Bengaluru Accident: ಫುಟ್‌ಪಾತ್‌ ಗೋಡೆಗೆ ಬೈಕ್‌ ಗುದ್ದಿ ಬಿಬಿಎಂಪಿ ಹೆಲ್ತ್‌ ಇನ್ಸ್ಪೆಕ್ಟರ್‌ ಸಾವು

By Sathish Kumar KH  |  First Published Dec 27, 2022, 12:03 PM IST

ಸಿಲಿಕಾನ್‌ ಸಿಟಿಯಲ್ಲಿ ಬೈಕ್‌ನಲ್ಲಿ ತಡರಾತ್ರಿ ವೇಳೆ ಮನೆಗೆ ಹೋಗುತ್ತಿದ್ದ ಬಿಬಿಎಂಪಿ ಹೆಲ್ತ್‌ ಇನ್ಸ್ಪೆಕ್ಟರ್‌ ಸ್ಯಾಂಕಿಕೆರೆಯ ಟಿ.ಚೌಡಯ್ಯ ರಸ್ತೆಯ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದು, ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.


ಬೆಂಗಳೂರು (ಡಿ.27): ಸಿಲಿಕಾನ್‌ ಸಿಟಿಯಲ್ಲಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೆಲ್ತ್‌ ಇನ್ಸ್ಪೆಕ್ಟರ್‌ ಸ್ಯಾಂಕಿಕೆರೆಯ ಟಿ.ಚೌಡಯ್ಯ ರಸ್ತೆಯ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದು, ಬಿದ್ದು ಸಾವನ್ನಪ್ಪಿದ ಘಟನೆ ತ್ತರಿ ವೇಳೆಯಲ್ಲಿ ನಡೆದಿದೆ.  

ವಾಹನ ಸವಾರರು ಎಷ್ಟೇ ಜಾಗರೂಕತೆ ವಹಿಸಿದರೂ ಸಾಲದು. ವಾಹನದ ಮೇಲೆ ಕುಳಿತು ನಾವು ಸವಾರಿ ಮಾಡುತ್ತಿರುವಾಗ ನಮ್ಮ ಹಿಂಬದಿಯಲ್ಲಿಯೇ ಯಮದೂತನೂ ಕೂಡ ಕುಳಿತಿರುತ್ತಾನೆ. ನಾವು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸಿ ಪ್ರಾಣಪಕ್ಷಿ ಹಾರಿ ಹೋಗಲಿದೆ. ಇನ್ನು ಕೆಲವು ಸಂದರ್ಭದಲ್ಲಿ ನಮ್ಮಿಂದ ಯಾವುದೇ ತಪ್ಪು ಸಂಭವಿಸದಿದ್ದರೂ ಬೇರೆಯವರ ತಪ್ಪಿಗೆ ಅಮಾಯಕ ಜೀವಗಳು ಬಲಿಯಾಗಿರುವುದೂ ಸಾಕಷ್ಟು ಘಟನೆಗಳು ನಡೆದಿವೆ. ಆದರೆ, ಸಿಲಿಕಾನ್‌ ಸಿಟಿಯ ಸ್ಯಾಂಕಿ ಕೆರಯ ಬಳಿ ಬಿಬಿಎಂಪಿ ಹೆಲ್ತ್‌ ಇನ್ಸ್‌ಪೆಕ್ಟರ್‌ ಬಿದ್ದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

Tap to resize

Latest Videos

Bengaluru Accident: ಪ್ರಾರ್ಥನೆಗಾಗಿ ಚರ್ಚ್‌ಗೆ ಹೊರಟ ಯುವಕ ಮಸಣ ಸೇರಿದ: ಫುಟ್‌ಪಾತ್‌ ಗೋಡೆಗೆ ಬೈಕ್ ಗುದ್ದಿ ಸಾವು

