ಮಹಾರಾಷ್ಟ್ರದ ಇಬ್ಬರು ವ್ಯಕ್ತಿಗಳು ಇಂಡಿಯಲ್ ಆಯಿಲ್ ಕಾರ್ಪೊರೇಷನ್ ಆಫ್ ಇಂಡಿಯಾ ಎಂದು ಸುಳ್ಳು ವೆಬ್ ಸೈಟ್ ಸೃಷ್ಟಿಸಿ ಶಿರಸಿಯ ಬಸವೇಶ್ವರ ಕಾಲನಿಯ ನಿವಾಸಿ ದೇವಿದಾಸ ವೀರಪ್ಪ ಪಾಲೇಕರ್ ಇವರಿಂದ ಬರೋಬ್ಬರಿ .17,24,000 ರೂ. ವಂಚನೆ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.
ಶಿರಸಿ (ಜೂ.22): ಮಹಾರಾಷ್ಟ್ರದ ಇಬ್ಬರು ವ್ಯಕ್ತಿಗಳು ಇಂಡಿಯಲ್ ಆಯಿಲ್ ಕಾರ್ಪೊರೇಷನ್ ಆಫ್ ಇಂಡಿಯಾ ಎಂದು ಸುಳ್ಳು ವೆಬ್ ಸೈಟ್ ಸೃಷ್ಟಿಸಿ ಶಿರಸಿಯ ಬಸವೇಶ್ವರ ಕಾಲನಿಯ ನಿವಾಸಿ ದೇವಿದಾಸ ವೀರಪ್ಪ ಪಾಲೇಕರ್ ಇವರಿಂದ ಬರೋಬ್ಬರಿ .17,24,000 ರೂ. ವಂಚನೆ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.
ಪಾಲೇಕರ ತಮ್ಮ ಮಗನಾದ ಸಂಖೇತ ಹೆಸರಿನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಆಫ್ ಇಂಡಿಯಾದ ಡೀಲರ್ ಶಿಪ್ ಪಡೆಯಲು ಹೋಗಿ ವಂಚಕರ ಬಲೆಗೆ ಬಿದ್ದು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಮುಂಬೈನ ಅಭಿಷೇಕ್ ಮಂಡಲ್ ಮತ್ತು ಮನೀಷ್ ಗ್ರೋವರ್ ಎಂಬ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
undefined
Karnataka crimes: ದರೋಡೆಗೆ ಸಂಚು ಹಾಕಿದ್ದ ರೌಡಿ ಶೀಟರ್‌ನ ಐವರು ಸಹಚರರ ಸೆರೆ
ಆನ್‌ಲೈನ್ ಕ್ಲಾಸ್ ಹೆಸರಿನಲ್ಲಿ ಹಣ ಹಾಕಿಸಿಕೊಂಡು ವಂಚನೆ
ಚನ್ನಪಟ್ಟಣ: ಬೈಜೂಸ್ ಆನ್‌ಲೈನ್ ಕ್ಲಾಸ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ ಹಣ ಹಾಕಿಸಿಕೊಂಡು ವಂಚಿಸಿರುವ ಘಟನೆ ನಗರದ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ಬಡಾವಣೆಯ ಮಂಜುನಾಥ್ ತಮ್ಮ ಇಬ್ಬರು ಮಕ್ಕಳಿಗೆ ಬೈಜೂಸ್ ಆನ್‌ಲೈನ್ ಟಿಟೋರಿಯಲ್‌ನಲ್ಲಿ ಕೋರ್ಸ್‌ಗೆ ಸೇರಿಸಿದ್ದು, ಕೋರ್ಸ್ ಅನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಕೆಲ ದಿನಗಳ ಹಿಂದೆ ಕರೆ ಮಾಡಿದ ಅನಾಮಧೇಯ ವ್ಯಕ್ತಿ, ನೀವು ಕೋರ್ಸ್‌ಗಾಗಿ ಪಾವತಿಸಿರುವ 64 ಸಾವಿರ ಹಣ ಹಿಂದಿರುಗಿಸಲಾಗುವುದು. ಆದರೆ, ನಿಮ್ಮ ಮಕ್ಕಳಿಗೆ ನೀಡಿರುವ ಟ್ಯಾಬ್, ಪುಸ್ತಕದ ಹಣ 15,300 ರು. ಪಾವತಿಸುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಮಂಜುನಾಥ್ ಯುಪಿಐ ಐಡಿ ಮುಖಾಂತರ ಹಣ ಪಾವತಿಸಿದ್ದು, ನಂತರ ವಿಚಾರಿಸಿದರೆ ಕೋರ್ಸ್ ರದ್ದಾಗಿಲ್ಲ. ಯಾರೋ ಸಂಸ್ಥೆ ಹೆಸರಿನಲ್ಲಿ ವಂಚಿಸಿದ್ದಾರೆ ಎಂಬ ಮಾಹಿತಿ ಬೈಜೂಸ್‌ನಿಂದ ದೊರೆತಿದೆ. ಮಂಜುನಾಥ್ ರಾಮನಗರದ ಸಿಎನ್‌ಇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನೆಗಳ್ಳನಿಂದ 8 ಲಕ್ಷ ಮೌಲ್ಯದ 161.8 ಗ್ರಾಂ ಚಿನ್ನಾಭರಣ ವಶ
ರಾಮನಗರ: ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ರುಪಾಯಿ ಮೌಲ್ಯದ 161.8 ಗ್ರಾಂ ತೂಕದ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆ ಯಾದಗಿರಿ ತಾಲೂಕು ಬಲಿಚಕ್ರ ಗ್ರಾಮದ ವಾಸಿ ಮಲ್ಲಿಕಾರ್ಜುನ್ ಬಂಧಿತ ಆರೋಪಿ. ಬೆಂಗಳೂರು ಉತ್ತರಹಳ್ಳಿಯಲ್ಲಿ ವಾಸವಾಗಿದ್ದ ಈತ ಫ್ಲಿಪ್ ಕಾರ್ಚ್‌ನಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಜೂನ್ 5ರಂದು ಬೆಂಗಳೂರು ದಕ್ಷಿಣ ತಾಲೂಕು ತಾತಗುಣಿ ಗ್ರಾಮದ ಲತಾ ಅವರ ಮನೆಯ ಬೀಗ ಒಡೆದು ಚಿನ್ನಾಭರಣ ದೋಚಿದ್ದನು. ಈ ಪ್ರಕರಣದ ಪತ್ತೆಗಾಗಿ ರಚನೆ ಮಾಡಿದ್ದ ವಿಶೇಷ ತಂಡ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ.ಸುರೇಶ್ ಮಾರ್ಗದರ್ಶನದಂತೆ ಡಿವೈಎಸ್ಪಿ ದಿನಕರ ಶೆಟ್ಟಿನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿರೀಕ್ಷಕ ವಿಜಯ ಕುಮಾರ್, ಪಿಎಸ್‌ಐ ಲೋಕೇಶ್, ಎಎಸ್‌ಐ ಮುನಿರಾಜು, ಪೇದೆಗಳಾದ ಶೀಲವಂತರ್, ಮುರಳೀಧರ್, ಲಿಂಗಪ್ಪ, ವಿರೂಪಾಕ್ಷ, ರವಿ ಪಾಲ್ಗೊಂಡಿದ್ದರು.
ಹೆಂಡ್ತಿ ಕೊಲ್ಲೋಕೆ ಕಂಟ್ರಿ ಪಿಸ್ತೂಲ್ ಖರೀದಿಸಿದ ಪತಿ: ಗನ್ ಇಟ್ಕೊಳೋಕೆ ಗೊತ್ತಾಗದೇ ಜೈಲು ಸೇರಿದ