Latest Videos

ವಿದ್ಯಾರ್ಥಿನಿಯ ಪಕ್ಕ ಕುಳಿತಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಾಲ್ವರ ವಿರುದ್ಧ ದೂರು

By Kannadaprabha NewsFirst Published Jun 22, 2023, 4:52 AM IST
Highlights

ವಿದ್ಯಾರ್ಥಿನಿಯ ಪಕ್ಕ ಕುಳಿತಿದ್ದೀಯಾ? ಎಂದು ಆಕ್ರೋಶಗೊಂಡ ಹುಡುಗರ ದಂಡು ವ್ಯಕ್ತಿಯೊಬ್ಬನ ಬಟ್ಟೆಹರಿದು, ಚಪ್ಪಲಿ ಸೇವೆ ಮಾಡಿ ಹಲ್ಲೆ ನಡೆಸಿದ ಪ್ರಸಂಗ ತಾಲೂಕಿನ ಹಂಗಳದಲ್ಲಿ ನಡೆದಿದೆ.

ಗುಂಡ್ಲುಪೇಟೆ (ಜೂ.22) ವಿದ್ಯಾರ್ಥಿನಿಯ ಪಕ್ಕ ಕುಳಿತಿದ್ದೀಯಾ? ಎಂದು ಆಕ್ರೋಶಗೊಂಡ ಹುಡುಗರ ದಂಡು ವ್ಯಕ್ತಿಯೊಬ್ಬನ ಬಟ್ಟೆಹರಿದು, ಚಪ್ಪಲಿ ಸೇವೆ ಮಾಡಿ ಹಲ್ಲೆ ನಡೆಸಿದ ಪ್ರಸಂಗ ತಾಲೂಕಿನ ಹಂಗಳದಲ್ಲಿ ನಡೆದಿದೆ. ತಾಲೂಕಿನ ಬಂಡೀಪುರ ಸಮೀಪದ ಮಂಗಲ ಗ್ರಾಮದ ನಾಗೇಶ್‌ ಹಲ್ಲೆಗೊಳಗಾದವರಾಗಿದ್ದು, ಗಾಯಗೊಂಡ ನಾಗೇಶ್‌ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಸಂಬಂಧ ಹಂಗಳ ಗ್ರಾಮದ ಸಿದ್ದರಾಜು, ನಾಗೇಶ್‌, ಗೋಪಾಲ, ತೇಜು ಸೇರಿದಂತೆ ಇತರರ ಮೇಲೆ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಏನಿದು ಘಟನೆ?: ಮಂಗಲ ಗ್ರಾಮದ ನಾಗೇಶ್‌ ಮತ್ತು ಅವರ ತಾಯಿಗೆ ಹುಷಾರಿಲ್ಲದ ಕಾರಣ ತಾಲೂಕಿನ ಹಂಗಳ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಮಂಗಳವಾರ ಮಧ್ಯಾಹ್ನ ಬಂದು ಚಿಕಿತ್ಸೆ ಪಡೆದ ಬಳಿಕ ಮಂಗಲದ ಬಸ್‌ಗೆ ಹೋಗಲು ಹಂಗಳ ಬಸ್‌ ನಿಲ್ಲುವ ಸ್ಥಳಕ್ಕೆ ಬಂದು ನಿಂತಿದ್ದಾರೆ. ನಾಗೇಶ್‌ ಮತ್ತು ಅವರ ತಾಯಿ ಬಸ್‌ ಹತ್ತಲು ನಿಂತ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಾಗೇಶ್‌ ಪಕ್ಕ ನಿಂತಿದ್ದನ್ನು ಸಹಿಸದ ಹುಡುಗರು ರೊಚ್ಚಿಗೆದ್ದು, ನಾಗೇಶ್‌ನ ಬಟ್ಟೆಹರಿದು ಹಲ್ಲೆ ನಡೆಸಿದ್ದಾರೆ. ನಾಲ್ಕು ಆರೋಪಿಗಳೊಂದಿಗೆ ಇತರರು ನಾಗೇಶ್‌ನ ಹಲ್ಲೆಯ ಜೊತೆಗೆ ಚಪ್ಪಲಿ ಸೇವೆ ಮಾಡಿದ್ದಾರೆ.

 

viral video: ಜಗಳ ಬಿಡಿಸಲು ಹೋದ ಕಾನ್‌ಸ್ಟೇಬಲ್‌ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು!

ಹಲ್ಲೆ ನಡೆಸುವ ವೇಳೆ ಯುವಕರ ಗುಂಪಲ್ಲಿ ಒಬ್ಬಾತ ಬ್ಲೇಡ್‌ನಿಂದ ನಾಗೇಶ್‌ನ ಮುಖಕ್ಕೆ ಚುಚ್ಚಲು ಮುಂದಾದಾಗ ನಾಗೇಶ್‌ ತನ್ನ ಕೈ ಅಡ್ಡ ಹಾಕಿದಾಗ ಕೈ ಬ್ಲೇಡ್‌ ಏಟು ಬಿದ್ದಿವೆ. ಪೊಲೀಸರು ಈ ಸಂಬಂಧ ಬುಧ ವಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಸಾರಾಯಿ ಕದ್ದವನನ್ನು ಥಳಿಸಿದ ಮಹಿಳೆಯರು

ಕನಕಗಿರಿ: ಸಾರಾಯಿ ಕದ್ದ ಕುಡುಕನಿಗೆ ಮಹಿಳೆಯರು ಥಳಿಸಿದ ಘಟನೆ ಪಟ್ಟಣದ ವಾಲ್ಮೀಕಿ ವೃತ್ತದ ಬಳಿಯ ಸಾಯಿ ಬಾರ್‌ ಮುಂಭಾಗ ಬುಧವಾರ ನಡೆದಿದೆ.

ನಾಲ್ಕು ಮದ್ಯದ ಬಾಟಲ್‌ ತಂದು ಕೊಡುವುದಾಗಿ ಮಹಿಳೆಯರಿಗೆ ಯಾಮಾರಿಸಿ ಹಣ ಪಡೆದಿದ್ದ ಕುಡುಕ ಎರಡು ಬಾಟಲ್‌ ಮಾತ್ರ ಕೊಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ಬಾರ್‌ ಸಿಬ್ಬಂದಿ ಎದುರಲ್ಲೇ ವಿಚಾರಿಸಿ ಥಳಿಸಿದ್ದಾರೆ. ಇನ್ನುಳಿದ 2 ಬಾಟಲ್‌ ನೀಡುವಂತೆ ಮಹಿಳೆಯರು ಕುಡಕನ ಎದೆಯ ಮೇಲಿನ ಅಂಗಿ ಹಿಡಿದು ಕೇಳಿದ್ದಾರೆ. ಕುಡಕನ ಬಳಿ ಹಣ ಇಲ್ಲವಾಗಿದ್ದರಿಂದ ಗಲಾಟೆ ಜೋರಾಗಿದೆ. ಇದರಿಂದ ಕುಡುಕನ ಸಂಬಂಧಿಕರು ಬಾರ್‌ಗೆ ಬಂದು 2 ಬಾಟಲಿಯ ಮೊತ್ತ ಭರಿಸಿದಾಗ ಗಲಾಟೆ ಬಗೆಹರಿದಿದೆ.

ಬೆಂಗಳೂರು: ರೌಡಿಯ ಮಚ್ಚಿನ ಹಿಡಿಕೆ ಏಟಿಗೆ ವ್ಯಕ್ತಿ ಸಾವು

ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

click me!