ಘಟನೆ ನಡೆದಿದ್ದಾದರೂ ಹೇಗೆ?: ತಡರಾತ್ರಿ ವೇಳೆ ಸದಾಶಿವನಗರದಿಂದ ತಮ್ಮ ಜೆ.ಪಿ.ನಗರದಲ್ಲಿರುವ ಮನೆಗೆ ತೆರಳುವ ವೇಳೆ ಸ್ಯಾಂಕಿ ಕೆರೆಯ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದಾರೆ. ಇನ್ನು ಚೌಡಯ್ಯ ರಸ್ತೆಯ ಬಳಿ ಬರುತ್ತಿದ್ದಂತೆ ವೇಗವಾಘಿ ಚಲಿಸುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿದ್ದು, ಫುಟ್‌ಪಾತ್‌ ಗೋಡೆಗೆ ಗುದ್ದಿ, ಬೈಕ್‌ ಸವಾರ ಕೂಡ ಫುಟ್‌ಪಾತ್‌ ಗೋಡಗೆ ಬಿದ್ದಿದ್ದಾರೆ. ಇನ್ನು ತೆಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು ಹೆಚ್ಚಿನ ರಕ್ತಸ್ರಾವ ಉಂಟಾಗಿದೆ. ವಾಹನಗಳ ಸಂಚಾರ ವಿರಳ ಆಗಿದ್ದ ಹಿನ್ನೆಲೆಯಲ್ಲಿ ಗಾಯಗೊಂಡಿರುವ ವ್ಯಕ್ತಿ ರಕ್ಷಣೆಗೆ ಯಾರೂ ಬಂದಿಲ್ಲ. ಹೀಗಾಗಿ, ಸ್ಥಳದಲ್ಲಿಯೇ ಸಾವನ್ನಪ್ಪಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಐಡೆಂಟಿಟಿ ಕಾರ್ಡ್‌ನಿಂದ ದೇಹ ಪತ್ತೆ: ಬೈಕ್ ಅಪಘಾತದಲ್ಲಿ ಬಿದ್ದು ಸಾವನ್ನಪ್ಪಿದ ಬಿಬಿಎಂಪಿ ಹೆಲ್ತ್ ಇನ್ಸ್ಪೆಕ್ಟರ್ ಪ್ರಶಾಂತ್ ನಾಯ್ಕ್ (27) ಎಂದು ಗುರುತಿಸಲಾಗಿದೆ. ಜೆಪಿ ನಗರದಲ್ಲಿ ವಾಸವಾಗಿದ್ದರು. ನಿನ್ನೆ ನೆನ್ನೆ ತಡರಾತ್ರಿ ಸದಾಶಿವನಗರದಿಂದ ಜೆಪಿನಗರಕ್ಕೆ ತೆರಳೋ ವೇಳೆ ಅವಘಡ ಸಂಭವಿಸಿದೆ. ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆರ ನಡೆಸಿದ ವೇಳೆ ಬೈಕ್‌ ಮೇಲೆ ಬಿಬಿಎಂಪಿ ಸ್ಟಿಕ್ಕರ್‌ ಅಂಟಿಸಿಕೊಂಡಿದ್ದು, ಜೇಬಿನಲ್ಲಿ ಬಿಬಿಎಂಪಿ ಐಡೆಂಟಿಟಿ ಕಾರ್ಡ್‌ ಪತ್ತೆಯಾಗಿದೆ. ನಂತರ, ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

Bengaluru: ರಸ್ತೆ ಬದಿ ಬೈಕ್‌ ನಿಲ್ಲಿಸುವ ವಾಹನ ಸವಾರರೇ ಎಚ್ಚರ: ನಂಬರ್‌ ಪ್ಲೇಟ್‌ ಸರಿಯಿಲ್ಲದಿದ್ದರೆ ಬೈಲ್‌ ಲಾಕ್‌

ಎರಡು ದಿನದ ಹಿಂದೆ ಫುಟ್‌ಪಾತ್‌ಗೆ ಗುದ್ದಿ ಯುವಕನೊಬ್ಬ ಸಾವನ್ನಪ್ಪಿದ್ದ:  ಕ್ರಿಸ್ ಮಸ್ ಹಿನ್ನಲೆಯಲ್ಲಿ ಬೆಳಗಿನ ಜಾವ ಇಬ್ಬರು ಯುವಕರು ಚರ್ಚ್‌ಗೆ  ಪ್ರಾರ್ಥನೆಗೆಂದು ರಾಜಾಜಿನಗರದಿಂದ ಶಿವಾಜಿನಗರದಲ್ಲಿರುವ ಸೆಂಟ್ ಪ್ಯಾಟ್ರಿಕಾ ಡೆಸಿಲಿಕಾ ಚರ್ಚ್ ಗೆ ಹೋಗುತ್ತಿರುವಾಗ ಗೋಪಾಲಗೌಡ ಜಂಕ್ಷನ್‌ನಲ್ಲಿ ಫುಟ್‌ಪಾತ್‌ಗೆ ಗುದ್ದಿ ಸಾವನ್ನಪ್ಪಿದ್ದರು. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಯುವಕ ಅಲೆಕ್ಸ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು. ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಈ ಘಟನೆ ಮಾಸುವ ಮುನ್ನವೇ ಸಿಲಿಕಾನ್‌ ಸಿಟಿಯಲ್ಲಿ ಮತ್ತೊಂದು ಫುಟ್‌ಪಾತ್‌ಗೆ ಬೈಕ್‌ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. 

click me!