ಯುವತಿಯ ಬಾಯಿ ಮುಚ್ಚಿ, ಸ್ಕ್ರೂಡ್ರೈವರ್‌ನಿಂದ 51 ಬಾರಿ ಇರಿದು ಕೊಂದ ಪಾಪಿ..!

Published : Dec 27, 2022, 03:44 PM IST
ಯುವತಿಯ ಬಾಯಿ ಮುಚ್ಚಿ, ಸ್ಕ್ರೂಡ್ರೈವರ್‌ನಿಂದ 51 ಬಾರಿ ಇರಿದು ಕೊಂದ ಪಾಪಿ..!

ಸಾರಾಂಶ

ಆರೋಪಿ ಅಲ್ಲಿಗೆ ಬಂದಾಗ ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇದ್ದಳು. ಅಲ್ಲದೆ, ಆಕೆಯ ಕಿರುಚಾಟ ತಡೆಯಲು ಯುವತಿಯ ಬಾಯಿಯನ್ನು ದಿಂಬಿನಿಂದ ಮುಚ್ಚಿ ಸ್ಕ್ರೂಡ್ರೈವರ್‌ನಿಂದ 51 ಬಾರಿ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi)  ಶ್ರದ್ಧಾ ಹತ್ಯೆ (Shraddha Walker Murder Case) ಪ್ರಕರಣದ ಬಳಿಕ ಅಂತದ್ದೇ ಹೆಚ್ಚು ಸುದ್ದಿಗಳು ವರದಿಯಾಗುತ್ತಿರುತ್ತದೆ. ಈಗ ಅದೇ ರೀತಿ, ಛತ್ತೀಸ್‌ಗಢದ (Chattisgarh) ಕೊರ್ಬಾ ಜಿಲ್ಲೆಯಲ್ಲಿ (Korba District) 20 ವರ್ಷದ ಯುವತಿಯನ್ನು (Women) 51 ಬಾರಿ ಸ್ಕ್ರೂಡ್ರೈವರ್‌ನಿಂದ (Screw Driver) ಇರಿದು ವ್ಯಕ್ತಿಯೊಬ್ಬ ಕೊಂದಿದ್ದಾನೆ (Killed) ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಡಿಸೆಂಬರ್ 24 ರಂದು ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (SECL) ಪಂಪ್ ಹೌಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಕೋರ್ಬಾ) ವಿಶ್ವದೀಪಕ್ ತ್ರಿಪಾಠಿ ತಿಳಿಸಿದ್ದಾರೆ. 

ಆರೋಪಿ ಅಲ್ಲಿಗೆ ಬಂದಾಗ ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇದ್ದಳು. ಅಲ್ಲದೆ, ಆಕೆಯ ಕಿರುಚಾಟ ತಡೆಯಲು ಯುವತಿಯ ಬಾಯಿಯನ್ನು ದಿಂಬಿನಿಂದ ಮುಚ್ಚಿ ಸ್ಕ್ರೂಡ್ರೈವರ್‌ನಿಂದ 51 ಬಾರಿ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ನಂತರ ಸಂತ್ರಸ್ತೆಯ ಸಹೋದರ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದ ಸಹೋದರಿಯನ್ನು ಕಂಡಿದ್ದಾರೆ ಎಂದೂ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಇದನ್ನು ಓದಿ: ಒಂಟಿ ಬಾಡಿಗೆದಾರರೇ ಎಚ್ಚರ: ವಿದ್ಯಾರ್ಥಿಯನ್ನು ಕೊಂದು ದೇಹ 3 ತುಂಡಾಗಿ ಕತ್ತರಿಸಿ ಎಸೆದ ಮನೆ ಮಾಲೀಕ..!

