ಹುನ್ನೂರು ವರ್ತಕನ ಹತ್ಯೆಗೆ ಸಂಚು, ಐವರು ಸುಪಾರಿ ಹಂತಕರ ಬಂಧ‌ನ

By Suvarna News  |  First Published Jul 23, 2023, 9:26 AM IST

ಹುನ್ನೂರು ಗ್ರಾಮದ ಪ್ರಮುಖ ವರ್ತಕರೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ 5 ಜನ ಸುಪಾರಿ ಕಿಲ್ಲರ್‌ಗಳನ್ನು ಜಮಖಂಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.


ಬಾಗಲಕೋಟೆ (ಜು.23): ಹುನ್ನೂರು ಗ್ರಾಮದ ಪ್ರಮುಖ ವರ್ತಕರೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ 5 ಜನ ಸುಪಾರಿ ಕಿಲ್ಲರ್‌ಗಳನ್ನು ಜಮಖಂಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕಣದಾಳ ಗ್ರಾಮದ ಕಿರಣ ಭೀಮಪ್ಪ ಚಿಗರಿ, ಬಸ್ತವಾಡದ ಸಿದ್ದಪ್ಪ ಶಿವಪ್ಪ ಲಟ್ಟೆ, ಕಣದಾಳದ ಪರಶುರಾಮ ಭರಮಪ್ಪ ಕರಿಹೊಳೆ ಹಾಗೂ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಸಿದ್ದಾರ್ಥ ಶಿವಾನಂದ ಹಿರೇಮಠ, ರಬಕವಿ-ಬನಹಟ್ಟಿತಾಲೂಕಿನ ಕುಲಹಳ್ಳಿ ಗ್ರಾಮದ ದಾನೇಶ ಮಾರುತಿ ಭಜಂತ್ರಿ ಬಂಧಿತ ಆರೋಪಿಗಳು.

Tap to resize

Latest Videos

undefined

ಮಣಿಪುರ ಯುವತಿಗೆ ರ‍್ಯಾಪಿಡೋ ಬೈಕ್‌ ಚಾಲಕನಿಂದ ಆಶ್ಲೀಲ ಮೆಸೇಜ್‌: ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಆರೋಪ

ಜಮಖಂಡಿ ನಗರದ ರುದ್ರಾಸ್ವಾಮಿ ಪೇಠ ಗಲ್ಲಿಯ ಸಂಜು ವಿಠ್ಠಲ ಕಡಕೋಳ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಉಳಿದಂತೆ ಜಮಖಂಡಿ ಗ್ರಾಮೀಣ ಪೊಲೀಸರು ಈ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಸುಪಾರಿ ಕಿಲ್ಲರ್‌ಗಳಿಂದ ಪಿಸ್ತೂಲ್‌, ಲಾಂಗ್‌ ಹಾಗೂ . 5335 ನಗದು ವಶಕ್ಕೆ ಪಡೆಯಲಾಗಿದೆ ಡಿವೈಎಸ್ಪಿ ತಿಳಿಸಿದ್ದಾರೆ.

ತಾಲೂಕಿನ ಮುತ್ತೂರ ಪುನರ್ವಸತಿ ಕೇಂದ್ರದಲ್ಲಿ ಆರು ಜನರು ಸೇರಿ ಕೊಲೆಗೆ ಸಂಚು ರೂಪಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ವರ್ತಕರೊಬ್ಬರನ್ನು ಕೊಲೆ ಮಾಡಲು ಉದ್ದೇಶಿಸಿದ್ದರ ಬಗ್ಗೆ ಆರೋಪಿತರು ಬಾಯಿ ಬಿಟ್ಟಿದ್ದಾರೆಂದು ಡಿವೈಎಸ್ಪಿ ಶಾಂತವೀರ ಮಾಹಿತಿ ನೀಡಿದರು.

ಮಣಿಪಾಲದಲ್ಲಿ ವೈಶ್ಯಾವಾಟಿಕೆ ಆರೋಪಿಗಳ ಬಂಧನ ಮಹಿಳೆಯರ ರಕ್ಷಣೆ

ಗ್ರಾಮೀಣ ಠಾಣೆ ಎಸೈ ಮಹೇಶ ಸಂಕ ಹಾಗೂ ಸಿಬ್ಬಂದಿ ಕೆ.ಪಿ.ಸವದತ್ತಿ, ಬಿ.ಎಸ್‌.ಬಿರಾದಾರ, ಎಸ್‌.ಎಸ್‌.ನಾಯಕ, ಬಾಬು ಗುಳಬಾಳ, ಬಿ.ಪಿ.ಕುಸನಾಳ, ಎಲ್‌.ಎಚ್‌.ಲಾಯಣ್ಣವರ, ಎಸ್‌.ಜಿ.ಸಾಲಮನಿ, ಎಸ್‌.ಎಸ್‌.ಹಿರೇಮಠ, ವಿ.ಎಸ್‌.ಜಾಧವ, ಎಸ್‌.ಎಂ.ಬಡಿಗೇರ, ಪಿ.ಎಂ.ಹೊಸಮನಿ, ಎಸ್‌.ಎಸ್‌.ಜಕಾತಿ, ಆರ್‌.ಎಚ್‌.ಪೂಜಾರಿ, ಬಿ.ಬಿ.ವನಜೋಳ, ಎಂ.ಎಸ್‌.ಸನದಿ, ಎನ್‌.ಬಿ.ಬಿಸಲದಿನ್ನಿ, ಕೆಲೂಡಿ, ಗನಸೈದ ನಡಗಡ್ಡಿ, ಬಸವರಾಜ ಜಗಲಿ, ಚಂದ್ರಶೇಖರ ಜಿಟ್ಟೆಪ್ಪಗೋಳ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಎಸ್ಪಿ ಬಹುಮಾನ ಘೋಷಿಸಿದ್ದಾರೆ.

click me!