ಪಟ್ಟಣದ ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿ ಒಡೆದು ಕಳ್ಳತನ ಮಾಡಿರುವ ಘಟನೆ ಬುಧವಾರ ನಡೆದಿದೆ. ದೇವಸ್ಥಾನದಲ್ಲಿನ ಸಿಸಿಟಿವಿ ಕಣ್ತಪ್ಪಿಸಿ ಕ್ಯಾಮರಾದ ಕೇಬಲ್ ಹರಿದು ವ್ಯವಸ್ಥಿತವಾದ ಕಳ್ಳತನ ಮಾಡಿದ್ದಾರೆ.
ಕೊಡೇಕಲ್ (ಜು.27): ಪಟ್ಟಣದ ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿ ಒಡೆದು ಕಳ್ಳತನ ಮಾಡಿರುವ ಘಟನೆ ಬುಧವಾರ ನಡೆದಿದೆ. ದೇವಸ್ಥಾನದಲ್ಲಿನ ಸಿಸಿಟಿವಿ ಕಣ್ತಪ್ಪಿಸಿ ಕ್ಯಾಮರಾದ ಕೇಬಲ್ ಹರಿದು ವ್ಯವಸ್ಥಿತವಾದ ಕಳ್ಳತನ ಮಾಡಿದ್ದಾರೆ. ದೇವರಿಗೆ ಸಲ್ಲಿಸಿದ ಕಾಣಿಕೆ ದುಡ್ಡಿನ ಸುರಕ್ಷಿತವಿಲ್ಲದಿರುವುದರಿಂದ ಭಕ್ತರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಹುಣಸಗಿ ತಹಸೀಲ್ದಾರ್ ಜಗದೀಶ ಚೌರ ಅವರು ಕೊಡೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಧಾರ್ಮಿಕ ಧತ್ತಿ ಇಲಾಖೆ(Religious Endowment Department)ಗೆ ಒಳಪಡುವ ಕೊಡೇಕಲ್‌ನ 2 ಬಸವೇಶ್ವರ ದೇವಸ್ಥಾನ(Kodekal basaveshwar temple)ದಲ್ಲಿ ವರ್ಷಕ್ಕೆ ಎರಡು ಬಾರಿ ಜಾತ್ರೆಗಳು ನಡೆಯತ್ತವೆ. ಮಂಗಳವಾರ ಮಧ್ಯರಾತ್ರಿಯಿಂದ ಹಿಡಿದು ಬುಧವಾರ ಬೆಳಗಿನ ಜಾವದಲ್ಲಿ ದೇವಸ್ಥಾನದಲ್ಲಿ ಕಳ್ಳತನವಾಗಿರಬಹುದೆಂದು ಅಂದಾಜಿಸಲಾಗುತ್ತಿದೆ. ದೇವಸ್ಥಾನದ ಗೋಡೆಗೆ ಹೊಂದಿಕೊಂಡಂತೆ ಇರುವ ಹಿರೋಡೆ ದೇವರ ಪಕ್ಕದಲ್ಲಿನ ಹಳೆಯ ಕಟ್ಟಿಗೆ ಬಾಗಿಲನ್ನು ತಳ್ಳಿ ಒಳಬಂದಿರುವ ಕಳ್ಳರು ದೆವಸ್ಥಾನದ ಮುಂದಿನ ಕಬ್ಬಿಣದ ಗೇಟಿಗೆ ಹಾಕಲಾಗಿದ್ದ ಬೀಗವನ್ನು ಮುರಿದು ಒಳ ನುಸುಳಿ ಕಬ್ಬಿಣದ ಹುಂಡಿ ಪೆಟ್ಟಿಗೆ ಬೀಗ ಮುರಿದು ಒಳಗಿನ ಲಾಕರ್‌ನ್ನು ಸಹ ಮುರಿದು ಕಳ್ಳತನವನ್ನು ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಸ್ ಹತ್ತುವ ವೇಳೆ ಮಹಿಳೆಯ ಚಿನ್ನಾಭರಣ ಕಳ್ಳತನ; ಇಬ್ಬರು ಸರಗಳ್ಳಿಯರ ಬಂಧನ
ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಶೈಲ್ ಅಂಬಾಟೆ ಮತ್ತು ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಅಲ್ಲಿಯವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ದೇವಸ್ಥಾನದ ಹುಂಡಿ ಮುರಿದು ಕಳ್ಳತನವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಿಂದ ಬೆರಳಚ್ಚು ತಜ್ಞರ ತಂಡವು ಬುಧವಾರ ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನದಲ್ಲಿನ ಹುಂಡಿ ಪೆಟ್ಟಿಗೆ ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಪರಿಶೀಲಿಸಿ ಪರೀಕ್ಷೆ ನಡೆಸಿದ್ದಾರೆ.
Kalaburagi crimes: ಎತ್ತು ಕಳ್ಳನ ಹಿಡಿದು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ
ವೃಷಭೇಂದ್ರ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಭಕ್ತರ ಪ್ರಶ್ನೆಗಳಿಗೆ ಉತ್ತರಿಸಿದ ತಹಸೀಲ್ದಾರ್ ಜಗದೀಶ ಚೌರ ದೇವಸ್ಥಾನದಲ್ಲಿ ಆಗಿರುವ ಕಳ್ಳತನ ಕುರಿತಂತೆ ಪ್ರಕರಣ ದಾಖಲಿಸಲಾಗುವುದು ಮತ್ತು ಕಳ್ಳರು ಯಾರೇ ಆಗಿರಲಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಹುಂಡಿ ಹಣವನ್ನು ಎಣಿಕೆ ಮಾಡಲಾಗುವುದೆಂದು ತಿಳಿಸಿದರು. ಪಿಎಸ್‌ಐ ಶ್ರೀಶೈಲ್ ಮಾತನಾಡಿ, ಶೀಘ್ರದಲ್ಲಿಯೇ ಕಳ್ಳರನ್ನು ಬಂಧಿಸುವ ಕಾರ‍್ಯಕ್ಕೆ ತಂಡವನ್ನು ರಚಿಸಿ ಶೋಧ ಕಾರ‍್ಯವನ್ನು ನಡೆಸಲಾಗುವುದೆಂದು ತಿಳಿಸಿದರು.