'ಭೂತ'ದ​ ಹೆಸ್ರು ಸಂಜು ಅಲ್ಲ ಸಲೀಂ: ಗರ್ಭಿಣಿಯಾದ ರೀಲ್ಸ್​ ರಾಣಿಯ ಭಯಾನಕ ಅಂತ್ಯ

By Suchethana D  |  First Published Jan 15, 2025, 4:01 PM IST

ಸಂಜು ಎನ್ನುವ ಭೂತ್​ನನ್ನು ಲವ್​ ಮಾಡಿದ ಸೋನಿಯಾ, ಕೊನೆಗೆ ದುರಂತ ಅಂತ್ಯ ಕಂಡಿದ್ದು ಹೇಗೆ? ಇಲ್ಲಿದೆ ಭಯಾನಕ ಘಟನೆ...
 


ಆಕೆ ಹೆಸರು ಸೋನಿಯಾ  ಕುಮಾರಿ. ವಯಸ್ಸು 19-20 ಅಷ್ಟೇ. ಬಿಹಾರ್​ ಮೂಲದ ಈಕೆಯ ಕುಟುಂಬದವರು, ಕೆಲಸ ಹುಡುಕಿ ದೆಹಲಿಗೆ ಬಂದವರು. ಮನೆಯಲ್ಲಿ ಬಡತನ. ಮನೆ ಮನೆಗೆ ಹೋಗಿ ಕೆಲಸ ಮಾಡಿ ಬಂದ ದುಡ್ಡಲ್ಲಿ ಸಂಸಾರ ನಡೆಸುವ ಪಾಲಕರು. ಈ ಕಡು ಬಡತನ ನೋಡಿ ಸಾಕಾಗಿದ್ದ ಸೋನಿಯಾಗೆ ಹೇಗಾದರೂ ದುಡ್ಡು ಮಾಡಬೇಕು ಎನ್ನುವ ಆಸೆಯಾಯಿತು. ಹಾಗೆಂದು ತಪ್ಪು ಹಾದಿ ಹಿಡಿದು ಅಲ್ಲ ಮತ್ತೆ. ಒಳ್ಳೆಯ ರೀತಿಯಲ್ಲಿಯೇ ಹಣ ಸಂಪಾದನೆ ಮಾಡಬೇಕು ಎಂದು ಅಂದುಕೊಂಡವಳಿಗೆ ಕಂಡದ್ದು ರೀಲ್ಸ್​ ಪ್ರಪಂಚ. ಸೋನಿಯಾ ಬಡತನದಿಂದಾಗಿ ಕಾಲೇಜಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಅವಳು ಕೂಡ ಅಲ್ಲಲ್ಲಿ ಕೆಲಸ ಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡಿ ಸ್ಮಾರ್ಟ್​ಫೋನ್​ ತಂದುಕೊಂಡಳು.

ಮನಸ್ಸಿನಲ್ಲಿ ಛಲ, ಏನಾದರೂ ಸಾಧಿಸುವ ಗುರಿಯಿದ್ದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಆ ಸಮಯದಲ್ಲಿ ಸೋನಿಯಾ ಮಾದರಿಯಾದರು. ರೀಲ್ಸ್​ ಮಾಡುತ್ತಲೇ, ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಂಡಳು. ದೆಹಲಿಯ ಒಳ್ಳೊಳ್ಳೆ ಜಾಗಕ್ಕೆ ಹೋಗಿ ರೀಲ್ಸ್ ಮಾಡಲು ಶುರು ಮಾಡಿದಳು. ಸೋಷಿಯಲ್​  ಮೀಡಿಯಾ ಇನ್​ಫ್ಲುಯೆನ್ಸರ್​ ಆಗಬೇಕು ಎನ್ನುವ ಆಕೆಯ ಕನಸು ನನಸಾಗುವ ಹಂತದಲ್ಲಿ ಇತ್ತು. ಹೊಲಿಗೆ ಕಲಿತು, ದುಡಿಮೆ ಮಾಡಿ ಅದರಲ್ಲಿಯೇ ಹೊಲಿಗೆ ಮಷಿನ್​ ಕೂಡ ತಂದ ಸೋನಿಯಾ, ರೀಲ್ಸ್​ ಮಾಡುವುದಕ್ಕಾಗಿ ತಾನೇ ಬಟ್ಟೆಗಳನ್ನು ಹೊಲೆದುಕೊಳ್ಳಲು ಶುರು ಮಾಡಿದಳು. ನಿಧಾನವಾಗಿ ರೀಲ್ಸ್​ ಪ್ರಪಂಚ ಅವಳ ಕೈಹಿಡಿಯಿತು.

