ಗಣೇಶ ಹಬ್ಬದಂದೇ ಮಗು ಫತೇಸಿನ್ಹ್ ಫೋಟೋ ರಿವೀಲ್ ಮಾಡಿದ ಸಾಗರಿಕಾ ಜಹೀರ್‌ ಖಾನ್ ದಂಪತಿ

Published : Aug 28, 2025, 07:03 AM IST
Zaheer Khan, Sagarika Ghatge, Fatehsinh Khan, Ganesh Chaturthi

ಸಾರಾಂಶ

ಜಹೀರ್ ಖಾನ್ ಮತ್ತು ಸಾಗರಿಕಾ ಘಾಟ್ಗೆ ತಮ್ಮ ಮಗ ಫತೇಸಿನ್ಹ್ ಖಾನ್ ಜೊತೆ ಮೊದಲ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಮಗುವಿನ ಮುಖವನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ತೋರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ.

ಕ್ರಿಕೆಟರ್ ಜಹೀರ್ ಖಾನ್ ಹಾಗೂ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರು ಬಹುತೇಕ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡ್ತಾರೆ. ಸರ್ವಧರ್ಮ ಸಮನ್ವಯತೆಗೆ ಇವರೊಂದು ಒಳ್ಳೆಯ ಉದಾಹರಣೆ. ಕಳೆದ ಎಪ್ರಿಲ್‌ನಲ್ಲಿ ಈ ಜೋಡಿ ಗಂಡು ಮಗುವಿನ ಪೋಷಕರಾಗಿದ್ದರು. ಮಗುವಿಗೆ ಫತೇಸಿನ್ಹ್ ಖಾನ್ ಎಂದು ಹೆಸರಿಡುವ ಮೂಲಕ ಸಾಕಷ್ಟು ಮೆಚ್ಚುಗೆ ಗಳಿಸಿದರು. ಈಗ ದಂಪತಿ ತಮ್ಮ ಮಗು ಫತೇಸಿನ್ಹ್ ಖಾನ್ ಅವರ ಫೋಟೋವನ್ನು ಗಣೇಶ ಚತುರ್ಥಿಯ ಶುಭ ದಿನದಂದೇ ಅಭಿಮಾನಿಗಳಿಗೆ ತೋರಿಸಿದ್ದಾರೆ. ಫತೇಸಿನ್ಹ್ ಖಾನ್‌ಗೆ ಇದು ಮೊದಲ ಗಣೇಶ ಹಬ್ಬವಾಗಿದ್ದು, ಜಹೀರ್ ಖಾನ್ ಹಾಗೂ ಸಾಗರಿಕಾ ಕುಟುಂಬದಲ್ಲಿ ಹೊಸ ಸದಸ್ಯನಿಂದಾಗಿ ಗಣೇಶ ಹಬ್ಬದ ಖುಷಿ ಮತ್ತಷ್ಟು ಹೆಚ್ಚಾಗಿದೆ. ಸಾಗರಿಕಾ ಇದೇ ಮೊದಲ ಬಾರಿಗೆ ತಮ್ಮ ಮಗನ ಫೋಟೋ ಸಾಮಾಜಿಕ ಜಾಲತಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಮಗನ ಮುಖವನ್ನು ಅಭಿಮಾನಿಗಳಿಗೆ ರಿವೀಲ್ ಮಾಡಿದ್ದಾರೆ.

ಮಗನೊಂದಿಗೆ ಮೊದಲ ಗಣೇಶ ಹಬ್ಬ ಆಚರಿಸಿದ ಜಹೀರ್‌ ಖಾನ್ ಸಾಗರಿಕಾ ಘಾಟ್ಗೆ:

ತಮ್ಮ ಮಗನೊಂದಿಗೆ ಗಣೇಶ ಹಬ್ಬವನ್ನು ಜತೆಯಾಗಿ ಆಚರಿಸಿರುವ ಜಹೀರ್ ಖಾನ್ ಹಾಗೂ ಸಾಗರಿಕಾ ಘಾಟ್ಗೆ ಅವರು ಈ ಶುಭದಿನದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಕೆಲ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದೆ. ಅವರ ಖುಷಿಯ ಕ್ಷಣಗಳಿಗೆ ಮನೆಯ ಶ್ವಾನವೂ ಜೊತೆಯಾಗಿದೆ. ಸಾವಿರಾರು ಜನ ಅಭಿಮಾನಿಗಳು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಮುದ್ದಾದ ಫ್ಯಾಮಿಲಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್:

