಳತನ ಮಾಡಿದ್ದಾನೆ.  ಬೀಗ ಹಾಕಿದ ಮನೆಗಳು ಮತ್ತು ಅಂಗಡಿಗಳೇ ಈತನ ಟಾರ್ಗೆಟ್ ಆಗಿರುತ್ತಿದ್ದವು. ಇನ್ನು ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಂಗಡಿ ಕಳ್ಳತನ ಪ್ರಕರಣದ ತನಿಖೆ ಮಾಡಿದಾಗ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

400 ಗ್ರಾಂ ಚಿನ್ನ, 425 ಗ್ರಾಂ ಬೆಳ್ಳಿ ವಶ:  ಮತ್ತೊಂದೆಡೆ, ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ಮಾಡಿದ ಪ್ರಕರಣದ ತನಿಖೆ ವೇಳೆ ಆರೋಪಿಯನ್ನು ವಿಚಾರಣೆ ಮಾಡಿದಾಗ ನೆಲಮಂಗಲದ ಮೀನಿನ್ ಟೆಂಡರ್ ಮಾಡುವ ವ್ಯಕ್ತಿ ಮನೆಯ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಎರಡು ಪ್ರಕರಣ ಸಂಬಂಧ 22 ಲಕ್ಷ ಮೌಲ್ಯದ 409 ಗ್ರಾಂ ಚಿನ್ನ, 425 ಗ್ರಾಂ ಬೆಳ್ಳಿ, 189 ಗ್ರಾಂ ನಕಲಿ ಚಿನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಕಳ್ಳತನವನ್ನೇ ವೃತ್ತಿನ್ನಾಗಿ ಮಾಡಿಕೊಂಡಿರುವ ಆರೋಪಿ ರಫೀಕ್‌ ಬೆಂಗಳೂರು ಸೇರಿದಂತೆ ಹಲವು ಕಡೆ ಕಳ್ಳತನ ಕೃತ್ಯ ಎಸಗಿದ್ದಾನೆ. 

ಮಣಿಪುರ ಯುವತಿಗೆ ರ‍್ಯಾಪಿಡೋ ಬೈಕ್‌ ಚಾಲಕನಿಂದ ಆಶ್ಲೀಲ ಮೆಸೇಜ್‌: ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಆರೋಪ

ರಾಜ್ಯಾದ್ಯಂತ 20 ಪ್ರಕರಣದಲ್ಲಿ ಆರೋಪಿ: ಇನ್ನು ಆರೋಪಿ ರಫೀಕ್‌ ಬೆಂಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿದಂತೆ ವಿವಿಧೆಡೆ ಬರೊಬ್ಬರಿ 20 ಪ್ರಕರಣಗಳಲ್ಲಿ ಜೈಲು ಸೇರಿದ್ದನು. ಆದರೂ, ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಬಳಿಕ ಪುನಃ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡು ಐಷಾರಾಮಿ ಜೀವನ ಮಾಡಲು ಮುಂದಾಗುತ್ತಿದ್ದನ. ತುಮಕೂರಿನಲ್ಲಿ ಕಳೆದ ತಿಂಗಳಷ್ಟೇ ಜೈಲಿನಿಂದ ಹೊರಬಂದಿದ್ದ ಆರೋಪಿ, ಈಗ ಬೆಂಗಳೂರಿನಲ್ಲಿ ಮತ್ತೊಮ್ಮೆ ಕಳ್ಳತನ ಕೃತ್ಯ ಎಸಗಿ ರಾಜಾಜಿನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇನ್ನಷ್ಟು ಪ್ರಕರಣಗಳು ಎಸಗಿರುವ ಅನುಮಾನವಿದ್ದು, ಆತನನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

click me!