ಬಸ್, ಜಾತ್ರೆ ಜನಜಂಗುಳಿ ಇದ್ದಲ್ಲಿ ಆರು ಕಳ್ಳಿಯರ ಗ್ಯಾಂಗ್ ಹಾಜರ್! ಮಹಿಳೆಯರ ಮಾಂಗಲ್ಯ ಕ್ಷಣಮಾತ್ರದಲ್ಲಿ ಮಾಯ!

Published : Dec 09, 2023, 08:48 AM IST
ಬಸ್, ಜಾತ್ರೆ ಜನಜಂಗುಳಿ ಇದ್ದಲ್ಲಿ ಆರು ಕಳ್ಳಿಯರ ಗ್ಯಾಂಗ್ ಹಾಜರ್! ಮಹಿಳೆಯರ ಮಾಂಗಲ್ಯ ಕ್ಷಣಮಾತ್ರದಲ್ಲಿ ಮಾಯ!

ಸಾರಾಂಶ

ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದ್ದ ಎರಡು ಕಳ್ಳತನ ಪ್ರಕರಣ ಭೇದಿಸಿರುವ ಖಾನಾಪುರ ಪೊಲೀಸರು ಶುಕ್ರವಾರ ₹2.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 40 ಸಾವಿರ ನಗದು ವಶಪಡಿಸಿಕೊಂಡು 6 ಜನ ಮಹಿಳೆಯರನ್ನು ಬಂಧಿಸಿದ್ದಾರೆ.

ಖಾನಾಪುರ (ಡಿ.9) :  ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದ್ದ ಎರಡು ಕಳ್ಳತನ ಪ್ರಕರಣ ಭೇದಿಸಿರುವ ಖಾನಾಪುರ ಪೊಲೀಸರು ಶುಕ್ರವಾರ ₹2.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 40 ಸಾವಿರ ನಗದು ವಶಪಡಿಸಿಕೊಂಡು 6 ಜನ ಮಹಿಳೆಯರನ್ನು ಬಂಧಿಸಿದ್ದಾರೆ.

ನ.17ರಂದು ಪಟ್ಟಣದ ಬಸ್ ನಿಲ್ದಾಣದಿಂದ ಅಳ್ನಾವರಕ್ಕೆ ತೆರಳುವ ಬಸ್ಸಿನಲ್ಲಿ ಹತ್ತುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ಮಂಗಳಸೂತ್ರ ಹಾಗೂ ಸರ ಸೇರಿ ₹ 2 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಖಾನಾಪುರ ಪೋಲೀಸರು ಚಿನ್ನದ ಆಭರಣ ಕದ್ದ ಆರೋಪದಡಿ ಮಹಾರಾಷ್ಟ್ರ ಮೂಲದ ನೀತಾ ಶಂಕರ ಲೋಂಡೆ, ರೂಪಾಲಿ ರವಿ ಕಾಳೆ ಮತ್ತು ಮೇಘಾ ನಾಮದೇವ ಜಾಧವ ಎಂಬುವರನ್ನು ಬಂಧಿಸಿ ಆರೋಪಿಗಳ ವಶದಲ್ಲಿದ್ದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಪಾರ್ಟ್‌ ಟೈಂ ಜಾಬ್ ಹೆಸರಿನಲ್ಲಿ ಮಹಿಳೆಗೆ 1.47 ಲಕ್ಷ ರೂ. ಉಂಡೇನಾಮ !

ಇನ್ನೊಂದು ಪ್ರಕರಣದಲ್ಲಿ ಕಳೆದ ವಾರ ತಾಲೂಕಿನ ಕಾರಲಗಾ ಗ್ರಾಮದ ವೃದ್ಧೆಯೊಬ್ಬರು ಸ್ಥಳೀಯ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ ತಮ್ಮ ಪಿಂಚಣಿ ಹಣ ಡ್ರಾ ಮಾಡಿಕೊಂಡು ಬ್ಯಾಂಕ್‌ನಿಂದ ಹೊರಬರುವ ಸಂದರ್ಭದಲ್ಲಿ ಗಮನ ಬೇರೆಡೆ ಸೆಳೆದು ಅವರ ಕೈಯಲ್ಲಿದ್ದ ಚೀಲ ಕತ್ತರಿಸಿ ಅದರಲ್ಲಿದ್ದ ₹ 40 ಸಾವಿರ ನಗದನ್ನು ದೋಚಿದ್ದರು. ಪ್ರಕರಣದಡಿ ಮಧ್ಯಪ್ರದೇಶ ಮೂಲದ ಪೂಜಾ ಸಂದೀಪ್, ನೀತಾ ಚಿಂಟು ಶಿಶೋಧ್ಯಾಯ ಮತ್ತು ಗೌರಿ ಸಂಜಯ ಬನೇರಿಯಾ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಆನ್‌ಲೈನ್‌ನಲ್ಲಿ ಹಣ ವರ್ಗಾಯಿಸುವೆ ಎಂದು ನಂಬಿಸಿ ₹50,000 ಟೋಪಿ!

ಎಸ್‌ಪಿ ಭೀಮಾ ಶಂಕರ ಗುಳೇದ ಅವರ ಮಾರ್ಗದರ್ಶನದಲ್ಲಿ ನಡೆದ ಎರಡೂ ಪ್ರಕರಣಗಳ ತನಿಖೆಯಲ್ಲಿ ಖಾನಾಪುರ ಠಾಣೆಯ ಪಿಐ ಮಂಜುನಾಥ ನಾಯಕ, ಸಿಬ್ಬಂದಿ ಸಿ.ಎಲ್ ಬಬಲಿ, ಬಾಳಪ್ಪ ಯಲಿಗಾರ, ಜಗದೀಶ ಕಾದ್ರೊಳ್ಳಿ, ಎಸ್.ವ ಕಮಕೇರಿ, ಕವಿತಾ ಗಾವಡೆ, ಶೀಲಾ ಕುಂಬಾರ ಹಾಗೂ ಇತರರು ಪಾಲ್ಗೊಂಡಿದ್ದರು. ಬಂಧಿತರನ್ನು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಧೀಶರ ಸೂಚನೆಯನ್ವಯ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