ವಿಶೇಷವಾಗಿ ಈ ಫೋಟೋಗಳು ಫತೇಸಿನ್ಹ್‌ನ ಮೊದಲ ಸಾರ್ವಜನಿಕ ಫೋಟೋ ಆಗಿದೆ. ಮೊದಲ ಫೋಟೋದಲ್ಲಿ ಫತೇಸಿನ್ಹ್‌ ಎಲ್ಲಾ ಪುಟ್ಟ ಮಕ್ಕಳಂತೆ ಮೋದಕದ ಮೇಲೆ ಕಣ್ಣಿಟ್ಟಿದ್ದಾನೆ. 2ನೇ ಫೋಟೋದಲ್ಲಿ ಸಾಗರಿಕಾ ಮಗನನ್ನು ಎತ್ತಿಕೊಂಡಿದ್ದು, ಮಗ ಅಮ್ಮನ ಮೊಗವನ್ನೇ ನೋಡುವುದರಲ್ಲಿ ಮಗ್ನನಾಗಿದ್ದಾನೆ. ಮೂರನೇ ಫೋಟೋದಲ್ಲಿ ದೇವರಕೋಣೆಯ ಚಿತ್ರವಿದ್ದು, ಜಹೀರ್ ಖಾನ್ ಮಗುವನ್ನು ಎತ್ತಿಕೊಂಡಿದ್ದರೆ ಸಾಗರಿಕಾ ಪೂಜೆಯಲ್ಲಿ ಮಗ್ನರಾಗಿದ್ದಾರೆ. ಮನೆಯ ಶ್ವಾನವೂ ದೇವರ ಕೋಣೆಯ ಬಾಗಿಲಲ್ಲಿ ನಿಂತಿದ್ದನ್ನು ಕಾಣಬಹುದು. ಹಾಗೆಯೇ 4ನೇ ಫೋಟೋದಲ್ಲಿ ಸಾಗರಿಕಾ ಮಗನನ್ನು ಎತ್ತಿಕೊಂಡು ಪೋಸ್ ಕೊಟ್ಟಿದ್ದರೆ 5ನೇ ಪೋಟೋದಲ್ಲಿ ಶ್ವಾನ ಮಗು ಹಾಗೂ ದಂಪತಿ ತಮ್ಮ ಖುಷಿಯ ಕ್ಷಣವನ್ನು ಜೊತೆಗೆ ಕಳೆಯುತ್ತಿರುವ ದೃಶ್ಯವಿದೆ. ಎಲ್ಲರೂ ಸಂಪ್ರದಾಯಿಕ ಧಿರಿಸು ಧರಿಸಿದ್ದು, ಜೋಡಿಯ ಈ ನ್ಯೂ ಫ್ಯಾಮಿಲಿ ಫೋಟೋ ಅಭಿಮಾನಿಗಳಿಗೆ ಖುಷಿ ನೀಡಿದೆ.

ಸಾಗರಿಕಾ ಕಂದು ಬಣ್ಣದ ಫ್ಲೋರಲ್ ಸೂಟ್ ಧರಿಸಿದ್ದರೆ ಜಹೀರ್‌ ಖಾನ್ ಅವರು ಎಂದಿನಂತೆ ಬಿಳಿ ಬಣ್ಣದ ಜುಬ್ಬಾ ಫೈಜಾಮ ಧರಿಸಿದ್ದಾರೆ. ಗಣಪತಿ ಬಪ್ಪಾ ಮೊರೆಯಾ ಎಂದು ಬರೆದು ನಿಮ್ಮೆಲ್ಲರಿಗೂ ನಮ್ಮಿಂದ ಗಣೇಶ ಹಬ್ಬದ ಶುಭಾಶಯಗಳು ಎಂದು ಬರೆದು ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಮುದ್ದಾದ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮಗ ಮುದ್ದಾಗಿದ್ದಾನೆ, ಇದು ನಿಜವಾಗಿಯೂ ರಾಯಲ್ ಅನುವಂಶೀಯತೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

2017ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದ ಸಾಗರಿಕಾ, ಜಹೀರ್‌ಖಾನ್:

