ಕನಕಪುರದ ಪ್ರೈಡ್ ಹೋಟೆಲ್‌ನಲ್ಲಿ ಊಟ ಮಾಡುವಾಗಲೇ ಕುಸಿದು ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನು ಸಾವನ್ನಪ್ಪಿದ ಯುವಕನನ್ನು ಮೈಸೂರಿನ ಪ್ರೀತಂ ಎಂದು ಗುರುತಿಸಲಾಗಿದೆ.
ರಾಮನಗರ (ಡಿ.27): ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ದಾರಿ ಮಧ್ಯದಲ್ಲಿ ಊಟ ಮಾಡುವುದಕ್ಕಾಗಿ ಕನಕಪುರದ ಪ್ರೈಡ್ ಹೋಟೆಲ್‌ಗೆ ತೆರಳಿದ್ದಾರೆ. ಈ ವೇಳೆ ಹೋಟೆಲ್‌ನಲ್ಲಿ ಊಟ ಮಾಡುವಾಗಲೇ ಕುಸಿದು ಬಿದ್ದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕನಕಪುರದ ಪ್ರೈಡ್ ಹೋಟೆಲ್‌ನಲ್ಲಿ ಊಟ ಮಾಡುವಾಗ ಕುಸಿದು ಬಿದ್ದ ಯುವಕನನ್ನು ಮೈಸೂರಿನ ಸಿದ್ದಾರ್ಥ ನಗರದ ನಿವಾಸಿ ಪ್ರೀತಂ (35) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ವಾಪಸ್ ಮೈಸೂರಿಗೆ ಸ್ನೇಹಿತರೊಂದಿಗೆ ಹೋಗುತ್ತಿರುವಾಗ ಕನಕಪುರದಲ್ಲಿ ಊಟ ಮಾಡಲೆಂದು ಹೋಟೆಲ್‌ಗೆ ತೆರಳಿದ್ದರು. ತಮ್ಮ ಸ್ನೇಹಿತರೆಲ್ಲರೂ ಸೇರಿ ಹೋಟೆಲ್‌ನೊಳಗೆ ಊಟ ಮಾಡುತ್ತಿರುವಾಗ ಮೇಲೆ ಎದ್ದೇಳಲು ಆಗದೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕನಕಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಪ್ರೀತಂ ಮೃತಪಟ್ಟಿದ್ದಾನೆ.
ಸಿಸಿ ಕ್ಯಾಮರಾದಲ್ಲಿ ಸೆರೆ: ಇನ್ನು ಪ್ರೀತಂ ಹಾಗೂ ಆತನ ಸ್ನೇಹಿತರು ಕನಕಪುರದ ಹೋಟೆಲ್‌ನೊಳಗೆ ಊಟಕ್ಕೆ ಬರುವುದು, ಊಟ ಮಾಡುವುದು ಹಾಗೂ ಊಟವನ್ನು ಮುಗಿಸಿ ಮೇಲೆ ಏಳುವಾಗ ಪ್ರೀತಂ ಕುಸಿದು ಬಿದ್ದ ದೃಶ್ಯ ಸೆರೆಯಾಗಿದೆ. ಇನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವವರೆಗಿನ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bengaluru Accident: ಫುಟ್‌ಪಾತ್ ಗೋಡೆಗೆ ಬೈಕ್ ಗುದ್ದಿ ಬಿಬಿಎಂಪಿ ಹೆಲ್ತ್ ಇನ್ಸ್ಪೆಕ್ಟರ್ ಸಾವು
