
ಮೈಸೂರು(ಜೂ.22): ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಹಳ್ಳಿ- ಬೆಳವಾಡಿ ರಸ್ತೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಜೂ. 15 ರಂದು ಬೆಳವಾಡಿ ನಿವಾಸಿ ಹೇಮಂತ ಸ್ವಾಮಿ ಎಂಬವರ ಮೇಲೆ ಆರೋಪಿಗಳು ನಡು ರಸ್ತೆಯಲ್ಲಿ ಕುಡುಗೋಲಿನಿಂದ ಕೊಚ್ಚಿ ಹಾಗೂ ತಲೆಯ ಮೇಲೆ ಕಲ್ಲೆತ್ತಿ ಹಾಕಿ ಕೊಲೆ ಮಾಡಿದ್ದರು. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೋಮ್ ವರ್ಕ್ ಮಾಡಿಸದ ಗಂಡನ ಮೇಲಿನ ಕೋಪಕ್ಕೆ, ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ
ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಜೂ. 17 ರಂದು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಸಿಪಿ ಎಂ. ಮುತ್ತುರಾಜ್, ಎಸಿಪಿ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ವಿಜಯನಗರ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಎಸ್. ರವಿಶಂಕರ್, ಎಸ್‌ಐಗಳಾದ ವಿಶ್ವನಾಥ್, ಅಶ್ವಿನಿ, ನಾರಾಯಣ, ಸಿಬ್ಬಂದಿ ಶಂಕರ, ಲೋಕೇಶ್, ಪ್ರಭಾಕರ್, ಸೋಮಾರಾಧ್ಯ, ಶ್ರೀನಿವಾಸಮೂರ್ತಿ, ಅಣ್ಣಪ ದೇವಾಡಿಗಾ, ಕಾಮಣ್ಣ, ಕೆ.ಎನ್. ಮಂಜುನಾಥ್, ಪ್ರದೀಪ್ ಕುಮಾರ್, ಸಂಜಯ್ ಪವಾರ್, ನಂದೀಶ, ತಿಲಕ್‌ಕುಮಾರ ಹಾಗೂ ಎಸಿಪಿ ಸ್ಕಾ$್ವಡ್‌ನ ಮುರಳೀಧರ, ಉಮೇಶ, ಲಿಖಿತಾ, ಸುನೀಲ, ರಾಘವೇಂದ್ರ ಮತ್ತು ಸಿಡಿಆರ್ ವಿಭಾಗದ ಕುಮಾರ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಅಭಿನಂದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