ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿಂದ ಜನರಲ್ಲಿ ಆತಂಕ ಹುಟ್ಟಿಸಿದ್ದ ಅಂತರ್ ರಾಜ್ಯ ಕಳ್ಳರು ಕೊನೆಗೂ ಪೊಲೀಸರಿಗೆ ಅತಿಥಿಯಾಗಿದ್ದಾರೆ. ಮೊದ ಮೊದಲು ದೊಡ್ಡ ದೇವಾಲಯಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಅಂಧ್ರದ ಚೋರರಿಗೆ ಕೋಟೆನಾಡಿನ ಖಾಕಿ ಪಡೆ ಎಡೆಮುರಿಕಟ್ಟಿದೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಮೇ.12): ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿಂದ ಜನರಲ್ಲಿ ಆತಂಕ ಹುಟ್ಟಿಸಿದ್ದ ಅಂತರ್ ರಾಜ್ಯ ಕಳ್ಳರು (Robbers) ಕೊನೆಗೂ ಪೊಲೀಸರಿಗೆ (Police) ಅತಿಥಿಯಾಗಿದ್ದಾರೆ. ಮೊದ ಮೊದಲು ದೊಡ್ಡ ದೇವಾಲಯಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಅಂಧ್ರದ ಚೋರರಿಗೆ ಕೋಟೆನಾಡಿನ ಖಾಕಿ ಪಡೆ ಎಡೆಮುರಿಕಟ್ಟಿದೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ. ಕೆಜಿಗಟ್ಟಲೇ ಬೆಳ್ಳಿ (Silver), ಬಂಗಾರದ ಆಭರಣಗಳು (Gold) ಹಾಗೂ ಸಾವಿರಾರು ಮೌಲ್ಯದ ನಗದನ್ನು (Cash) ಕಳ್ಳರಿಂದ ವಶಕ್ಕೆ ಪಡೆದಿರೋ ಕೋಟೆನಾಡಿನ ಪೊಲೀಸರು. ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ (Chitradurga).
undefined
ಹೌದು! ಕಳೆದ ಒಂದೆರೆಡು ತಿಂಗಳಿಂದಲೂ ಜಿಲ್ಲೆಯ ಜನರು ನಿರ್ಭಯದಿಂದ ರಸ್ತೆಗಳ ಮೇಲೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಓಡಾಡುವುದೇ ಕಷ್ಟವಾಗಿತ್ತು. ಅದ್ರಲ್ಲಂತೂ ದೊಡ್ಡ ದೊಡ್ಡ ದೇವಸ್ಥಾನಗಳ ಗಳನ್ನೇ ಟಾರ್ಗೆಟ್ ಮಾಡಿದ್ರು ಖತರ್ನಾಕ್ ಕಳ್ಳರು. ಜಿಲ್ಲೆಯ ಪ್ರತಿಷ್ಟಿತ ದೇವಾಲಯಗಳಲ್ಲಿ ಒಂದಾದ ಮಿನಿ ತಿರುಪತಿ ಎಂದೇ ಪ್ರಖ್ಯಾತಿ ಪಡೆದಿರೋ ಹಿರಿಯೂರು ಪಟ್ಟಣದಲ್ಲಿರೋ ತೇರುಮಲ್ಲೇಶ್ವರ ದೇವಸ್ಥಾನಕ್ಕೆ ರಾತ್ರಿ ನುಗ್ಗಿ ಕಳೆದ ತಿಂಗಳು ಹುಂಡಿಯಲ್ಲಿದ್ದ ಸಾವಿರಾರು ನಗದು ಹಾಗೂ ಕೇಜಿಗಟ್ಟಲೇ ಬೆಳ್ಳಿ ಕದ್ದು ಪರಾರಿ ಆಗಿದ್ದರು. ಇವರೆಲ್ಲಾ ಸಾಮಾನ್ಯ ಕಳ್ಳರಲ್ಲ ಮೇಲಾಗಿ ಆಂಧ್ರದ ಅನಂತಪುರ ಜಿಲ್ಲೆಯ ಮಲಕವೇಮಲ ಗ್ರಾಮದವರು.
Chitradurga: ಅಬಕಾರಿ ಡಿಸಿ ನಾಗಶಯನ ವಿರುದ್ದ ಸಿಡಿದೆದ್ದ ಬಾರ್ ಮಾಲೀಕರು!
