ಶಿವಮೊಗ್ಗ: ಜೆಸಿಬಿ ಬಳಸಿ ATM ಕಳ್ಳತನಕ್ಕೆ ಯತ್ನಿಸಿದ ಭೂಪ!

By Kannadaprabha News  |  First Published Jul 27, 2023, 6:07 AM IST

ರಸ್ತೆ ಬದಿ ನಿಂತಿದ್ದ ಜೆಸಿಬಿ ಬಳಸಿಕೊಂಡು, ಎಟಿಎಂ ಯಂತ್ರವನ್ನು ಕಳವು ಮಾಡಲು ಯತ್ನಿಸಿದ ಐನಾತಿ ಕಳ್ಳ ಪೊಲೀಸರಿಗೆ ಹೆದರು ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ಗುರುವಾರ ತಡರಾತ್ರಿ ನಡೆದಿದೆ.


ಶಿವಮೊಗ್ಗ (ಜು.27): ರಸ್ತೆ ಬದಿ ನಿಂತಿದ್ದ ಜೆಸಿಬಿ ಬಳಸಿಕೊಂಡು, ಎಟಿಎಂ ಯಂತ್ರವನ್ನು ಕಳವು ಮಾಡಲು ಯತ್ನಿಸಿದ ಐನಾತಿ ಕಳ್ಳ ಪೊಲೀಸರಿಗೆ ಹೆದರು ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ವಿನೋಬ ನಗರದ ಮುಖ್ಯ ರಸ್ತೆಯ ಶಿವಾಲಯ ಬಳಿ ಪೆಟ್ರೋಲ್‌ ಬಂಕ್‌ ಪಕ್ಕದ ಕಟ್ಟಡದಲ್ಲಿರುವ ಆಕ್ಸಿಸ್‌ ಬ್ಯಾಂಕಿಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ರಸ್ತೆಯ ದುರಸ್ತಿಯ ಕಾರಣದಿಂದ ಕೆಲವು ದಿನಗಳಿಂದ ಪೆಟ್ರೋಲ್‌ ಬಂಕ್‌ ಸಮೀಪ ಜೆಸಿಬಿ ನಿಲ್ಲಿಸಲಾಗಿತ್ತು. ಕಳ್ಳ ನಕಲಿ ಕೀ ಬಳಸಿ, ಜೆಸಿಬಿ ಚಾಲೂ ಮಾಡಿ, ಕಟ್ಟಡವನ್ನು ಧ್ವಂಸಗೊಳಿಸಿ ಎಟಿಎಂ ಯಂತ್ರ ಕದ್ದೊಯ್ಯುವ ಯತ್ನ ನಡೆಸಿದ್ದಾನೆ. ಆ ಸಮಯದಲ್ಲಿ ಸಂಚಾರಿ ಠಾಣೆ ಸಿಪಿಐ ಸಂತೋಷ್‌ ಕುಮಾರ್‌ ಅವ​ರ ಗಸ್ತು ವಾಹನ ಆಗಮಿಸುತ್ತಿದ್ದಂತೆ ಜೆಸಿಬಿಯನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.

Tap to resize

Latest Videos

ಕಳ್ಳ ಜೆಸಿಬಿ ಸಹಾಯದಿಂದ ಎಟಿಎಂ ಕಳ್ಳತನ ಮಾಡುವ ವೇಳೆಯಲ್ಲಿ ಕಟ್ಟಡದ ಮೇಲ್ಭಾಗ ಸಂಪೂರ್ಣ ಹಾನಿಗೊಳಗಾಗಿದೆ. ಈ ಕೃತ್ಯದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿನೋಬನಗರ ಠಾಣೆ ಪೊಲೀಸರು ಘಟನಾ ಸ್ಥಳದ ಪರಿಶೀಲನೆ ಮಾಡಿ ಸದರಿ ದೃಶ್ಯಾವಳಿ ಪರಿಶೀಲಿಸಿ, ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಎಟಿಎಂನಿಂದ₹.24 ಲಕ್ಷ ದೋಚಿದ್ದವರ ಸೆರೆ

ದ್ವಿಚಕ್ರ ವಾಹನ, ಆಫೆ ಆಟೋ ಕಳ್ಳತನ ಇಬ್ಬರು ಬಂಧನ

ಮಳವಳ್ಳಿ: ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಹಾಗೂ ಆಫೆ ಆಟೋ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ತಾಲೂಕಿನ ಕಿರುಗಾವಲು ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಕಿರುಗಾವಲು ಗ್ರಾಮದ ಅಬ್ದುಲ… ಮಸೂದ್‌ ಮತ್ತು ರಶೀದ್‌ಖಾನ್‌ ಬಂಧಿತ ಆರೋಪಿಗಳು. ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಎನ್‌.ಯತೀಶ್‌, ಎಎಸ್ಪಿ ಸಿ.ಇ.ತಿಮ್ಮಯ್ಯ, ಡಿವೈಎಸ್ಪಿ ಪಿ.ಎನ್‌.ನವೀನ್‌ಕುಮಾರ್‌ ಹಾಗೂ ಸಿಪಿಐ ಬಿ.ಎಸ್‌.ಶ್ರೀಧರ್‌ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಎಚ್‌.ಹನುಮಂತಕುಮಾರ್‌, ಕಾನೂನು ಸುವ್ಯವಸ್ಥೆ ಪಿಎಸ್‌ಐ ಸತೀಶ್‌ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಂ.ಮಹೇಶ್‌, ರಿಯಾಜ… ಪಾಷ, ನಾಗೇಂದ್ರ, ಸಿದ್ದರಾಜು, ಶ್ರೀನಿವಾಸ್‌, ಮಹೇಂದ್ರ, ಮಹದೇವಸ್ವಾಮಿ, ರವಿಕಿರಣ್‌ ಹಾಗೂ ಲೋಕೇಶ್‌ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಗಳನ್ನು ಬಂಧಿಸಿದೆ.

ಎಟಿಎಂ ಕಾರ್ಡ್ ಬದಲಿಸಿ ಹಣ ಕದಿಯುತ್ತಿದ್ದ ಕಳ್ಳ ಬಂಧನ

ಬಂಧಿತ ಆರೋಪಿಗಳು ಕಿರುಗಾವಲು ಠಾಣೆ 2 ಮತ್ತು ಹಲಗೂರು ಠಾಣೆ 2 ಪ್ರಕರಣಗಳಲ್ಲಿ ಕಳವು ಮಾಡಿದ್ದ 2.10 ಲಕ್ಷ ರು ಮೌಲ್ಯದ 3 ದ್ವಿಚಕ್ರ ವಾಹನಗಳು ಹಾಗೂ ಒಂದು ಆಫೆ ಆಟೋವನ್ನು ವಶಪಡಿಸಿಕೊಂಡು ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

click me!