ಸಾಗರಿಕಾ ಹಾಗೂ ಜಹೀರ್ ಖಾನ್ ಅವರು 2017ರ ನವೆಂಬರ್‌ನಲ್ಲಿ ಹಸೆಮಣೆ ಏರಿದ್ದರು. ಇದಕ್ಕೂ ವರ್ಷದ ಮೊದಲು ಈ ಜೋಡಿ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ನಂತರ ಖಾಸಗಿ ಸಮಾರಂಭವೊಂದರಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿರಿಸಿತು. ಮದುವೆಯಾಗಿ 8 ವರ್ಷಗಳ ನಂತರ ಈ ವರ್ಷದ ಏಪ್ರಿಲ್‌ನಲ್ಲಿ ದಂಪತಿ ತಮ್ಮ ಮೊದಲ ಮಗು ಫತೇಸಿನ್ಹಾ ಖಾನ್‌ನನ್ನು ಬರಮಾಡಿಕೊಂಡಿದ್ದರಿಂದ ಇವರ ಪ್ರೇಮ ಜೀವನಕ್ಕೆ ಹೊಸ ಕಳೆ ಬಂದಿದೆ. ಮಗುವಿನ ಆಗಮನವನ್ನು ಅವರು ಭಾವುಕ ಪೋಸ್ಟ್‌ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಜೊತೆಗೆ ಮಗುವಿನ ಹೆಸರನ್ನು ಫತೇಸಿನ್ಹಾ ಎಂದು ಘೋಷಣೆ ಮಾಡಿದ್ದರು.

ಭಾರತದ ಇತಿಹಾಸದಲ್ಲಿ ಫತೇ ಸಿಂಗ್ ಒಂದು ಪ್ರಮುಖ ಹೆಸರು. ಈತ ಓರ್ವ ಸಿಖ್ ಯೋಧನಾಗಿದ್ದು, ಸಟ್ಲೆಜ್ ಮತ್ತು ಯಮುನಾ ನದಿಗಳ ನಡುವಿನ ಮೊಘಲ್ ಸಾಮ್ರಾಜ್ಯದ ಪ್ರದೇಶವನ್ನು ಆಡಳಿತ ನಡೆಸುತ್ತಿದ್ದ ಸಿರ್ಹಿಂದ್‌ನ ಮೊಘಲ್ ಉಪ ಗವರ್ನರ್ ಆಗಿದ್ದ ವಜೀರ್ ಖಾನ್‌ನ ಶಿರಚ್ಛೇದನ ಮಾಡಿದ ಕಾರಣಕ್ಕೆ ಇತಿಹಾಸದಲ್ಲಿ ಪ್ರಸಿದ್ಧರಾಗಿದ್ದಾರೆ. 1704 ರಲ್ಲಿ ಸಿಖ್ ಗುರು ಗೋಬಿಂದ್ ಸಿಂಗ್ ಅವರ ಇಬ್ಬರು ಚಿಕ್ಕ ಮಕ್ಕಳಾದ ಸಾಹಿಬ್‌ಜಾದಾ ಫತೇ ಸಿಂಗ್ ಮತ್ತು ಸಾಹಿಬ್‌ಜಾದಾ ಜೊರಾವರ್ ಸಿಂಗ್ ಅವರನ್ನು ಗಲ್ಲಿಗೇರಿಸಲು ಈ ವಜೀರ್ ಖಾನ್‌ ಆದೇಶಿಸಿದ್ದ ಇದರಿಂದ ಕುಪಿತಗೊಂಡ ಫತೇ ಸಿಂಗ್ ಆತನ ಶಿರಚ್ಛೇದನ ಮಾಡಿದ್ದರು.

ಸಾಗರಿಕಾ ಘಾಟ್ಗೆ ಅವರು ಒಬ್ಬರು ಮಾಡೆಲ್ ಕಾಮ್ ನಟಿ ಆಗಿದ್ದು, ಚಕ್ ದೇ ಇಂಡಿಯಾದಲ್ಲಿನ ಪ್ರೀತಿ ಸಬರ್‌ವಾಲ್ ಪಾತ್ರದಿಂದ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.

 

 

ಇದನ್ನೂ ಓದಿ:  ದೇವರಿಗೆ ಮೋಸ ಮಾಡಕ್ಕಾಗಲ್ಲ: ಗರ್ಲ್‌ಫ್ರೆಂಡ್ ಜೊತೆ ಪತಿಯ ತಿರುಪತಿ ಭೇಟಿಗೆ ಪ್ರತಿಕ್ರಿಯಿಸಿದ ಜಯಂ ರವಿ ಪತ್ನಿ

ಇದನ್ನೂ ಓದಿ:  ವೃದ್ಧಾಪ್ಯದಲ್ಲಿ ನಿರ್ಲಕ್ಷಿಸಿದ ಮಕ್ಕಳಿಗೆ ಬುದ್ಧಿ ಕಲಿಸಲು ಬಹುಕೋಟಿ ಆಸ್ತಿಯನ್ನು ಸಾಕುಪ್ರಾಣಿಗಳ ಹೆಸರಿಗೆ ಬರೆದ ತಾಯಿ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