ಛತ್ತೀಸ್‌ಗಢದ ಜಶ್ಪುರ್ ಜಿಲ್ಲೆಯವನಾದ ಆರೋಪಿಯು 3 ವರ್ಷಗಳ ಹಿಂದೆ ಆ ಯುವತಿಯೊಂದಿಗೆ ಗೆಳೆತನ ಸಂಪಾದಿಸಿದ್ದರು ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಆರೋಪಿ ಕಂಡಕ್ಟರ್‌ ಆಗಿದ್ದರು. ಆ ವೇಳೆ ಆಕೆ ಅದೇ ಬಸ್‌ನಲ್ಲಿ ಆಗಾಗ್ಗೆ ಪ್ರಯಾಣ ಮಾಡುತ್ತಿದ್ದಳು. ಈ ವೇಳೆ ಪರಿಚಯವಾಗಿತ್ತು ಎಂದೂ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದೂ ಛತ್ತೀಸ್‌ಗಢದ ಪೊಲೀಸ್‌ ಅಧಿಕಾರಿ ಹೇಳಿದರು.

ನಂತರ, ಆರೋಪಿ ಕೆಲಸಕ್ಕೆಂದು ಗುಜರಾತ್‌ನ ಅಹಮದಾಬಾದ್‌ಗೆ ತೆರಳಿದ್ದ. ಆ ವೇಳೆಯೂ ಇವರಿಬ್ಬರೂ ಫೋನ್‌ನಲ್ಲಿ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಆದರೆ, ಯುವತಿ ಆತನೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ನಿಲ್ಲಿಸಿದ ನಂತರ, ಆರೋಪಿ ಯುವತಿಯ ಪೋಷಕರಿಗೂ ಸಹ ಬೆದರಿಕೆ ಹಾಕಿದ್ದ ಎಂದೂ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿರುವ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿದೆ. 

 ಇದನ್ನೂ ಓದಿ: ವೈದ್ಯೆ ಪತ್ನಿಯನ್ನು ಕೊಂದು 400 KM ದೂರದಲ್ಲಿ ಹೂತು ಹಾಕಿದ ಡಾಕ್ಟರ್

ಇನ್ನು, ಈ ಕೊಲೆ ಪ್ರಕರಣ ಸಂಬಂಧ ಕೇಸ್‌ ದಾಖಲಾಗಿದ್ದು, 4 ಪೊಲೀಸ್‌ ತಂಡಗಳು ಆರೋಪಿಯನ್ನು ಹುಡುಕಲು ಪ್ರಯತ್ನ ಪಡುತ್ತಿವೆ ಎಂದೂ ಅವರು ಹೇಳಿದ್ದಾರೆ.

ಇದೇ ರೀತಿ, ಉತ್ತರ ಪ್ರದೇಶದಲ್ಲಿ ತನ್ನ ಬಾಡಿಗೆದಾರ ಅಂಕಿತ್ ಖೋಕರ್‌ನನ್ನು (Ankit Khokar) ಕೊಂದು ಕಾಲುವೆಗೆ ಎಸೆದು ಆತನ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿದ ಆರೋಪದ ಮೇಲೆ ಯುಪಿಯ ಗಾಜಿಯಾಬಾದ್ ಜಿಲ್ಲೆಯ ಮೋದಿನಗರದಿಂದ ಉಮೇಶ್ ಶರ್ಮಾ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಮೃತ ವಿದ್ಯಾರ್ಥಿ ಇತ್ತೀಚೆಗೆ ಯುಪಿಯ ಬಾಗ್‌ಪತ್‌ನಲ್ಲಿರುವ ತನ್ನ ಪೂರ್ವಜರ ಜಮೀನನ್ನು ಮಾರಾಟ ಮಾಡಿದ್ದು, ಅದರಿಂದ ಆತನಿಗೆ 1 ಕೋಟಿ ರೂ. ಸಿಕ್ಕಿದೆ ಎಂದು ತಿಳಿದುಕೊಂಡ ಮನೆ ಮಾಲೀಕ ಆತನ ಮೇಲೆ ಕಣ್ಣಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಮನೆ ಮಾಲೀಕ ಮಾತ್ರವಲ್ಲದೆ ಪರ್ವೇಶ್ ಎಂದು ಗುರುತಿಸಲಾದ ಹಂತಕನ ಸ್ನೇಹಿತನನ್ನು ಸಹ ಬಂಧಿಸಲಾಗಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: Hassan: ಕಬ್ಬಿನ ಗದ್ದೆಯಲ್ಲಿ ಹೂತಿದ್ದ ಮಹಿಳೆ ಶವ ಹೊರಕ್ಕೆ: ಆರೋಪಿಯ ಬಂಧನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?