ಐಪಿಎಲ್ ಟೂರ್ನಿಗೆ ವಿದಾಯ ಹೇಳಿದ ಆರ್ ಆಶ್ವಿನ್, ಟ್ರೇಡ್ ಮಾತುಕತೆ ನಡುವೆ ಶಾಕ್

Published : Aug 27, 2025, 12:10 PM ISTUpdated : Aug 27, 2025, 12:22 PM IST
R Ashwin TNPL

ಸಾರಾಂಶ

ಭಾರತದ ಶ್ರೇಷ್ಠ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ಆರ್ ಅಶ್ವಿನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಐಪಿಎಲ್ ಟೂರ್ನಿಯಿಂದ ಆರ್ ಅಶ್ವಿನ್ ದಿಢೀರ್ ವಿದಾಯ ಘೋಷಿಸಿದ್ದಾರೆ.

ಚೆನ್ನೈ (ಆ.27) ಟೀಂ ಇಂಡಿಯಾ ಕ್ರಿಕೆಟಿಗರು ದಿಢೀರ್ ವಿದಾಯ ಘೋಷಿಸಿ ಅಚ್ಚರಿ ನೀಡುವ ಪರಿಪಾಠ ಮುಂದುವರಿದಿದೆ. 2025ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ್ ಆಡಿದ್ದ ಆರ್ ಅಶ್ವಿನ್ ಈ ಬಾರಿ ಟ್ರೇಡ್ ಮೂಲಕ ಬೇರೆ ತಂಡ ಸೇರಿಕೊಳ್ಳಲಿದ್ದರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದಕ್ಕೆ ತಕ್ಕಂತೆ ತಂಡಗಳ ಜೊತೆ ಟ್ರೇಡ್ ಮಾತುಕತೆಗೆಳು ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ನಡುವೆ ಆರ್ ಅಶ್ವಿನ್ ಐಪಿಎಲ್ ಟೂರ್ನಿಗೆ ವಿದಾಯ ಹೇಳಿದ್ದಾರೆ. ಕಳೆದ ವರ್ಷ ದಿಢೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಆರ್ ಅಶ್ವಿನ್ ಇದೀಗ ಐಪಿಎಲ್ ನಿವೃತ್ತಿ ಹಲವರ ಅಚ್ಚರಿಗೆ ಕಾರಣವಾಗಿದೆ.

ನನ್ನ ಐಪಿಎಲ್ ಪಯಣ ಅಂತ್ಯಗೊಂಡಿದೆ, ಅಶ್ವಿನ್

ವಿದಾಯದ ಕುರಿತು ಆರ್ ಅಶ್ವಿನ್ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಒಂದು ವಿಶೇಷ ದಿನ ಅಂದರೆ ವಿಶೇಷ ಆರಂಭ ಎಂದು ಬರೆದುಕೊಂಡಿರುವ ಆರ್ ಅಶ್ವಿನ್, ಎಲ್ಲರು ಹೇಳುತ್ತಾರೆ, ಪ್ರತಿಯೊಂದು ಅಂತ್ಯ ಕೂಡ ಒಂದು ಹೊಸ ಆರಂಭಕ್ಕೆ ಮುನ್ನಡಿ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಪಯಣ ಇಂದಿಗೆ ಅಂತ್ಯಗೊಂಡಿದೆ. ಆದರೆ ವಿಶ್ವದ ಲೀಗ್ ಎಕ್ಸ್‌ಪ್ಲೋರ್ ಮಾಡುವ ಸಮಯ ಬಂದಿದೆ. ಈ ಸಂದರ್ಭದಲ್ಲಿ ಅತ್ಯುತ್ತಮ ನೆನಪುಗಳನ್ನು ಕಟ್ಟಿಕೊಟ್ಟ ಎಲ್ಲಾ ಫ್ರಾಂಚೈಸಿಗಳಿಗೆ ವಿಶೇಷವಾಗಿ ಐಪಿಎಲ್ ಹಾಗೂ ಬಿಸಿಸಿಐಗೆ ಚಿರಋಣಿಯಾಗಿದ್ದೇನೆ ಎಂದು ಆರ್ ಅಶ್ವಿನ್ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಅಶ್ವಿನ್ ಆಟ ಅಂತ್ಯ, ವಿದೇಶಿ ಲೀಗ್‌ನತ್ತ ಸ್ಪಿನ್ನರ್

