ಕಾಮದ ತೀಟೆಗೆ ಮಹಿಳೆಯ ಗಂಡನನ್ನು ಕೊಂದ ಪ್ರಿಯಕರ, ಅಕ್ರಮ ಸಂಬಂಧದ ರಹಸ್ಯ ಬಯಲು

By Suvarna News  |  First Published Jul 2, 2022, 10:50 PM IST

* ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ಗುರಣ್ಣನ ಕೊಲೆ ರಹಸ್ಯ ಬಯಲು
* ಸಂತೋಷನನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ತನ್ನದೇ ಅಕ್ರಮ ಸಂಬಂಧದ ರಹಸ್ಯ ಬಿಚ್ಚಿಟ್ಟ ಪತ್ನಿ
* ಸಂತೋಷ ಜೊತೆ ಸಂಬಂಧ ಬೆಳೆಸಿ ತಪ್ಪು ಮಾಡಿದೆ ಎಂದು ಮಹಾದೇವಿ ಕಣ್ಣೀರು


ಕಲಬುರಗಿ, (ಜುಲೈ.02): ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ಗುರಣ್ಣನ ಕೊಲೆ ರಹಸ್ಯ ಬಯಲಾಗಿದೆ. ಜೂನ್ 14 ರಂದು ಜೇವರ್ಗಿ ತಾಲೂಕಿನ ಇಜೇರಿಯಿಂದ ನಾಪತ್ತೆಯಾಗಿದ್ದ ಗುರಣ್ಣ, ಜೂನ್ 15 ರಂದು ಅಫಜಲಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನ ಗದ್ದೆಯಲ್ಲಿ ಶವ ಸಿಕ್ಕಿತ್ತು.

ಮಹಿಳೆಯೊಂದಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ  ಗುರಣ್ಣನನ್ನು ಕೊಲೆ ಮಾಡಲಾಗಿದೆ ಎನ್ನುವ ಸ್ಫೋಟ ಮಾಹಿತಿ ತಿಳಿದುಬಂದಿದ್ದು,ಗುರಣ್ಣನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನಿಂದಲೇ  ಈ ಹತ್ಯೆ ನಡೆದಿದೆ.

Tap to resize

Latest Videos

ಕೊಲೆಗಾರ ಸಂತೋಷನನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆಯೇ ಇತ್ತ ಕೊಲೆಯಾದ ಗುರಣ್ಣನ ಪತ್ನಿ ಮಹಾದೇವಿ ತನ್ನದೇ ಅಕ್ರಮ ಸಂಬಂಧದ ರಹಸ್ಯ ಬಿಚ್ಚಿಟ್ಟಿದ್ದಾಳೆ.

ಶಿಕ್ಷಕನ ರಾಸಲೀಲೆ ವಿಡಿಯೋ ವೈರಲ್, ಕಾಮುಕನ ಮತ್ತೊಂದು ಅಸಲಿ ಮುಖ ಬಿಚ್ಚಿಟ್ಟ ಗ್ರಾಮಸ್ಥರು

ಹೌದು... ಆತನೊಂದಿಗೆ ನನ್ನ ಸಂಬಂಧ ಇದ್ದಿದ್ದು ಸತ್ಯ, ಆದ್ರೆ ನಾನು ಕೊಲೆ ಮಾಡು ಅಂದಿಲ್ಲ. ನಾನು ಸಂತೋಷ ಜೊತೆ ಸಂಬಂಧ ಬೆಳೆಸಿ ತಪ್ಪು ಮಾಡಿದೆ. ಅವನು ನನ್ನ ಗಂಡನನ್ನು ಕೊಲ್ಲುತ್ತಾನೆಂದು ಉಹಿಸಿರಲಿಲ್ಲ. ನನಗೂ ಶಿಕ್ಷೆ ಕೊಡಿ ಎಂದು ಪೊಲೀಸರು ವಿಚಾರಣೆ ಆರಂಭಿಸುವ ಮುನ್ನವೇ ಮಾಧ್ಯಮಕ್ಕೆ ಪತ್ನಿ ಮಹಾದೇವಿ ಹೇಳಿದ್ದಾಳೆ.

ಮಹಾದೇವಿ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎನ್ನುವ ಕಾರಣಕ್ಕೆ ಗುರಣ್ಣನನ್ನು ಸಂತೋಷ್ ಕೊಲೆ ಮಾಡಿದ್ದಾನೆ. ಪಾರ್ಟಿ ಮಾಡಿಸಿ ಕ್ರೂಸರ್ ನಲ್ಲೇ ಕೊಲೆಗೈದ ಹಂತಕರು, ಬಳಿಕ ಕತ್ತಿಗೆ ಬಿಗಿದ ಹಗ್ಗ ಭೀಮಾ ನದಿಗೆ, ಶವ ಕಬ್ಬಿನ ಗದ್ದೆಗೆ ಎಸೆದು ಪರಾರಿಯಾಗಿದ್ದರು. ಗಂಡನನ್ನು ಕೊಂದ ನಂತರವೂ ಮನೆಗೆ ಹೋಗಿ ಆತನ ಪತ್ನಿಯನ್ನು ಮೀಟ್ ಮಾಡಿದ್ದಾನೆ. 

ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಸಂತೋಷ್‌ನನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸಿದ್ದಾರೆ. 

click me!