ಬೆಂಗಳೂರು ಮತ್ತೊಬ್ಬ ಟೆಕ್ಕಿ ಸಾವು; ಮಾವನ ಕಾಮದಾಟಕ್ಕೆ ಬಲಿಯಾದ ಮದುವೆಯಾಗದ ಸೊಸೆ!

By Sathish Kumar KH  |  First Published Jan 16, 2025, 4:02 PM IST

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಮಾವನ ಲೈಂಗಿಕ ಕಿರುಕುಳ ತಾಳಲಾರದೆ ಹೋಟೆಲ್‌ನಲ್ಲಿ ಬೆಂಕಿ ಹಚ್ಚಿಕೊಂಡಿದ್ದಾಳೆ. ಮಾವ ಖಾಸಗಿ ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದ ಮಾವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಬೆಂಗಳೂರು (ಜ.16): ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಮಾವನ ಲೈಂಗಿಕ ಕಿರುಕುಳ ತಾಳಲಾರದೆ ಹೋಟೆಲ್‌ನಲ್ಲಿ ಬೆಂಕಿ ಹಚ್ಚಿಕೊಂಡಿದ್ದಾಳೆ. ಮಾವ ಖಾಸಗಿ ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದ ಮಾವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ಇಟ್ಟುಕೊಂಡು ಸ್ವತಃ ಮಾವನೇ ಸೊಸೆಯನ್ನು ಮಂಚಕ್ಕೆ ಕರೆದಿದ್ದಾರೆ. ಅವಳ ಖಾಸಗಿ ವಿಡಿಯೋ ತೋರಿಸಿ ವಿಕೃತಿಯಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಇನ್ನು ನೀನು ದೈಹಿಕವಾಗಿ ತನಗೆ ಸ್ಪಂದಿಸದಿದ್ದರೆ ನಿನ್ನ ತಂದೆ, ತಾಯಿಗೆ ಖಾಸಗಿ ವೀಡಿಯೋ ಕಳುಹಿಸಿದುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ, ಯುವತಿ ಮಾವನ ಆಸೆಗಳನ್ನು ಒಪ್ಪಿಕೊಳ್ಳದೇ, ವಿರೋಧಿಸಲೂ ಆಗದೇ ತಟಸ್ಥವಾಗಿದ್ದಾಳೆ. ಮೌನಂ ಸಮ್ಮತಿ ಲಕ್ಷಣಂ ಎಂದು ತಿಳಿದ ಮಾವ ಸೊಸೆಯನ್ನು ಅನುಭವಿಸಬೇಕು ಎಂದು ಹೋಟೆಲ್‌ ಒಂದರಲ್ಲಿ ರೂಮ್ ಬುಕ್ ಮಾಡಿ ನೀನು ಇಲ್ಲಿಗೆ ಬಾ.., ಬರಲೇಬೇಕು ಎಂದು ಕಂಡೀಷನ್ ಹಾಕಿದ್ದಾರೆ. ಆದರೆ, ಸ್ವತಃ ಮಾವನಿಂದಲೇ ಲೈಂಗಿಕ ಕಿರುಕುಳ ಉಂಟಾಗುವುದನ್ನು ತಾಳದ ಸೊಸೆ ಮಾವ ಕರೆದ ಹೋಟೆಲ್ಲಿಗೆ ಹೋಗಿ ಆತನ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟಿದ್ದಾಳೆ. ಈ ಘನಘೋರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Tap to resize

Latest Videos

ಸುಹಾಸಿ ಸಿಂಗ್ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವತಿ. ಜನವರಿ 12 ರ ಸಂಜೆ 7.30 ಸುಮಾರಿಗೆ ಘಟನೆ ನಡೆದಿದೆ. ಮೃತ ಯುವತಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆಗೆ ತನ್ನ ಸೋದರತ್ತೆಯ ಗಂಡ ಅಂದರೆ ಮಾವ ಪ್ರವೀಣ್ ಸಿಂಗ್, ಲೈಂಗಿಕ ಕಿರುಕುಳ ನೀಡಿ ಸಾವಿಗೆ ಪ್ರಚೋದನೆ ನೀಡಿದ್ದಾರೆ ಎಂದು ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆಗೆ ಕುರಿತಂತೆ ಹೆಚ್ಎಎಲ್ ಪೊಲೀಸರಿಂದ ಆರೋಪಿ ಪ್ರವೀಣ್ ಸಿಂಗ್ ಬಂಧನವಾಗಿದೆ. ಪ್ರವೀಣ್ ಸಿಂಗ್ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು.

