ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬುಮ್ರಾ ಎದುರಿಸುವುದು ಯಾವುದೇ ದಿಗ್ಗದ ಬ್ಯಾಟ್ಸ್‌ಮನ್‌ಗಳಿಗೆ ಸವಾಲು. ಮೂರು ಮಾದರಿಯಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿರುವ ಬುಮ್ರಾ, ಕೋಟ್ಯಾಧಿಪತಿ. ಆದರೆ ಇದೇ ಬುಮ್ರಾ ಬಾಲ್ಯದಲ್ಲಿ ತೀವ್ರ ಸಂಕಷ್ಟ ಎದುರಿಸಿದ್ದಾರೆ. ಕಡು ಬಡತನ, ಕ್ರಿಕೆಟ್ ಆಡವುದು ಬೇರೆ ಮಾತು, ಸರಿಯಾಗಿ ತಿನ್ನಲು ಆಹಾರವಿಲ್ಲದ ಪರಿಸ್ಥಿತಿ ಎದುರಿಸಿದ್ದಾರೆ. ಬುಮ್ರಾ ಕ್ರಿಕೆಟ್ ಪಯಣದ ವಿಡಿಯೋ ಇಲ್ಲಿದೆ.
ಲಂಡನ್(ಅ.09): ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕ್ರಿಕೆಟ್ ಪಯಣ ಎಲ್ಲರಿಗೂ ಸ್ಫೂರ್ತಿ. ಸಾಧಿಸಬೇಕೆಂಬ ಛಲವಿದ್ದರೆ, ಅದೆಂತಾ ಅಡೆತಡೆಗಳನ್ನು ಮೆಟ್ಟಿ ನಿಲ್ಲಬಹುದು ಅನ್ನೋದಕ್ಕ ಬುಮ್ರಾ ಸಾಕ್ಷಿ. ವಿಶ್ವದ ನಂಬರ್ 1 ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಬುಮ್ರಾ ಕ್ರಿಕೆಟ್ ಪಯಣ ಅಷ್ಟು ಸುಲಭವಾಗಿರಲಿಲ್ಲ. ಲಂಡನ್‌ನಲ್ಲಿ ನಡೆದ ಸ್ಪೋರ್ಟ್ಸ್ ಬ್ಯುಸಿನೆಸ್ ಸಮ್ಮಿಟ್‌ನಲ್ಲಿ ಮುಂಬೈ ಇಂಡಿಯನ್ಸ್ ಒಡತಿ ನೀತಾ ಅಂಬಾನಿ, ಬುಮ್ರಾ ಕ್ರಿಕೆಟ್ ಜರ್ನಿ ಕುರಿತ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದರು. ಈ ವಿಡಿಯೋದಲ್ಲಿ ಬುಮ್ರಾ ಜರ್ನಿ ವಿವರಿಸಲಾಗಿದೆ.
undefined
ಇದನ್ನೂ ಓದಿ: ಗ್ರೇಟೆಸ್ಟ್ ಮುಂಬೈ ಇಂಡಿಯನ್ಸ್ ತಂಡ ಪ್ರಕಟಿಸಿದ ಬುಮ್ರಾ!
ಜಸ್ಪ್ರೀತ್ ಬುಮ್ರಾ ತಾಯಿ ದಲ್ಜೀತ್ ಬುಮ್ರಾ, ಮಗನ ಕ್ರಿಕೆಟ್ ಕನಸನ್ನು ಪೂರೈಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಸ್ವತಃ ದಲ್ಜೀತ್ ಬುಮ್ರಾ ಹಾಗೂ ಜಸ್ಪ್ರೀತ್ ಬುಮ್ರಾ ತಮ್ಮ ಅಡೆ ತಡೆಗಳ ಕುರಿತು ವಿವರಿಸಿದ್ದಾರೆ. ಬುಮ್ರಾಗೆ 5 ವರ್ಷವಿದ್ದಾಗ ತಂದೆಯನ್ನು ಕಳೆದುಕೊಂಡರು. ಅಲ್ಲೀವರಗೆ ಬುಮ್ರಾ ಕುಟುಂಬ ಹೆಚ್ಚಿನ ಆರ್ಥಿಕ ಸಮಸ್ಯೆ ಎದುರಿಸದೆ ಸಾಗುತ್ತಿತ್ತು. ಆದರೆ ಬುಮ್ರಾ ತಂದೆ ನಿಧನರಾಗುತ್ತಿದ್ದಂತೆ, ಚಿತ್ರಣ ಬದಲಾಯಿತು. ಬಡತನ ಕುಟುಂಬವನ್ನೇ ಬುಡಮೇಲು ಮಾಡಿತು.