ರಾಮು ಹಾಗೂ ಪ್ರಸಾದ್ ಇಬ್ಬರು ಒಂದೇ ತಂದೆಯ ಮಕ್ಕಳು. ಸುಮಾರು ವರ್ಷಗಳಿಂದ ಹಿರಿಯೂರಿನಲ್ಲೇ ವಾಸವಾಗಿದ್ದಾರೆ. ಈ ಹಿಂದೆ ತಂದೆಯೂ ಇದೇ ರೀತಿ ದೇವಾಲಯಗಳನ್ನು ಟಾರ್ಗೆಟ್ ಮಾಡಿ ಹುಂಡಿ ಕಳವು ಮಾಡ್ತಿದ್ದನಂತೆ, ಅದರಂತೆಯೇ ಮಕ್ಕಳು ಕೂಡು ದೇವಸ್ಥಾನಗಳ ಹುಂಡಿ ಕಳುವು ಮಾಡೋದಲ್ಲೇ ಖಾಯಂ ಮಾಡಿಕೊಂಡಿದ್ರು. ಇಂತಹ ಖತರ್ನಾಕ್ ಕಳ್ಳರ ಮೇಲೆ ಒಬ್ಬೊಬ್ಬರ ಮೇಲೂ ಬರೋಬ್ಬರಿ 18 ಕೇಸ್ ಗಳಿವೆ ಸದ್ಯ ಅವರನ್ನು ಬಂಧಿಸಲಾಗಿದೆ ಅಂತಾರೆ ಎಸ್ಪಿ. ಇನ್ನೂ ಪೊಲೀಸರ ಈ ಮಹಾತ್ ಕಾರ್ಯಕ್ಕೆ ಹಿರಿಯೂರಿನ ಜನತೆ ಶಹಬ್ಬಾಶ್ ಎನ್ನುತ್ತಿದ್ದಾರೆ. ಸುಮಾರು ವರ್ಷಗಳಿಂದಲೂ ತೇರುಮಲ್ಲೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ನಡೆದುಕೊಳ್ತಾರೆ.
ACB Raid: ಮದ್ಯದಂಗಡಿ ಪರವಾನಗಿ ನವೀಕರಣಕ್ಕೆ ಲಂಚ: ಅಬಕಾರಿ ಡಿಸಿ ನಾಗಶಯನ ಎಸಿಬಿ ಬಲೆಗೆ
ಆದ್ರೆ ಕಳೆದ ತಿಂಗಳು ಲಕ್ಷಾಂತರ ಹಣ ಹಾಗೂ ಬೆಳ್ಳಿ, ಬಂಗಾರದ ಆಭರಣಗಳನ್ನು ಕಳ್ಳರು ದೋಚಿ ಪರಾರಿ ಆದಾಗ ಬೇಸರವಾಗಿತ್ತು. ಆದ್ರೆ ನಮ್ಮ ತಾಲ್ಲೂಕಿನ ಪೊಲೀಸರು ಅಂತರ್ ರಾಜ್ಯ ಕಳ್ಳರ ಎಡೆಮುರಿ ಕಟ್ಟುವಲ್ಲಿ ಯಶಸ್ವಿ ಆಗಿದ್ದಾರೆ ಅವರಿಗೆ ನಮ್ಮ ಇಡೀ ಜಿಲ್ಲೆಯ ಜನತೆ ಚಿರಋಣಿ ಆಗಿರ್ತೇವೆ ಅಂತಾರೆ ಹಿರಿಯೂರಿನ ಸ್ಥಳೀಯರು. ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಾ ಜನರಲ್ಲಿಯೂ ಅತಂಕ ಮೂಡಿಸಿದ್ದ ಅಂತರ್‌ರಾಜ್ಯ ಕಳ್ಳರು ಅಂದರ್ ಆಗಿದ್ದು ಜನರಲ್ಲಿ ಕೊಂಚ ರಿಲೀಫ್ ಕೊಟ್ಟಂತಾಗಿದೆ. ಇದೇ ರೀತಿ ಬೇರೆಯಾರಾದ್ರು ಜಿಲ್ಲೆಗೆ ಕಳ್ಳರು ಬಂದಿದ್ದಲ್ಲಿ ಅಂತವರ ಮೇಲೆಯೂ ಪೊಲೀಸರು ನಿಗಾ ಇಡಲಿ ಎಂಬುದು ಎಲ್ಲರ ಒತ್ತಾಯ.