ಶಿಕ್ಷಕನ ರಾಸಲೀಲೆ ವಿಡಿಯೋ ವೈರಲ್, ಕಾಮುಕನ ಮತ್ತೊಂದು ಅಸಲಿ ಮುಖ ಬಿಚ್ಚಿಟ್ಟ ಗ್ರಾಮಸ್ಥರು

Published : Jul 02, 2022, 10:06 PM ISTUpdated : Jul 02, 2022, 11:32 PM IST
 ಶಿಕ್ಷಕನ ರಾಸಲೀಲೆ ವಿಡಿಯೋ ವೈರಲ್, ಕಾಮುಕನ ಮತ್ತೊಂದು ಅಸಲಿ ಮುಖ ಬಿಚ್ಚಿಟ್ಟ ಗ್ರಾಮಸ್ಥರು

ಸಾರಾಂಶ

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಶಿಕ್ಷಕ ಕಾಮುಕ ಅಜರುದ್ದಿನ್‌ ಮತ್ತೊಂದು ಅಸಲಿ ಮುಖ ಬಟಾಬಯಲಾಗಿದೆ.

ರಾಯಚೂರು, (ಜುಲೈ.02):  ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಶಿಕ್ಷಕ ಅಜರುದ್ದಿನ್ ಕಾಮ ಪುರಾಣ ಬಯಲಾಗಿದ್ದು, ಈತನ ವಿಡಿಯೋಗಳು ವೈರಲ್ ಆಗಿವೆ. ಇದರ ಬೆನ್ನಲ್ಲೇ ಇದೀಗ ಕಾಮುಕ ಶಿಕ್ಷಕನ ಮತ್ತೊಂದು ಅಸಲಿ ಮುಖವನ್ನು ಗ್ರಾಮಸ್ಥರು ಬಿಚ್ಚಿಟ್ಟಿದ್ದಾರೆ.

ಕೆಲ‌ ದಿನಗಳ ಕಾಲ ಸಿಂಗಾಪುರ ಗ್ರಾಮದಲ್ಲಿ ವಾಸವಿದ್ದ ಕಾಮುಕ ಅಜರುದ್ದಿನ್ ಪತ್ನಿಗೆ ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದನು. ಪತಿಯ ಕಿರುಕುಳ ತಾಳಲಾರದೆ ಪತ್ನಿ ಮನೆ ಬಿಟ್ಟು ಹೋಗಿದ್ದಳು ಎಂದು ಹೇಳಿದ್ದಾರೆ.

ಮಹಿಳೆ ಜತೆ ರಾಸಲೀಲೆ, ಮಕ್ಕಳ ಗುಪ್ತಾಂಗ ಮುಟ್ಟಿ ಆನಂದ: ಶಿಕ್ಷಕನ ಕಾಮದಾಟ ಬಯಲು ಮಾಡಿದ ಚಿಪ್

ಪತ್ನಿ ಮನೆಬಿಟ್ಟು ಹೋಗಿದ್ದರಿಂದ ಪೊರೆಬಿಟ್ಟ ಹಾವಿನಂತಾಗಿದ್ದ ಕಾಮುಕ ಶಿಕ್ಷಕನಿಗೆ ಯಾರೂ ಹೇಳೋರು ಕೇಳೋದು ಇಲ್ಲದಂತಾಗಿದ್ದು, ಪರ ಸ್ತ್ರೀಯರೊಂದಿಗೆ ಚಕ್ಕಂದವಾಡುತ್ತ ಮಜಾ ಮಾಡಿದ್ದಾನೆ. ಪಾಠ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿಗಳನ್ನ ಮನೆಗೆ ಕರೆಯಿಸಿಕೊಂಡು ಅವರ ಗುಪ್ತಾಂಗಕ್ಕೆ ಕಟ್ಟಿಗೆಯಿಂದ ತಿವಿಯುತ್ತಾ ವಿಕೃತಿ ಮೆರೆದಿದ್ದಾನೆ. ಅಲ್ಲದೇ ಪರ ಸ್ತ್ರೀಯರನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಮಹಿಳೆಯರೊಂದಿಗೆ ಪಲ್ಲಂಗದಾಟವನ್ನ ಸ್ವತಃ ವಿಡಿಯೋ ಮಾಡಿಕೊಂಡಿದ್ದಾನೆ. ಇದೀಗ ಆ ವಿಡಿಯೋಗಳು ಹೊರಬಿದ್ದಿದ್ದು, ಶಿಕ್ಷಕ ಅಜರುದ್ದಿನ್ ಕಾಮದಾಟ ಬಟಾಬಯಲಾಗಿದೆ.

