ಸಿಕ್ಸರ್ OK, ಮುಂದಿನ ಎಸೆತ ಹಾಕಿಲ್ಲ ಯಾಕೆ? ಪಾಂಡ್ಯಗೆ ಜಹೀರ್ ತಿರುಗೇಟು!

By Web Desk  |  First Published Oct 9, 2019, 3:00 PM IST

ಮಾಜಿ ವೇಗಿ ಜಹೀರ್ ಖಾನ್‌ಗೆ ಹಾರ್ದಿಕ್ ಪಾಂಡ್ಯ ಹೇಳಿದ ಹುಟ್ಟು ಹಬ್ಬದ ಶುಭಾಶಯ ವಿವಾದ ಸೃಷ್ಟಿಸಿತ್ತು. ಪಾಂಡ್ಯ ಭಾರತ ಶ್ರೇಷ್ಠ ವೇಗಿಯನ್ನು ಅವಮಾನಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಪಾಂಡ್ಯಗೆ ಜಹೀರ್ ಪ್ರತಿಕ್ರಿಯೆ ನೀಡಿದ್ದಾರೆ.


ಮುಂಬೈ(ಅ.09): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹುಟ್ಟು ಹಬ್ಬದ ಸಂಭ್ರಮ ಮುಗಿದರೂ ಟ್ವಿಟರ್ ಪ್ರತಿಕ್ರಿಯೆ ಮಾತ್ರ ಇನ್ನು ಮುಗಿದಿಲ್ಲ. ಅ.07ರಂದು ಜಹೀರ್ 41ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಟೀಂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ವಿಡಿಯೋ ಪೋಸ್ಟ್ ಮಾಡಿ ಜಹೀರ್‌ಗೆ ಶುಭಕೋರಿದ್ದರು. ಪಾಂಡ್ಯ ಬರ್ತ್‌ಡೇ ವಿಶ್‌ಗೆ ಆಕ್ರೋಷ ಕೂಡ ವ್ಯಕ್ತವಾಗಿತ್ತು. ಇದೀಗ ಜಹೀರ್ ಖಾನ್ ಪಾಂಡ್ಯಕ್ಕೆ ತಕ್ಕ ತಿರುಗೇಟು ನೀಡಿದ್ದಾರೆ.

ಇಧನ್ನೂ ಓದಿ: ಜಹೀರ್‌ ಅವಮಾನಿಸಿದ ಪಾಂಡ್ಯಾಗೆ ಸರಿಯಾಗಿ ಜಾಡಿಸಿದ ಫ್ಯಾನ್ಸ್!

Tap to resize

Latest Videos

undefined

ಜಹೀರ್ ಖಾನ್ ಎಸೆತಕ್ಕೆ ಸಿಕ್ಸರ್ ಸಿಡಿಸೋ ವಿಡಿಯೋ ಪೋಸ್ಟ್ ಮಾಡಿದ ಪಾಂಡ್ಯ, ನಾನು ಸಿಕ್ಸರ್ ಸಿಡಿಸಿದ ರೀತಿಯಲ್ಲಿ ನೀವು ಕೂಡ ಚೆಂಡನ್ನ ಮೈದಾನದ ಹೊರಗಟ್ಟುವಿರಿ ಎಂದು ನಾನು ಭಾವಿಸಿದ್ದೇನೆ ಎಂದು ಪಾಂಡ್ಯ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಮಾಡಿದ ಬೆನ್ನಲ್ಲೇ, ಜಹೀರ್‌ಗೆ ಅವಮಾನ ಮಾಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದ್ದರು. ಪಾಂಡ್ಯ ಶುಭಾಶಯಕ್ಕೆ ಜಹೀರ್ ಪ್ರತಿಕ್ರಿಯೆ ನೀಡಿದ್ದಾರೆ.

 

Happy birthday Zak ... Hope you smash it out of the park like I did here 🤪😂❤️❤️ pic.twitter.com/XghW5UHlBy

— hardik pandya (@hardikpandya7)

ಇಧನ್ನೂ ಓದಿ: ಬೆನ್ನಿನ ಜೊತೆಗೆ ಮೆದುಳಿಗೂ ಶಸ್ತ್ರಚಿಕಿತ್ಸೆ; ಹಾರ್ದಿಕ್ ಟ್ರೋಲ್ ಮಾಡಿದ ರಾಹುಲ್!

ಹುಟ್ಟು ಹಬ್ಬಕ್ಕೆ ಶುಭಕೋರಿದ್ದಕ್ಕೆ ಧನ್ಯಾವಾದ. ನನ್ನ ಬ್ಯಾಟಿಂಗ್ ಕೌಶಲ್ಯವನ್ನು ನಿಮ್ಮಷ್ಟು ಉತ್ತಮವಿಲ್ಲ. ಆದರೆ ಸಿಕ್ಸರ್ ಮುಂದಿನ ಎಸೆತದಷ್ಟೇ ಸಂಭ್ರಮವಾಗಿತ್ತು ನನ್ನ ಹುಟ್ಟು ಹಬ್ಬ ಎಂದು ಜಹೀರ್ ಪ್ರತಿಕ್ರಿಯೆ ನೀಡಿದ್ದಾರೆ. ಪಾಂಡ್ಯ ಶುಭಾಶಯವನ್ನು ಜಹೀರ್ ಅಷ್ಟೇ  ತಮಾಷೆಯಾಗಿ ತೆಗೆದುಕೊಂಡು ಪ್ರತಿಕ್ರಿಯೆ ನೀಡಿದ್ದಾರೆ.

Hahahaha....thank you for the wishes my batting skills can never be as good as yours but the birthday was as good as the next delivery you faced from me in this match 😉 https://t.co/anhQdrUBN7

— zaheer khan (@ImZaheer)

ಸದ್ಯ ಟೀಂ ಇಂಡಿಯಾ 2ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆದರೆ ಹಾರ್ದಿಕ್ ಪಾಂಡ್ಯ ಬೆನ್ನು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ವಿಶ್ರಾಂತಿಗೆ ಜಾರಿದ್ದಾರೆ. ವೈದ್ಯರು ಹೆಚ್ಚಿನ ವಿಶ್ರಾಂತಿ ಅಗತ್ಯ ಎಂದಿದ್ದಾರೆ. ಹೀಗಾಗಿ ನವೆಂಬರ್‌ನಲ್ಲಿ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ದದ ಟಿ20 ಸರಣಿಗೂ ಪಾಂಡ್ಯ ಅಲಭ್ಯರಾಗಿದ್ದಾರೆ.  

ಅಕ್ಟೋಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

click me!