ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಬಿಟೆಕ್ ಪದವೀಧರನ ಬಂಧನ

By Anusha KbFirst Published May 12, 2022, 4:43 PM IST
Highlights
  • ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ
  • ತೆಲಂಗಾಣದಲ್ಲಿ ಬಿಟೆಕ್ ಪದವೀಧರನ ಬಂಧನ
  • ಆಂಧ್ರಪ್ರದೇಶದ ವಂಶಿಕೃಷ್ಣ ಬಂಧಿತ ವ್ಯಕ್ತಿ

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಸಾವಿರ ಮಹಿಳೆಯರಿಗೆ 10 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ರಾಜಮಂಡ್ರಿಯ (Rajahmundry) ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ (East Godavari district) ರಾಮಚಂದ್ರರಾವ್ ಪೇಟಾ (Ramachandra Rao Peta) ಮೂಲದ ಆರೋಪಿ ವಂಶಿಕೃಷ್ಣ (Vamshikrishna) ಬಂಧಿತ ಆರೋಪಿ 2014ರಲ್ಲಿ ಈತ ಬಿಟೆಕ್ ಮುಗಿಸಿ ಹೈದರಾಬಾದ್‌ಗೆ ಬಂದಿದ್ದ ಎನ್ನಲಾಗಿದೆ. ಹೈದರಾಬಾದಿನಲ್ಲಿ ನೌಕರಿ ಸಿಕ್ಕ ನಂತರ ಕುದುರೆ ರೇಸಿಂಗ್ ಮತ್ತು ಕ್ರಿಕೆಟ್‌ನಲ್ಲಿ ಬೆಟ್ಟಿಂಗ್‌ಗೆ ವ್ಯಸನಿಯಾಗಿದ್ದ ಈತ ಬೆಟ್ಟಿಂಗ್‌ನಲ್ಲಿ ಸೋತ ನಂತರ ಭಾರೀ ಸಾಲ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲದ ಪರಿಣಾಮವಾಗಿ ವಂಚನೆಗಿಳಿದ ಆತ ಅನೇಕ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದ. ಯುವತಿಯರು ವಿಧವೆಯರು ಸೇರಿದಂತೆ 1000ಕ್ಕೂ ಹೆಚ್ಚು ಮಹಿಳೆಯರನ್ನು ವಂಚಿಸಿ 6 ವರ್ಷಗಳ ಅವಧಿಯಲ್ಲಿ 10 ಕೋಟಿ ರೂಪಾಯಿ ಲೂಟಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಬಂಧಿಸಲು ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ (Stephen Ravindra) ನೇತೃತ್ವದಲ್ಲಿ ಸೈಬರಾಬಾದ್ (Cyberabad) ಪೊಲೀಸರು ಎರಡು ತಿಂಗಳ ಕಾಲ ಶ್ರಮಿಸಿದ್ದರು.

ವಂಚನೆ ಪ್ರಕರಣದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗನ್ನು ಜೈಲಿಗಟ್ಟಿದ ಪೊಲೀಸ್ ಅಧಿಕಾರಿ!

ಆರೋಪಿಯು ಎರಡು ವರ್ಷಗಳಿಂದ ಕುಕಟ್‌ಪಲ್ಲಿ (Kukatpally) ವೈಬ್ಸ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಕೆಲಸ ಮಾಡುತ್ತಲೇ ಗೆಳೆಯರೊಂದಿಗೆ ಕುದುರೆ ರೇಸಿಂಗ್, ಕ್ರಿಕೆಟ್ ಅಂತ ಬೆಟ್ಟಿಂಗ್ ಕಟ್ಟತೊಡಗಿದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಆರು ವರ್ಷಗಳ ಹಿಂದೆ ಟ್ರಾವೆಲ್-ಕನ್ಸಲ್ಟೆನ್ಸಿ ಕಚೇರಿಯಲ್ಲಿ (Travel‌-Consultancy office) ಉದ್ಯೋಗಿಯಾಗಿ ಸೇರಿಕೊಂಡಿದ್ದ ಮತ್ತು ಜನರಿಗೆ ಉದ್ಯೋಗಕ್ಕೆ ಪ್ರತಿಯಾಗಿ ಅವರಿಂದ ದೊಡ್ಡ ಮೊತ್ತದ ಹಣವನ್ನು ತೆಗೆದುಕೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಕುಕಟಪಲ್ಲಿ ಪೊಲೀಸರು ಬಂಧಿಸಿದ್ದರು, ಆದರೆ ಶೀಘ್ರದಲ್ಲೇ ಆತ ಜೈಲಿನಿಂದ ಹೊರಬಂದಿದ್ದ.

