
ಕಲಬುರಗಿ (ಜ.15): ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿದ್ದ ಖಾತೆಗೆ ಹಂಚಿಕೆ ಮಾಡಲಾಗಿದ್ದ ಬಹುಕೋಟಿ ಡಿ.ಡಿ.ಗಳನ್ನು ಬ್ಯಾಂಕ್‌ಗೆ ಹಾಕಿ, ಪಾಲಿಕೆಯ ಚೆಕ್‌ಗಳನ್ನೇ ಬಳಸಿ ಅದರ ಮೇಲೆ ಆಯುಕ್ತರ ನಕಲಿ ಸಹಿ ಮಾಡಿ 36,56,640 ರುಪಾಯಿ ಹಣ ದುರ್ಬಳಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಪಾಲಿಕೆಯ ಆಯುಕ್ತರ ಆಪ್ತ ಸಹಾಯಕ (ಪಿಎ) ಸೇರಿದಂತೆ ಪಾಲಿಕೆಯ ಮೂವರು ಸಿಬ್ಬಂದಿ ಹಾಗೂ ಪಾಲಿಕೆ ಮಾಜಿ ಕಾರ್ಪೋರೇಟರ್ ಪುತ್ರ ಸೇರಿದಂತೆ ಹೊರಗಿನ ಇಬ್ಬರು ಸೇರಿದಂತೆ ಒಟ್ಟು ಐವರನ್ನು ಬಂಧಿಸಿದ್ದಾರೆ.
ಈ ಕುರಿತಂತೆ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಪೊಲೀಸ್ ಕಮೀಷನರ್ ಡಾ. ಶರಣಪ್ಪ ಢಗೆಯವರು, ಪಾಲಿಕೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿರುವ, ಸದ್ಯ ಆಯುಕ್ತರ ಆಪ್ತ ಸಹಾಯಕನಾಗಿರುವ ಮಿಲ್ಲತ್ ನಗರದ ಮಹಮ್ಮದ್ ನಯಿಮುದ್ದೀನ್ ಸರಗಿ, ಪಾಲಿಕೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಇಸ್ಲಾಮಾಬಾದ್ ಕಾಲೋನಿಯ ನಸೀರ್ ಅಹ್ಮದ್, ಪಾಲಿಕೆಯಲ್ಲಿ ಸೀನಿಯರ್ ಪ್ರೋಗ್ರಾಮರ್ ಆಗಿದ್ದ ಎಸ್.ಕೆ ಮಿಲ್ ನಗರದ ಮೊಹಮ್ಮದ್ ಅಬ್ದುಲ್ ರೆಹಮಾನ್ ಹಾಗೂ ಬಿಲಾಲಾಬಾದ್ ಕಾಲೋನಿಯ ವಾಜೀದ್ ಜಬ್ಬಾರ್, ಅಹ್ಮದ್ ಕಾಲೋನಿಯ ಮಿರ್ಜಾ ಆರಿಫ್ ಬೇಗ್ ಇವರನ್ನು ಬಂಧಿಸಲಾಗಿದೆ. ಬಂಧಿತರಿಂದ 30,75,000 ರುಪಾಯಿ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
75% ಲಾಭದ ಆಸೆ ತೋರಿಸಿ ₹2 ಕೋಟಿ ಪಡೆದು ವಂಚನೆ: ಮಲೇಷಿಯಾದ ಕಂಪನಿಯಲ್ಲಿ ₹2 ಕೋಟಿ ಹೂಡಿಕೆ ಮಾಡಿದರೆ ಒಂದೇ ದಿನದಲ್ಲಿ ಲಾಭಾಂಶ ಸೇರಿಸಿ ₹3.50 ಕೋಟಿ ಕೊಡುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ₹2 ಕೋಟಿ ಪಡೆದು ವಂಚಿಸಿದ್ದ ಏಳು ಮಂದಿ ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಶ್ಯಾಮ್ ಥಾಮಸ್ (59), ಜೋಶ್ ಎಂ. ಕುರುವಿಲ್ಲಾ (62), ಜೆ.ಪಿ.