ರಾಮನಗರ: ಇನ್ನು ರಾಮನಗರದಲ್ಲಿ ನಗರಸಭೆಯ ವಾಣಿಜ್ಯ ಸಂಕೀರ್ಣದಲ್ಲಿ ಅಪರಿಚಿತ ವೃದ್ಧನೊಬ್ಬ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನೇಣು ಬಿಗಿದುಕೊಂಡು ಅಪರಿಚಿತ ವೃದ್ದ ಸಾವನ್ನಪ್ಪಿದ್ದಾನೆ. ರಾಮನಗರದ ಹಳೇ ಬಸ್ ನಿಲ್ದಾಣದ ಬಳಿಯ ನಗರಸಭೆ ವಾಣಿಜ್ಯ ಸಂಕೀರ್ಣದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ರಾಮನಗರ ಪುರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ವಾಣಿಜ್ಯ ಸಂಕೀರ್ಣದಲ್ಲಿನ ಪ್ಯಾಸೇಜ್ ಮುಂದಿನ ಕಬ್ಬಿಣದ ಗ್ರಿಲ್‌ಗೆ ಬೆಲ್ಟ್‌ನಿಂದ ಕಟ್ಟಿ ನೇಣು ಬಿಗಿದುಕೊಂಡಿದ್ದಾನೆ.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಖತರ್ನಾಕ್ ಕಳ್ಳನ ಕೈಚಳಕ ಕಂಡುಬಂದಿದೆ. ಸ್ಕೂಟಿಯಲ್ಲಿ ಇಟ್ಟಿದ್ದ 1.5 ಲಕ್ಷ ನಗದು ಹಣ ದೋಚಲಾಗಿತ್ತು. ಹೊಸದುರ್ಗ ಪಟ್ಟಣದ ವಿನಾಯಕ ಬೆಣ್ಣೆ ದೋಸೆ ಹೋಟೆಲ್ ಬಳಿ ಘಟನೆ ನಡೆದಿದ್ದು, ಹೋಟೆಲ್ ನ ಚೇತನ್ ಕುಮಾರ್ ಎಂಬ ಯುವಕನಿಗೆ ಸೇರಿದ ಹಣವಾಗಿದೆ. ಇನ್ನು ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕತ್ತು ಹಿಸುಕಿ ಮಹಿಳೆಯ ಬರ್ಬರ ಹತ್ಯೆ, ಕೆಲಸಕ್ಕೆಂದು ಹೋದವಳು ಶವವಾಗಿ ಪತ್ತೆ
ನಿನ್ನೆ ಕನಕಪುರದಲ್ಲಿ ಗೃಹಿಣಿ ಕೊಲೆ: ಮಹಿಳೆಯೊಬ್ಬಳನ್ನ ಕತ್ತುಹಿಸುಕಿ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾರಣ್ಣನದೊಡ್ಡಿ ಗ್ರಾಮದ ಬಳಿ ನಡೆದಿತ್ತು. ಕನಕಪುರ ನಗರದ ಕುರುಪೇಟೆ ನಿವಾಸಿ ಶೃತಿ (32) ಮೃತ ದುರ್ದೈವಿ. ಅಂದಹಾಗೆ ಕನಕಪುರ ನಗರದ ಕಲ್ಯಾಣಮಂಪಟದಲ್ಲಿ ಕೆಲಸ ಮಾಡುತ್ತಿದ್ದ ಶೃತಿ, ನೆನ್ನೆ ರಾತ್ರಿ ಸಹಾ ಕಲ್ಯಾಣ ಮಂಪಟದಲ್ಲಿ ಕೆಲಸವಿದೆ ಎಂದು ತನ್ನ ಅಕ್ಕನಿಗೆ ಕಾಲ್ ಮಾಡಿ ಹೇಳಿ ಹೋಗಿದ್ದಾಳೆ. ಆದರೆ ಕಲ್ಯಾಣಮಂಪಟದಲ್ಲಿ ಕೆಲಸ ಇರದ ಹಿನ್ನೆಲೆಯಲ್ಲಿ ವಾಪಾಸ್ ಬಂದಿದ್ದಾಳೆ. ಆದರೆ ಮನೆಗೆ ಬರಬೇಕಾದ ಆಕೆ ಬೆಳೆಗ್ಗೆ ಮಾರಣ್ಣನದೊಡ್ಡಿ ಗ್ರಾಮದ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಬೆಳಗ್ಗೆ ಮೃತ ಶೃತಿಯ ಗಂಡ ಲೋಕೇಶ್ ಗೆ ಕರೆ ಬಂದಿದೆ. ಲೋಕೇಶ್ ಕೂಡ ರಾತ್ರಿ ಬಂದಿರಬಹುದು ಎಂದು ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಿದ್ದಾನೆ. ಆದರೆ ಮಾರಣ್ಣನದೊಡ್ಡಿ ಗ್ರಾಮದ ಬಳಿ ಶೃತಿಯ ಶವ ಪತ್ತೆಯಾಗಿತ್ತು.