ಇಂದು ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು..! ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ?

By Naveen Kodase  |  First Published Dec 9, 2023, 12:02 PM IST

ಹರಾಜಿನಲ್ಲಿ 104 ಭಾರತೀಯರು, 61 ವಿದೇಶಿ ಆಟಗಾರ್ತಿಯರಿದ್ದಾರೆ. ಒಟ್ಟು 5 ತಂಡಗಳಲ್ಲಿ ಸದ್ಯ 30 ಸ್ಥಾನಗಳು ಖಾಲಿಯಿದ್ದು, ಈ ಪೈಕಿ 9 ವಿದೇಶಿ ಆಟಗಾರ್ತಿಯರನ್ನು ಖರೀದಿಸಲು ಫ್ರಾಂಚೈಸಿಗಳಿಗೆ ಅವಕಾಶವಿದೆ. ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ವೃಂದಾ ದಿನೇಶ್, ದಿವ್ಯಾ ಜ್ಞಾನಾನಂದ, ಪ್ರತ್ಯೂಷಾ ಸಿ, ರಾಮೇಶ್ವರಿ ಗಾಯಕ್ವಾಡ್, ಸಹನಾ ಪವಾರ್, ಮಿಥಿಲಾ ವಿನೋದ್ ಸೇರಿ ಕರ್ನಾಟಕದ 7 ಮಂದಿ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. 


ಮುಂಬೈ(ಡಿ.09): ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ಶನಿವಾರ ಮುಂಬೈನಲ್ಲಿ ನಡೆಯಲಿದೆ. ಕರ್ನಾಟಕದ 7 ಆಟಗಾರ್ತಿಯರೂ ಸೇರಿದಂತೆ 165 ಮಂದಿ ಈ ಬಾರಿಯ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಹರಾಜಿನಲ್ಲಿ 104 ಭಾರತೀಯರು, 61 ವಿದೇಶಿ ಆಟಗಾರ್ತಿಯರಿದ್ದಾರೆ. ಒಟ್ಟು 5 ತಂಡಗಳಲ್ಲಿ ಸದ್ಯ 30 ಸ್ಥಾನಗಳು ಖಾಲಿಯಿದ್ದು, ಈ ಪೈಕಿ 9 ವಿದೇಶಿ ಆಟಗಾರ್ತಿಯರನ್ನು ಖರೀದಿಸಲು ಫ್ರಾಂಚೈಸಿಗಳಿಗೆ ಅವಕಾಶವಿದೆ. ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ವೃಂದಾ ದಿನೇಶ್, ದಿವ್ಯಾ ಜ್ಞಾನಾನಂದ, ಪ್ರತ್ಯೂಷಾ ಸಿ, ರಾಮೇಶ್ವರಿ ಗಾಯಕ್ವಾಡ್, ಸಹನಾ ಪವಾರ್, ಮಿಥಿಲಾ ವಿನೋದ್ ಸೇರಿ ಕರ್ನಾಟಕದ 7 ಮಂದಿ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. 

Latest Videos

undefined

ಇನ್ನು ಆರ್‌ಸಿಬಿ ಫ್ರಾಂಚೈಸಿಯು ಎಲೈಸಿ ಪೆರ್ರಿ, ಸ್ಮೃತಿ ಮಂಧನಾ, ರಾಜ್ಯದ ಶ್ರೇಯಾಂಕ ಪಾಟೀಲ್ ಸೇರಿದಂತೆ ಹಲವರನ್ನು ರೀಟೈನ್ ಮಾಡಿಕೊಂಡಿದೆ. ಇದೀಗ ಹರಾಜಿನಲ್ಲಿ ಇತರೆ ಆಟಗಾರ್ತಿಯರನ್ನು ಖರೀದಿಸಲು ಸಜ್ಜಾಗಿದೆ.

ಗೌತಮ್ ಗಂಭೀರ್‌ ವಿರುದ್ಧ ಟೀಕೆ: ಶ್ರೀಶಾಂತ್‌ಗೆ ನೋಟಿಸ್‌!

ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ?

1. ಡೆಲ್ಲಿ ಕ್ಯಾಪಿಟಲ್ಸ್‌: 2.25 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬಳಿ 2.25 ಕೋಟಿ ರುಪಾಯಿ ಹಣ ಉಳಿದುಕೊಂಡಿದ್ದು, ಓರ್ವ ವಿದೇಶಿ ಆಟಗಾರ್ತಿ ಸೇರಿದಂತೆ ಗರಿಷ್ಠ 3 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ. 

2. ಗುಜರಾತ್ ಟೈಟಾನ್ಸ್ ಫ್ರಾಂಚೈಸಿ: 5.95 ಕೋಟಿ

ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಮೂವರು ವಿದೇಶಿ ಆಟಗಾರ್ತಿಯರೂ ಸೇರಿದಂತೆ ಒಟ್ಟು 10 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ.

3. ರಾಯಲ್ ಚಾಲೆಂಜರ್ಸ್ ಬೆಂಗಳೂರು: 3.35 ಕೋಟಿ

ಆರ್‌ಸಿಬಿ ಫ್ರಾಂಚೈಸಿಯು ಗರಿಷ್ಠ ಮೂರು ವಿದೇಶಿ ಆಟಗಾರ್ತಿಯರೂ ಸೇರಿದಂತೆ ಹರಾಜಿನಲ್ಲಿ ಒಟ್ಟು 7 ಆಟಗಾರ್ತಿಯರನ್ನು ಖರೀದಿಸಬಹುದಾಗಿದೆ.

4. ಯುಪಿ ವಾರಿಯರ್ಸ್‌: 4 ಕೋಟಿ

ಯುಪಿ ವಾರಿಯರ್ಸ್ ಫ್ರಾಂಚೈಸಿ ಬಳಿ 4 ಕೋಟಿ ರುಪಾಯಿ ಹಣವಿದ್ದು, ಓರ್ವ ವಿದೇಶಿ ಆಟಗಾರ್ತಿ ಸೇರಿದಂತೆ ಗರಿಷ್ಠ 5 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ. 

5. ಮುಂಬೈ ಇಂಡಿಯನ್ಸ್: 2.1 ಕೋಟಿ

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಬಳಿ 2.1 ಕೋಟಿ ರುಪಾಯಿ ಇದ್ದು, ಓರ್ವ ವಿದೇಶಿ ಆಟಗಾರ್ತಿ ಸೇರಿದಂತೆ ಗರಿಷ್ಠ 5 ಆಟಗಾರ್ತಿಯರನ್ನು ಹರಾಜಿನಲ್ಲಿ ಖರೀದಿಸಲು ಅವಕಾಶವಿದೆ.

ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಪಿಚ್ ರೇಟಿಂಗ್ ನೀಡಿದ ICC..! ಮೋದಿ ಪಿಚ್‌ ಬಗ್ಗೆ ಬಂದ ರಿಪೋರ್ಟ್ ಏನು?

ಭಾರತ vs ಇಂಗ್ಲೆಂಡ್ ಮಹಿಳೆಯರ ಎರಡನೇ ಟಿ20 ಪಂದ್ಯ ಇಂದು

ಮುಂಬೈ: ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ಶನಿವಾರವಾದ ಇಂದು ನಡೆಯಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದಲ್ಲಿ ಮುನ್ನಡೆಯಲ್ಲಿದೆ. ಆರಂಭಿಕ ಪಂದ್ಯದಲ್ಲಿ ಅನನುಭವಿ ಬೌಲಿಂಗ್ ಪಡೆ ಹಾಗೂ ಕಳಪೆ ಫೀಲ್ಡಿಂಗ್‌ನಿಂದಾಗಿ ಸೋಲನುಭವಿಸಿದ್ದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಅತ್ತ ಇಂಗ್ಲೆಂಡ್ ಸರಣಿ ಗೆಲುವಿನ ತವಕದಲ್ಲಿದೆ.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಜಿಯೋ ಸಿನೆಮಾ

click me!