ಇದನ್ನೂ ಓದಿ: ದೇವರ ಕೋಣೆಯಲ್ಲಿ IPL ಟ್ರೋಫಿ ಇಟ್ಟು ಭಜನೆ ಮಾಡಿದ ನೀತಾ ಅಂಬಾನಿ!
ಆದರೆ ಛಲ ಬಿಡದ ಬುಮ್ರಾ ತಾಯಿ, ಮಗನ ಕನಸನ್ನು ಸಾಕರಗೊಳಿಸಲು ಪಣತೊಟ್ಟರು. ಇತ್ತ ಬುಮ್ರಾ ಒಂದೇ ಜೊತೆ ಶೂ, ಒಂದೇ ಟಿ ಶರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಅದೇ ಟಿಶರ್ಟ್ ಒಗೆದು ಒಣಗಿಸಿ ಮರುದಿನ ಅಭ್ಯಾಸಕ್ಕೆ ತೆರಳುತ್ತಿದ್ದರು. ನೈಕಿ ಶೋ ರೂಂ ತೆರಳಿದ ಬುಮ್ರಾ ಹಾಗೂ ತಾಯಿ ಶೂ ಬೆಲೆ ಕೇಳಿ ಬೆಚ್ಚಿ ಬಿದ್ದಿದ್ದರು. ಅಂದೇ ಬುಮ್ರಾ ತಾಯಿಗೆ ಶಪಥ ಮಾಡಿದ್ದರು. ಮುಂದೆ ನಾನು ಇದೇ ಶೂ ಖರೀದಿಸುತ್ತೇನೆ ಎಂದಿದ್ದರು. ಕಠಿಣ ಅಭ್ಯಾಸ, ತಾಯಿಯ ಆರೈಕೆಯಲ್ಲಿ ಬುಮ್ರಾ ಅತ್ಯುತ್ತಮ ಪ್ರದರ್ಶನದ ಮೂಲಕ ದೇಶದ ಗಮನಸೆಳೆದರು.
ಇದನ್ನೂ ಓದಿ: ICC ನೂತನ ಏಕದಿನ ಶ್ರೇಯಾಂಕ ಪ್ರಕಟ; ಟೀಂ ಇಂಡಿಯಾ ಆಟಗಾರರೇ ನಂ.1
ಈ ಪ್ರತಿಭೆಯನ್ನು ಗುರುತಿಸಿದ ಮುಂಬೈ ಇಂಡಿಯನ್ಸ್, ಹರಾಜಿನಲ್ಲಿ ಖರೀದಿಸಿ ಅವಕಾಶ ನೀಡಿತು. ಮೊದಲ ಬಾರಿಗೆ ಬುಮ್ರಾನನ್ನು ಟಿವಿಯಲ್ಲಿ ನೋಡಿದ ತಾಯಿ ದಲ್ಜೀತ್ ಬುಮ್ರಾಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಆರ್ಥಿಕ ಸಂಕಷ್ಟ, ತಿನ್ನಲು ಸರಿಯಾದ ಆಹಾರವಿಲ್ಲದೆ ಕಷ್ಟಪಟ್ಟಿದ್ದ ಬುಮ್ರಾ ಈ ಮಟ್ಟಕ್ಕೆ ಬೆಳೆದಾಗ ನನಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ ಎಂದು ಬುಮ್ರಾ ತಾಯಿ ಹಿಂದಿನ ನೆನಪುಗಳನ್ನು ಬಿಚ್ಚಿಟ್ಟರು.