ಭಾರತದಲ್ಲಿ ಆರ್ ಅಶ್ವಿನ್ ತಮ್ಮ ಕ್ರಿಕೆಟ್ ಪಯಣ ಅಂತ್ಯಗೊಳಿಸಿದ್ದರೆ. ಆದರೆ ಆರ್ ಅಶ್ವಿನ್ ಕ್ರಿಕೆಟ್‌ನಿಂದ ದೂರ ಉಳಿಯುತ್ತಿಲ್ಲ. ವಿಶ್ವದ ಇತರ ಲೀಗ್ ಟೂರ್ನಿಗಳಲ್ಲಿ ಆರ್ ಅಶ್ವಿನ್ ಪಾಲ್ಗೊಳ್ಳಲಿದ್ದಾರೆ. ಈ ಕುರಿತು ತಮ್ಮ ವಿದಾಯದ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಸೇರಿದಂತೆ ಇತರ ಲೀಗ್ ಟೂರ್ನಿಗಳಲ್ಲಿ ಆರ್ ಅಶ್ವಿನ್ ಪಾಲ್ಗೊಲ್ಳುವ ಸಾಧ್ಯತೆ ಇದೆ.

 

 

2026ರಲ್ಲಿ ರಾಜಸ್ಥಾನ ರಾಯಲ್ಸ್ ಮರಳುವ ಸಾಧ್ಯತೆ ನಡುವೆ ವಿದಾಯ

2026ರ ಐಪಿಎಲ್ ಹರಾಜಿನಲ್ಲಿ ಆರ್ ಅಶ್ವಿನ್ ಮತ್ತೆ ರಾಜಸ್ಥಾನ ತಂಡಕ್ಕೆ ಮರಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ದಿಡೀರ್ ವಿದಾಯ ಹೇಳುವ ಮೂಲಕ ಈ ಎಲ್ಲಾ ಚರ್ಚೆಗೆ ಅಂತ್ಯಹಾಡಿದ್ದಾರೆ.

2024ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

2024ರ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಆರ್ ಅಶ್ವಿನ್ ತಂಡದಲ್ಲಿದ್ದರೂ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಇದು ಆರ್ ಅಶ್ವಿನ್ ವಿದಾಯ ಹೇಳುವಂತೆ ಮಾಡಿತ್ತು. ಆರ್ ಅಶ್ವಿನ್ ಅವಕಾಶಗಳು ಕ್ಷೀಣಿಸುತ್ತಿದ್ದಂತೆ ಟೂರ್ನಿ ನುಡುವೆ ಆರ್ ಅಶ್ವಿನ್ ವಿದಾಯ ಘೋಷಿಸಿದ್ದರು. ಅಂತಾರಾಷ್ಟ್ರೀಯ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ವಿದಾಯ ಹೇಳಿದ್ದರು. 2025ರಲ್ಲಿ ಇದೀಗ ಐಪಿಎಲ್ ಟೂರ್ನಿಯಿಂದಲೂ ವಿದಾಯ ಘೋಷಿಸಿದ್ದಾರೆ.

ಬಿಸಿಸಿಐ ನಿಯಮ ಪ್ರಕಾರ ಭಾರತೀಯ ಕ್ರಿಕೆಟಿಗ ಇತರ ದೇಶದ ಲೀಗ್ ಟೂರ್ನಿಗಲ್ಲಿ ಪಾಲ್ಗೊಳ್ಳಲು ಇಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಗೆ ವಿದಾಯ ಹೇಳಿರಬೇಕು. ಸದ್ಯ ಹಲವು ಟೀಂ ಇಂಡಿಯಾ ಕ್ರಿಕೆಟಿಗರು ವಿದಾಯದ ಬಳಿಕ ವಿದೇಶಿ ಲೀಗ್ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