ಕೆಲಸ ಮಾಡಲು ಹೋಗು ಎಂದಿದ್ದಕ್ಕೆ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿ ತಾನೂ ಸಹ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ಹಳೇಹುಬ್ಬಳ್ಳಿ ಇಸ್ಲಾಂಪುರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಹುಬ್ಬಳ್ಳಿ (ಡಿ.9): ಕೆಲಸ ಮಾಡಲು ಹೋಗು ಎಂದಿದ್ದಕ್ಕೆ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿ ತಾನೂ ಸಹ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ಹಳೇಹುಬ್ಬಳ್ಳಿ ಇಸ್ಲಾಂಪುರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಸಾಹಿಸ್ತಾ ಬೇಪಾರಿ(25) ಕೊಲೆಯಾಗಿದ್ದು, ಅವಳ ಪತಿ ಮಲ್ಲಿಕ್ (28) ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಮಲ್ಲಿಕ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ಅವನು ಕೆಲಸಕ್ಕೆ ಹೋಗದ ಕಾರಣ ದಂಪತಿಗಳಿಬ್ಬರ ನಡುವೆ ಜಗಳ ನಡೆಯುತ್ತಿತ್ತು.
ಭಾರತದಲ್ಲಿ ದುಷ್ಕೃತ್ಯಕ್ಕೆ ಐಸಿಸ್ ಸಂಚು; ಬೆಂಗಳೂರು ಸೇರಿದಂತೆ ದೇಶಾದ್ಯಂತ 41 ಕಡೆ ಎನ್‌ಐಎ ದಾಳಿ!
ಶುಕ್ರವಾರ ಬೆಳಗ್ಗೆ ಇದೆ ವಿಚಾರವಾಗಿ ಜಗಳ ಪ್ರಾರಂಭವಾಗಿ ವಿಕೋಪಕ್ಕೆ ಹೋಗಿ ಮಲ್ಲಿಕ್ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಲ್ಲದೇ ತಾನೂ ಮನೆಯ ಮಹಡಿಯ ಕಬ್ಬಿಣದ ಎಂಗ್ಲರ್‌ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಕಸಬಾಪೇಟ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಮೃತ ದೇಹಗಳ ಕಿಮ್ಸ್ ಶವಗಾರಕ್ಕೆ ರವಾನಿಸಿದರು. ಯಾವ ಕಾರಣಕ್ಕೆ ಘಟನೆಯಾಗಿದೆ ಎಂಬುದು ನಿಖರವಾದ ಮಾಹಿತಿ ದೊರೆತಿಲ್ಲ. ತನಿಖೆಯಿಂದ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದರು.
ಜಮೀನು ವಿವಾದ ಮಾನಸಿಕ ಕಿರುಕುಳಕ್ಕೆ ರೈತ ಆತ್ಮಹತ್ಯೆ
ವಿಜಯಪುರ: ಜಮೀನಿನ ಸೀಮೆಯ ಜಗಳದಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಸಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆ ಮೂವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 25 ಸಾವಿರ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ.
ದುಂಡಪ್ಪ ಗಿರಿಸಾಗರ, ಅಪ್ಪಣ್ಣ ಗಿರಿಸಾಗರ, ಯಲ್ಲವ್ವ ಅಪ್ಪಣ್ಣ ಗಿರಿಸಾಗರ ಶಿಕ್ಷೆಗೆ ಗುರಿಯಾದವರು. ನಾಗಠಾಣ ಗ್ರಾಮದ ಶರಣಪ್ಪ ಅರಕೇರಿ ಎಂಬಾತ 2017 ಅಕ್ಟೋಬರ್ 25ರಂದು ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ದಿನ ಶರಣಪ್ಪ ಜತೆಗೆ ಪಕ್ಕದ ಜಮೀನು ಮಾಲೀಕರಾದ ದುಂಡಪ್ಪ ಗಿರಿಸಾಗರ, ಅಪ್ಪಣ್ಣ ಗಿರಿಸಾಗರ, ಯಲ್ಲವ್ವ ಅಪ್ಪಣ್ಣ ಗಿರಿಸಾಗರ ಇವರು ಜಗಳ ತೆಗೆದು ಮಾನಸಿಕ ಕಿರುಕುಳ ನೀಡಿದ್ದರು ಎಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ತನಿಖೆ ನಡೆಸಿದ ಪಿಎಸ್‍ಐ ಸುರೇಶ ಗಡ್ಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಾಜಿ ಅನಂತ ನಾಲವಡೆ ಮೂವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಪ್ರಧಾನ ಅಭಿಯೋಜಕ ಎಸ್.ಎಚ್.ಹಕೀಂ ವಾದ ಮಂಡಿಸಿದ್ದರು.