ನಗರದ ಜೀನ್ ಕಮಲ್ (45), ಊರ್ವಶಿ ಗೋಸ್ವಾಮಿ ಅಲಿಯಾಸ್ ಸೋನು (34), ಕೋರಮಂಗಲದ ಜಾಫರ್ ಸಾದಿಕ್ (39), ವಿದ್ಯಾರಣ್ಯಪುರದ ಅಮಿತ್ ಮಹೇಶ್ ಗಿಡ್ವಾನಿ (40) ಮತ್ತು ಮಹಾರಾಷ್ಟ್ರದ ವಿಜಯ್ ವಾಮನ್ ಚಿಪ್ಲೂಂಕರ್ (45) ಬಂಧಿತರು. ಆರೋಪಿಗಳಿಂದ 5 ಮೊಬೈಲ್, ₹44 ಲಕ್ಷ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ದೆಹಲಿ, ಗುಜರಾತ್ ಮೂಲದ ಐವರು ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹವಾಲ ದಂಧೆ ಬಯಲು:
ಬಂಧಿತ ಆರೋಪಿಗಳು ಹವಾಲ ದಂಧೆಯಲ್ಲಿ ತೊಡಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳಿಂದ ಹವಾಲ ದಂಧೆಗೆ ಬಳಸಿದ್ದ 10 ರು. ಮುಖ ಬೆಲೆಯ ಎರಡು ನೋಟುಗಳು ಹಾಗೂ ಹವಾಲ ವ್ಯವಹಾರಕ್ಕೆ ಬಳಸಿದ್ದ ಒಂದು ಡೈರಿ ಜಪ್ತಿ ಮಾಡಲಾಗಿದೆ. ಆರೋಪಿಗಳು ವಂಚನೆ ಸಲುವಾಗಿಯೇ ಕಬ್ಬನ್ ಪೇಟೆಯಲ್ಲಿ ಕಚೇರಿ ತೆರೆದಿದ್ದರು. ಕಟ್ಟಡದ ಮಾಲೀಕರಿಗೆ ನಕಲಿ ಆಧಾರ್ ಕಾರ್ಡ್ ಕೊಟ್ಟು ಕಚೇರಿ ಬಾಡಿಗೆಗೆ ಪಡೆದಿದ್ದರು. ಮುಂಗಡವಾಗಿ 1 ಲಕ್ಷ ರು. ನೀಡಿದ್ದರು. ಕಚೇರಿ ಪರಿಶೀಲನೆ ವೇಳೆ ಕೆಲವು ದಾಖಲೆಗಳು ಹಾಗೂ ನೋಟು ಎಣಿಸುವ ಯಂತ್ರ ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗರ್ಲ್‌ಫ್ರೆಂಡ್‌ನ ಗಂಡ, ತಂದೆಯನ್ನು ಕೊಲ್ಲಲು ಗ್ಯಾಂಗ್‌ಗೆ ಸುಪಾರಿ ಕೊಟ್ಟಿದ್ದ ವಕೀಲ, ಆದ್ರೆ ಕೊಲೆಯಾದವನೇ ಬೇರೆ!
ಸುಂಕದಕಟ್ಟೆಯ ಶ್ರೀನಿವಾಸನಗರದ ನಿವಾಸಿಯಾದ ದೂರುದಾರನಿಗೆ ಕಳೆದ ಡಿಸೆಂಬರ್‌ನಲ್ಲಿ ಪರಿಚಿತರಾಗಿದ್ದ ಆರೋಪಿಗಳು ಮಲೇಷಿಯಾದ ‘ಮೇದಾ ಕ್ಯಾಪಿಟಲ್ ಬರ್‌ಹ್ಯಾಡ್’ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಹೇಳಿದ್ದರು. ದೂರುದಾರ ಎರಡು ಕೋಟಿ ರು. ಹಣವನ್ನು ಕಬ್ಬನ್ ಪೇಟೆಯ ಆರೋಪಿಗಳ ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಕಂಪನಿಯ ಖಾತೆಯಿಂದ ದೂರುದಾರರ ಖಾತೆಗೆ 9,780 ರು. ಹಣವನ್ನು ವರ್ಗಾವಣೆ ಮಾಡಿ ಉಳಿದ ಹಣವನ್ನು ಶೀಘ್ರ ಖಾತೆಗೆ ವರ್ಗಾಯಿಸುವುದಾಗಿ ಹೇಳಿದ್ದಾರೆ. ಎರಡು ಕೋಟಿ ರು. ಹಣವನ್ನು ಬೇರೆ ಕಚೇರಿಯ ಲಾಕರ್‌ನಲ್ಲಿ ಸುರಕ್ಷಿತವಾಗಿ ಇರಿಸುವುದಾಗಿ ತೆರಳಿದ್ದಾರೆ. ಬಳಿಕ ಆರೋಪಿಗಳು ಯಾವುದೇ ಹಣ ಅಥವಾ ಲಾಭಾಂಶವನ್ನು ವಾಪಾಸ್ ನೀಡಿದೆ ವಂಚಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