ಕೆಲದಿನಗಳ ಹಿಂದೆ ಬ್ಯಾಂಕ್‌ (Bank) ಮಹಿಳಾ ಉದ್ಯೋಗಿಯೊಬ್ಬರಿಗೆ ವೈವಾಹಿಕ ಜಾಲತಾಣದಲ್ಲಿ(matrimonial site) ಪರಿಚಯವಾದ ವ್ಯಕ್ತಿಯೊಬ್ಬ ಮದುವೆ (Marriage)ಆಗುವುದಾಗಿ ನಂಬಿಸಿ .7.55 ಲಕ್ಷ ಪಡೆದು ವಂಚಿಸಿದ ಘಟನೆ  ಬೆಂಗಳೂರಿನಲ್ಲಿ ನಡೆದಿತ್ತು. ಸುಧಾಮನಗರದ 29 ವರ್ಷದ ಯುವತಿ ಮೋಸ ಹೋಗಿದ್ದು, ಈ ಕೃತ್ಯ ಎಸಗಿದ ರಾಜೇಶ್‌ ಕುಮಾರ್‌ ಎಂಬಾತನ ಪತ್ತೆಗೆ ಕೇಂದ್ರ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಲೆ ಬೀಸಿದ್ದರು.

‘ರಾ’ ಅಧಿಕಾರಿ ಸೋಗಿನಲ್ಲಿ ಯುವತಿಗೆ 89 ಲಕ್ಷ ವಂಚನೆ: ಸ್ನೇಹಿತ ತಂದ ಆಪತ್ತು

ಜೈಲಿನಿಂದ ಹೊರಬಂದ ಆರೋಪಿ ನಂತರ ಗಾಯತ್ರಿ, ಮಾಧುರಿ, ಸಾತ್ವಿಕಾ, ಶ್ವೇತಾ ಮುಂತಾದ ಯುವತಿಯರ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಗಳನ್ನು ತೆರೆದು ಉದ್ಯೋಗದ ನೆಪದಲ್ಲಿ ಇತರ ಮಹಿಳೆಯರಿಗೆ ವಂಚಿಸಲು ಮಹಿಳಾ ಧ್ವನಿಯ ಅಪ್ಲಿಕೇಶನ್‌ಗಳನ್ನು ತೆರೆದಿದ್ದ. ಅಲ್ಲದೇ ಯಾನಂ ಶಾಸಕ (Yanam MLA)  ಶ್ರೀನಿವಾಸ್ ಅಶೋಕ್ (Srinivas Ashok) ಅವರ ಫೋಟೋ ಬಳಸಿ ಅವರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್‌(Instagram) ಖಾತೆಯನ್ನು ರಚಿಸಿದ್ದ. ಆರಂಭದಲ್ಲಿ ಯುವತಿಯರ ಬ್ಯಾಂಕ್ ಖಾತೆಗೆ ಲಕ್ಷಗಟ್ಟಲೆ ಹಣ ಜಮಾ ಮಾಡಿ ವಿಶ್ವಾಸ ಗಳಿಸಿದ ನಂತರದಲ್ಲಿ ಅವರ ಹಣವನ್ನು ಕುದುರೆ ಬೆಟ್ಟಿಂಗ್‌ಗೆ ವರ್ಗಾಯಿಸಿದ್ದ.

ಅಲ್ಲದೇ ಆನ್‌ಲೈನ್ ಮದುವೆ ಸೈಟ್‌ಗಳಲ್ಲಿ ವಿಧವೆಯರು ಸೇರಿದಂತೆ ವಿಚ್ಛೇದಿತ ಮಹಿಳೆಯರನ್ನು ಮದುವೆಯಾಗಲು ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡುತ್ತಿದ್ದ. 2016ರಿಂದ ಇಲ್ಲಿಯವರೆಗೆ ಈತ ಯುವತಿಯರು ಮಹಿಳೆಯರು ಸೇರಿ ಸಾವಿರಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾನೆ ಎನ್ನಲಾಗಿದೆ. ಸಂತ್ರಸ್ತರಲ್ಲಿ 50 ರಿಂದ 60 ಮಂದಿ ಮಾತ್ರ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯಿಂದ ಪಡೆದ ಸಾಕ್ಷ್ಯದ ಆಧಾರದ ಮೇಲೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇನ್ನೂ 30 ಸಂತ್ರಸ್ತರನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 

click me!