ಪ್ರವೀಣ್ ಸಿಂಗ್ ಕೆ.ಆರ್.ಪುರಂ ಆಲ್ಫಾ ಗಾರ್ಡನ್‌ನಲ್ಲಿರುವ ಎಸ್‌ವಿಎಸ್ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದನು. ಈತ ಸಂಬಂಧಿ ಆದ್ದರಿಂದ ಸೋದರತ್ತೆಯ ಮನೆಯಲ್ಲಿಯೇ ಉಳಿದುಕೊಂಡಿದ್ದಳು. ಆದರೆ ಅತ್ತೆಯ ಗಂಡ ಪ್ರವೀಣ್ ಸಿಂಗ್ ಸೊಸೆ ಸುಹಾಸಿ ಸಿಂಗ್ ಮೇಲೆ ಕಣ್ಣು ಹಾಕಿದ್ದನು. ರಜಾ ದಿನಗಳಲ್ಲಿ ಸಾಮಾನ್ಯವಾಗಿ ಕುಟುಂಬದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದ ಸುಹಾಸಿ ಸಿಂಗ್ ರಜಾ ದಿನಗಳಲ್ಲಿ  ಪ್ರವೀಣ್ ಸಿಂಗ್ ಕಟುಂಬದ ಜೊತೆಗೆ ಪ್ರವಾಸಕ್ಕೂ ಹೋಗುತ್ತಿದ್ದಳು. ನಂತರ, ಮಾವನ ಜೊತೆಗೆ ಸಲುಗೆ ಹೆಚ್ಚಾಗಿ ಒಬ್ಬರೂ ಖಾಸಗಿಯಾಗಿ ಅತ್ತೆಗೆ ಗೊತ್ತಿಲ್ಲದಂತೆ ಪ್ರವಾಸಕ್ಕೆ ಹೋಗಿ ಬರುತ್ತಿದ್ದರು. ಆಗ ಮಾವನೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾಳೆ. ಆಗ ಮಾವ ಪ್ರವೀಣ್ ತಮ್ಮಿಬ್ಬರ ಖಾಸಗಿ ಕ್ಷಣಗಳ ವಿಡಿಯೋವನ್ನು ಮಾಡಿ ಇಟ್ಟಿಕೊಂಡಿದ್ದಾನೆ.

ಇದನ್ನೂ ಓದಿ: ಇನ್​​ಸ್ಟಾಗ್ರಾಂ ಸ್ನೇಹಿತೆ ಮೇಲೆ ಸಾಮೂಹಿಕ ಬಲಾತ್ಕಾರ​​: ಪಿಯು ವಿದ್ಯಾರ್ಥಿನಿ ಮೇಲೆ ಇಬ್ಬರು ಕಾಮುಕರ ಅಟ್ಟಹಾಸ

ಮದುವೆಯಾಗಿರುವ ಮಾವನ ಜೊತೆಗೆ ಅದರಲ್ಲಿಯೂ ಸೋದರತ್ತೆಯ ಗಂಡನೊಂದಿಗೆ ತನ್ನ ಇಡೀ ಜೀವನ ಕಳೆಯುವುದು ಸಾಧ್ಯವಿಲ್ಲವೆಂದು ಇತ್ತೀಚೆಗೆ ಸುಹಾಸಿ ಸಿಂಗ್, ಪ್ರವೀಣ್‌ ಸಿಂಗ್‌ನಿಂದ ಅಂತರ ಕಾಯ್ದಯಕೊಂಡು ತನ್ನ ಮದುವೆ ಹಾಗೂ ಭವಿಷ್ಯಕ್ಕಾಗಿ ಮತ್ತೊಬ್ಬ ಯುವಕನ ಜೊತೆಗೆ ಸಲುಗೆ ಬೆಳಸಿಕೊಂಡಿದ್ದಾಳೆ. ನಂತರ, ಸುಹಾಸಿ ತನ್ನೊಂದಿಗೆ ಏಕೆ ಅಂತರ ಕಾಯ್ದುಕೊಂಡಿದ್ದಾಳೆ ಎಂದು ಪ್ರಶ್ನೆ ಮಾಡಿದರೂ ಉತ್ತರ ಕೊಡುತ್ತಿರಲಿಲ್ಲ. ಆತ ಎಲ್ಲಿಗೆ ಕರೆದರೂ ಈಕೆ ನಿರಾಕರಿಸಿದ್ದಾಳೆ. ಆಗ ಆಕೆಯ ಫೋನಿನಲ್ಲಿ ವಾಟ್ಸಾಪ್‌ ಚಾಟ್‌ಗಳನ್ನು ನೋಡಿದಾಗ ಬೇರೊಬ್ಬ ಯುವಕನೊಂದಿಗೆ ಆತ್ಮೀಯವಾಗಿ ಇರುವುದು ತಿಳಿಸಿದೆ. ನಂತರ ಸುಹಾಸಿ ಸಿಂಗ್‌ಳನ್ನು ಪುನಃ ಪ್ರವಾಸಕ್ಕೆ ಹೋಗಲು, ದೈಹಿಕ ಸಂಪರ್ಕ ಬೆಳೆಸಲು ಕರೆದಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ನಿನ್ನ ಖಾಸಗಿ ವಿಡಿಯೋಗಳನ್ನು ನಿಮ್ಮ ತಂದೆ-ತಾಯಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೇ, ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟು ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಇದರಿಂದ ಯುವತಿ ಸುಹಾಸಿ ಸಿಂಗ್ ರೋಹಿ ಹೋಗಿದ್ದಳು. 

