* ಸಿಂಧನೂರು ತಾಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕನಿಂದ ಕೃತ್ಯ
* ಮಕ್ಕಳ ಜತೆಗೂ ಅಸಭ್ಯ ವರ್ತನೆ, ಪಾಲಕರಿಂದ ಧರ್ಮದೇಟು
* ಪಾಲಕರಿಂದ ಧರ್ಮದೇಟು
ಕಾರಟಗಿ(ಜು.02): ಸರ್ಕಾರಿ ಶಾಲೆಯ ಶಿಕ್ಷಕನೋರ್ವ ಮಹಿಳೆಯರೊಂದಿಗೆ ರಾಸಲೀಲೆ ನಡೆಸಿದ, ಮಕ್ಕಳೊಂದಿಗೂ ಅಸಭ್ಯವಾಗಿ ವರ್ತಿಸಿದ ವಿಡಿಯೋಗಳು ಬಯಲಾಗಿದ್ದು, ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ತಕ್ಷಣ ಸೇವೆಯಿಂದ ಅಮಾನತು ಮಾಡಿದೆ.
ಪಟ್ಟಣದ ಜೆಪಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಮ್ಮದ ಅಜರುದ್ದೀನ್ ಎಂಬ ಈ ಶಿಕ್ಷಕ ಪಕ್ಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ.
ಮಹಿಳೆ ಜತೆ ರಾಸಲೀಲೆ, ಮಕ್ಕಳ ಗುಪ್ತಾಂಗ ಮುಟ್ಟಿ ಆನಂದ: ಶಿಕ್ಷಕನ ಕಾಮದಾಟ ಬಯಲು ಮಾಡಿದ ಚಿಪ್
ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ನಿತ್ಯ ರಾತ್ರಿ ಆಟ- ಪಾಠದ ನೆಪದಲ್ಲಿ ನಂತರ ಅವರ ಬಟ್ಟೆಗಳನ್ನು ಕಳಚಲು ಮುಂದಾಗುತ್ತಾನೆ. ಇತರೆ ಮಕ್ಕಳಿಂದ ಮಕ್ಕಳ ಬಟ್ಟೆ ಕಳಚಲು ಸೂಚಿಸಿ ಅವರ ಅಂಗಾಂಗಗಳ ಮೇಲೆ ಕೈಯಾಡಿಸಿ ವಿಕೃತ ಸಂತೋಷ ಪಡುತ್ತಿರುವ ದೃಶ್ಯಗಳು ವಿಡಿಯೋಗಳಲ್ಲಿ ಸೆರೆಯಾಗಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ ಎಂದು ಸಿಂಧನೂರು ಬಿಇಒ ಶರಣಪ್ಪ ವಟಗಲ್ ತಿಳಿಸಿದ್ದಾರೆ.
‘ಕನ್ನಡಪ್ರಭ’ಕ್ಕೆ ಲಭ್ಯವಾದ ವಿಡಿಯೋಗಳಲ್ಲಿ ಈ ಶಿಕ್ಷಕ ಮಕ್ಕಳೊಂದಿಗಿನ ಆಟ ಚೆಲ್ಲಾಟ ಮತ್ತು ಇಬ್ಬರು ಮಹಿಳೆಯರೊಂದಿಗೆ ರಾಸಲೀಲೆ ಮಾಡಿದ್ದಾನೆ. ರಾಸಲೀಲೆಯ ಕ್ಷಣಗಳನ್ನು ಸ್ವತಃ ಶಿಕ್ಷಕನೇ ಸೆಲ್ಫಿ ರೀತಿಯಲ್ಲಿ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿರುವುದು ಸ್ಪಷ್ಟವಾಗಿ ಸೆರೆಯಾಗಿದೆ.
ಕೊಪ್ಪಳ: ಗ್ರಾಮಕ್ಕೆ ನುಗ್ಗಿದ 3 ಕರಡಿಗಳು, ಬೆನ್ನತ್ತಿ ಓಡಿಸಿದ ಗ್ರಾಮಸ್ಥರು
ಪಾಲಕರಿಂದ ಧರ್ಮದೇಟು:
ಮತ್ತೊಂದೆಡೆ ಜೆಪಿ ನಗರದಲ್ಲಿನ ಕೆಲ ಬಾಲಕರು ಶಿಕ್ಷಕನ ವರ್ತನೆ ಕುರಿತು ತಮ್ಮ ಪಾಲಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪಾಲಕರು ಇತ್ತೀಚೆಗೆ ಶಿಕ್ಷಕನ ಮನೆಗೆ ತೆರಳಿ ಧರ್ಮದೇಟು ನೀಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಶಿಕ್ಷಕ ಕಳೆದ ಮೂರು ದಿನಗಳಿಂದ ಶಾಲೆಗೆ ಹಾಜರಾಗಿಲ್ಲ ಮತ್ತು ಕಾರಟಗಿ ಜೆಪಿ ನಗರದ ಬಾಡಿಗೆ ಮನೆಯಲ್ಲೂ ಕಾಣುತ್ತಿಲ್ಲವೆಂದು ಹೇಳಲಾಗುತ್ತಿದೆ.
ಈ ವಿಷಯ ಅರಿತ ರಾಯಚೂರು ಡಿಡಿಪಿಐ ವೃಷಭೇಂದ್ರ ಹಾಗೂ ಸಿಂಧನೂರು ಬಿಇಒ ಶರಣಪ್ಪ ವಟಗಲ್ ಶಿಕ್ಷಕನನ್ನು ಕಚೇರಿಗೆ ಕರೆತರಲು ಸಂಜೆಯವರೆಗೂ ಹರಸಾಹಸ ಪಟ್ಟಿದ್ದಾರೆ. ಶಿಕ್ಷಕ ತನ್ನ ಮೊಬೈಲ್ ಸ್ವಿಚ್‌್ಡ ಆಫ್ ಮಾಡಿಕೊಂಡಿದ್ದಾನಂತೆ. ಈ ಹಿನ್ನೆಲೆಯಲ್ಲಿ ಆರೋಪಿ ಶಿಕ್ಷಕನನ್ನು ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ ಎಂದು ಸಿಂಧನೂರು ಬಿಇಒ ಶರಣಪ್ಪ ವಟಗಲ್ ಖಚಿತಪಡಿಸಿದರು.