Tap to resize

Latest Videos

ಥಾಯ್ಲೆಂಡ್​ ಬಾತ್​ಟಬ್​ನಲ್ಲಿ ಯುಪಿ ವೈದ್ಯನ ಪತ್ನಿ ಶವ! ನಟಿ ಶ್ರೀದೇವಿ ನಿಗೂಢ ಸಾವಿಗೆ ಸಾಕ್ಷಿಯಾಯ್ತಾ ಘಟನೆ?

ಇನ್ನು ಸರಿ ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಾಗಲೇ ಅವಳಿಗೆ ಪರಿಚಯವಾದದ್ದು ಭೂತ್​! ಸಂಜು ಎನ್ನುವ ಯುವಕನ ಪ್ರೇಮಪಾಶದಲ್ಲಿ ಸಿಲುಕಿದಳು ಸೋನಿಯಾ. ಆತನನ್ನು ಭೂತ್​ ಎಂದು ಪ್ರೀತಿಯಿಂದ ಕರೆಯಲು ಶುರು ಮಾಡಿದಳು. ಹರಿಯಾಣ ಮೂಲಕ ಸಂಜು ಮತ್ತು ಸೋನಿಯಾ ತೀರಾ ಕ್ಲೋಸ್​​ ಆದರು. ಅದೆಷ್ಟಮಟ್ಟಿಗೆ ಎಂದರೆ ಇನ್​ಸ್ಟಾಗ್ರಾಮ್​ನಲ್ಲಿ, ಅವಳ ಪ್ರತಿ ರೀಲ್ಸ್​ನಲ್ಲಿ ಭೂತ್​ ಹೆಸರು ಬರುತ್ತಿತ್ತು. ಕೊನೆ ಕೊನೆಗೆ ಈತನೇ ನನ್ನ ಗಂಡ, ಈತನೇ ನನ್ನ ಸರ್ವಸ್ವ ಎಂದುಕೊಂಡು ಸಂಜುವಿನ ಫೋಟೋ ಕೂಡ ಬಳಸಲು ಶುರು ಮಾಡಿದಳು. ಇದ್ದಕ್ಕಿದ್ದಂತೆಯೇ ಒಂದು ದಿನ ಆಕೆಗೆ ಹುಷಾರಿಲ್ಲದ್ದರಿಂದ ಆತಂಕಗೊಂಡ ಪೋಷಕರು, ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅವಳು ಐದು ತಿಂಗಳ ಗರ್ಭಿಣಿ ಎನ್ನುವ ವಿಷಯ ತಿಳಿದು ಶಾಕ್​ ಆಯಿತು.

ಬಳಿಕ, ಸಂಜುವಿನ ವಿಷಯವನ್ನು ಮನೆಯವರಿಗೂ ಹೇಳಲೇಬೇಕಾಯಿತು. ಆತನೇ ತನ್ನ ಗಂಡ ಎಂದುಕೊಂಡು ಕರ್ವಾಚೌತ್​ ವೃತವನ್ನೂ ಮಾಡಿದಳು ಸೋನಿಯಾ. ಈಗ ಗರ್ಭಿಣಿಯಾಗಿದ್ದರಿಂದ ಮದುವೆ ಮಾಡಬೇಕು ಎಂದು ಅಂದುಕೊಂಡರು ಮನೆಯವರು.  ಆದರೆ ಸಂಜು ತನ್ನ ಮನೆಯವರು ಇದಕ್ಕೆ ಒಪ್ಪುತ್ತಿಲ್ಲ ಎಂದು ಹೇಳಿದ್ದರಿಂದ, ಮನೆಯವರಿಗೆ ತಿಳಿಸದೇ ಸೋನಿಯಾ ಮನೆಬಿಟ್ಟು ಹೋದಳು. ಇದರಿಂದ ಆತಂಕಗೊಂಡ ಅಪ್ಪ-ಅಮ್ಮ, ಸಂಜುವಿನ ಜಾಡು ಹಿಡಿದು ಮನೆ ಬಳಿಗೆ ಕೊನೆಗೂ ತಲುಪಿದರು. ಆದರೆ ಅಲ್ಲಿ ಅವರಿಗೆ ಆಘಾತ ಕಾದಿತ್ತು.  ಏಕೆಂದರೆ, ಆ ಹುಡುಗನ ಹೆಸರು ಸಂಜು ಅಲ್ಲ, ಸಲೀಂ ಎಂದು ತಿಳಿಯಿತು. ಸಲೀಂ ಮನೆಯವರು, ಆತನಿಗೂ ನಮಗೂ ಸಂಬಂಧವೇ ಇಲ್ಲ ಎಂದಾಗ, ಸೋನಿಯಾ ಅಪ್ಪ-ಅಮ್ಮನಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವವಾಯಿತು.

ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದರೆ, ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದುಬಿಟ್ಟರು. ಪೊಲೀಸರ ನೆರವೂ ಸಿಗದಾಗ ಕಂಗಾಲಾದ ಪಾಲಕರು ಸೋನಿಯಾ ಫೋನ್​ಗೆ ಕರೆ ಮಾಡಿದರೂ ಸ್ವಿಚ್​ ಆಫ್​ ಬರುತ್ತಿತ್ತು. ಬಳಿಕ ಒಂದು ಬಾರಿ ಸಲೀಂನೇ ಫೋನ್​ ಸ್ವೀಕರಿಸಿ, ನಿಮ್ಮ ಮಗಳು ನಿಮ್ಮ ಸಂಬಂಧ ಕಡಿದುಕೊಂಡಿದ್ದಾಳೆ. ಪದೇ ಪದೇ ಕರೆ  ಮಾಡಬೇಡಿ ಎಂದರು.  ಆ ಸಂದರ್ಭದಲ್ಲಿ ಹಿಂದುಗಡೆಯಿಂದ ಯಾರೋ, ಇನ್ನೂ ಆಳವಾದ ಗುಂಡಿ ತೋಡಿ ಎನ್ನುವ ಮಾತು ಸೋನಿಯಾ ಪಾಲಕರಿಗೆ ಕೇಳಿಸಿತು. ಆತಂಕಗೊಂಡ ಅವರು ಮಗಳಿಗೆ ಏನೋ ಆಗಿದೆ ಎಂದು ಗಾಬರಿ ಬಿದ್ದರು. ಆದರೆ ಯಾರ ನೆರವು ಪಡೆಯಬೇಕು ಎನ್ನುವುದು ತಿಳಿಯಲಿಲ್ಲ. ಇದಾದ ಬಳಿಕ, ಪೊಲೀಸರಿಗೆ ಸೋನಿಯಾಳ ಆಧಾರ್​ ಕಾರ್ಡ್​ ಸಿಕ್ಕಿತು. ನಂಬರ್​ ಪ್ಲೇಟ್​ ಇಲ್ಲದೇ ಬೈಕ್​ ಹೊಡೆದ ಯುವಕನನ್ನು ಪೊಲೀಸರು ಅರೆಸ್ಟ್​ ಮಾಡಿದಾಗ, ಅಲ್ಲಿ ಸೋನಿಯಾಳ ಆಧಾರ್​ ಕಾರ್ಡ್​ ಸಿಕ್ಕಿ ಸೋನಿಯಾ ಮನೆಯವರನ್ನು ಪೊಲೀಸರು ಠಾಣೆಗೆ ಕರೆಸಿದರು.

ಪಲ್ಯ ಮಾಡಲು ರಾತ್ರಿ ಗ್ಯಾಸ್​ ಮೇಲೆ ಕಾಬುಲ್​ ಕಡಲೆ ಇಟ್ಟ ಯುವಕರು ಬೆಳಿಗ್ಗೆ ಹೆಣವಾದರು! ಆಗಿದ್ದೇನು?

ನಂತರ ಸೋನಿಯಾ ಪಾಲಕರು ನಡೆದ ವಿಷಯವನ್ನೆಲ್ಲಾ ತಿಳಿಸಿದಾಗ, ಪೊಲೀಸರು ತಮ್ಮದೇ ಆದ ರೀತಿಯಲ್ಲಿ ಸಲೀಂನನ್ನು ಪ್ರಶ್ನಿಸಿದಾಗ, ಆತ ಸೋನಿಯಾಳನ್ನು ಸ್ನೇಹಿತರ ಜೊತೆಗೂಡಿ ಕೊಲೆ ಮಾಡಿರುವ ವಿಷಯವನ್ನು ಒಪ್ಪಿಕೊಂಡ. ಮಗು ಬೇಕೆಂದು ಅವಳು ಹಠ ಮಾಡುತ್ತಿದ್ದಳು. ಆದರೆ ನನಗೆ ಅದು ಇಷ್ಟವಿರಲಿಲ್ಲ.  ಆದ್ದರಿಂದ ಕೊಲೆ ಮಾಡಿದೆ ಎಂದು ಹೇಳಿದ. ಹೀಗೆ ಯಾರನ್ನೋ ನಂಬಿ, ಸೋನಿಯಾ ದುರಂತ ಅಂತ್ಯ ಕಂಡಳು.  ಇದಾಗಲೇ ಹತ್ತಾರು ಬಾರಿ ಹೆಸರು ಬದಲಿಸಿಕೊಂಡು ಹಲವು ಯುವತಿಯರಿಗೆ ಹೀಗೆ ಮಾಡಿರುವುದು ಪೊಲೀಸರಿಗೆ ತಿಳಿಯಿತು.
 
 

click me!