ಇದೇ ಜ.12ರಂದು ಪ್ರವೀಣ್‌ ಸಿಂಗ್ ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ ರಾಧ ಹೋಮ್‌ಟೆಲ್ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ, ಅಲ್ಲಿದೆ ಸುಹಾಸಿ ಸಿಂಗ್‌ಗೆ ಬರುವಂತೆ ಹೇಳಿದ್ದನು. ಮಾವ ಪ್ರವೀಣ್ ಸಿಂಗ್ ಕಾಟ ತಾಳಲಾರದೇ ಸುಹಾಸಿ ಸಿಂಗ್ ತಾನು ಬುರುವುದಾಗಿ ಹೇಳಿದ್ದಾಳೆ. ಅಲ್ಲಿಗೆ ಹೋಗುವಾಗ ಪೆಟ್ರೊಲ್ ತೆಗೆದುಕೊಂಡು ಹೋಗಿದ್ದಾಳೆ. ಪ್ರವೀಣ್ ಬುಕ್ ಮಾಡಿದ್ದ ಹೋಟೆಲ್ ರೂಮಿನೊಳಗೆ ಹೋದಾಗ ಎಂದಿನಂತೆ ಮಾವ ಪ್ರವೀಣ್ ದೈಹಿಕ ಸಂಪರ್ಕ ಬೆಳೆಸುವುದಕ್ಕೆ ಆಕೆಯನ್ನು ಪೀಡಿಸಿ ಎಳೆದಾಡಿದ್ದಾನೆ. ಆಗಲೂ ಯುವತಿ ಇನ್ನುಮುಂದೆ ತನ್ನ ಸಹವಾಸಕ್ಕೆ ಬರಬೇಡಿ ಎಂದು ಬೇಡಿಕೊಂಡಿದ್ದಾಳೆ. ಆಗಲೂ, ಪ್ರವೀಣ್‌ ತನ್ನೊಂದಿಗೆ ಖಾಸಗಿ ಕ್ಷಣದಲ್ಲಿದ್ದ ವಿಡಿಯೋಗಳನ್ನು ಆಕೆಗೆ ತೋರಿಸಿ ಬೆದರಿಸಿ, ಈಗ ನನ್ನೊಂದಿಗೆ ಸಹಕರಿಸದಿದ್ದರೆ ನಿನ್ನ ತಾಯಿಗೆ ವಿಡಿಯೋ ಕಳಿಸುವುದಾಗಿ ಹೇಳಿದ್ದಾನೆ. ಇದರಿಂದ ತೀವ್ರ ಕುಪಿತಳಾದ ಸುಹಾಸಿ ಸಿಂಗ್, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.

ಇದನ್ನೂ ಓದಿ: ಮದುವೆಗೆ 3 ದಿನಗಳಿರುವಾಗ ಮಗಳಿಗೆ ಪೊಲೀಸರ ಮುಂದೆಯೇ ಗುಂಡಿಕ್ಕಿ ಕೊಂದ ಅಪ್ಪ

ಯುವತಿ ಸುಹಾಸಿ ಸಿಂಗ್ ಬೆಂಕಿ‌ ಹಚ್ಚಿಕೊಳ್ಳುತ್ತಿದ್ದಂತೆ ಪ್ರವೀಣ್ ಸಿಂಗ್ ಆರಿಸಲು ಪ್ರಯತ್ನಿಸಿದ್ದಾನೆ. ತಕ್ಷಣ ಸ್ನಾನದ ಕೊಣೆಗೆ ಎತ್ತಿಕೊಂಡು ಹೋಗಿ ಶವರ್ ಆನ್ ಮಾಡಿ ಬೆಂಕಿ ನಂದಿಸಿದ್ದಾನೆ. ಅಷ್ಟರಲ್ಲಾಗಲೇ ಯುವತಿ ದೇಹ ಸಂಪೂರ್ಣ ಸುಟ್ಟು ಹೋಗಿತ್ತು. ಈ ಘಟನೆ ವೇಳೆ ಪ್ರವೀಣ್ ಸಿಂಗ್ ಕೈಗಳಿಗೂ ಸುಟ್ಟ ಗಾಯಗಳಾಗಿವೆ. ನಂತರ ಹೋಟೆಲ್ ಸಿಬ್ಬಂದಿ ಸಹಾಯದೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ಸುಹಾಸಿ ಸಿಂಗ್‌ಳನ್ನು ರವಾನೆ ಮಾಡಿದ್ದಾರೆ. ಆದರೆ, ಚಿಖತ್ಸೆ ಫಲಕಾರಿಯಾಗದೇ ಜ.12 ರಂದು ರಾತ್ರಿ 10 ಗಂಟೆಗೆ ಯುವತಿ ಸಾವನ್ನಪ್ಪಿದ್ದಾಳೆ. ಈ ಘಟನೆ ಸಂಬಂಧ ಹೆಚ್ಎಎಲ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ಆರೋಪಿ ಪ್ರವೀಣ್ ಸಿಂಗ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

click me!