ಸಂತ್ರಸ್ತೆ ದೂರು
ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ, ಸಂತ್ರಸ್ತ ಮಹಿಳೆಯೊಬ್ಬರು ಶಿಕ್ಷಕನ ವಿರುದ್ಧ ಕಾರಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಾನು ಅನುಭವಿಸಿದ ಚಿತ್ರಹಿಂಸೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

ನನ್ನ‌ ಜತೆ ಲೈಂಗಿಕ ಸಂಪರ್ಕ ಮಾಡಬೇಕು. ಇಲ್ಲವಾದಲ್ಲಿ ನಿನ್ನನ್ನು ಸಾಯಿಸುತ್ತೇನೆ ಎಂದು ಶಿಕ್ಷಕ ಬೆದರಿಕೆ ಹಾಕಿದ್ದ. ಆರಂಭದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸ್ತೀನಿ ಎಂದು ನನ್ನನ್ನು ಪರಿಚಯ ಮಾಡಿಕೊಂಡಿದ್ದ. ತದನಂತರ ಪುಸಲಾಯಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಪದೇ-ಪದೇ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದ. ಇದಕ್ಕೆ ವಿರೋಧಿಸಿದ್ದಕ್ಕೆ ಅಶ್ಲೀಲ ವಿಡಿಯೋ ಮೊಬೈಲ್​ನಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡುವೆ ಎಂದು ಬೆದರಿಸಿದ್ದ. ಅವನ ಕೊಟ್ಟ ಕಿರುಕುಳದಿಂದ ಸಾಕಷ್ಟು ನೊಂದಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಸದ್ಯ ಆರೋಪಿ ಅಜುರುದ್ದೀನ್ ನನ್ನು ಅಮಾನತುಗೊಳಿಸಲಾಗಿದ್ದು, ತಲೆಮರೆಸಿಕೊಂಡಿರುವ  ಕಾಮುಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮಕ್ಕಳ ಗುಪ್ತಾಂಗದ ಜತೆ ಚೆಲ್ಲಾಟ
ಪ್ರತಿನಿತ್ಯ ಮಕ್ಕಳೊಂದಿಗೆ ಆಟವಾಡುವ ನೆಪದಲ್ಲಿ ತಡರಾತ್ರಿವರೆಗೂ ಕಾಲಕಳೆಯುತ್ತಿದ್ದ ಮೊಹ್ಮದ್​ ಅಜರುದ್ದೀನ್​, ಮಗುವೊಂದರ ತಲೆಯ ಮೇಲೆ ಗ್ಲಾಸ್​ ಇಟ್ಟು, ಎರಡೂ ಕೈಗಳನ್ನು ಮೇಲೆತ್ತಲು ಹೇಳುತ್ತಾನೆ, ಮಗು ಶಿಕ್ಷಕ ಹೇಳಿದಂತೆ ಮಾಡುವಾಗ ಬೇರೆ ಮಕ್ಕಳಿಂದ ಚಡ್ಡಿ ಕಳಚಿಸುತ್ತಾನೆ. ಬಳಿಕ ಕಟ್ಟಿಗೆಯಿಂದ ಗುಪ್ತಾಂಗಕ್ಕೆ ತಿವಿದು, ವಿಕೃತ ಆನಂದ ಪಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಮಗು ಅತ್ತರೂ ಬಿಡದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅಲ್ಲದೆ, ಈತ ಬೇರೆ ಬೇರೆ ಮಹಿಳೆಯರೊಂದಿಗಿನ ನಡೆಸಿದ ಕಾಮದಾಟವನ್ನೂ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾನೆ. ಇತ್ತೀಚೆಗೆ ಶಿಕ್ಷಕನ ಮೊಬೈಲ್​ ಕಳೆದಿದ್ದು ಯಾರದೋ ಕೈಗೆ ದೊರೆತಿದೆ. ಮೊಬೈಲ್​ನ ಮೆಮೋರಿ ಕಾರ್ಡ್​ ತೆಗೆದಾಗ ಶಿಕ್ಷಕನ ಕರ್ಮಕಾಂಡ ಹೊರಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!