ಗೌತಮ್ ಗಂಭೀರ್‌ ವಿರುದ್ಧ ಟೀಕೆ: ಶ್ರೀಶಾಂತ್‌ಗೆ ನೋಟಿಸ್‌!

Published : Dec 09, 2023, 09:47 AM IST
ಗೌತಮ್ ಗಂಭೀರ್‌ ವಿರುದ್ಧ ಟೀಕೆ: ಶ್ರೀಶಾಂತ್‌ಗೆ ನೋಟಿಸ್‌!

ಸಾರಾಂಶ

ಶ್ರೀಶಾಂತ್‌ ನಿಯಮ ಉಲ್ಲಂಘಿಸಿದ್ದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದ್ದು, ತಾವು ಹಾಕಿರುವ ವಿಡಿಯೋವನ್ನು ಸಾಮಾಜಿಕ ತಾಣಗಳಿಂದ ಅಳಿಸಿ ಹಾಕುವಂತೆ ಸೂಚಿಸಿದ್ದಾರೆ. ಈ ನಡುವೆ ಅಂಪೈರ್‌ಗಳು ಕೂಡಾ ಇಬ್ಬರ ನಡುವಿನ ವಾಗ್ವಾದದ ಬಗ್ಗೆ ವರದಿ ಸಲ್ಲಿಸಿದ್ದು, ‘ಫಿಕ್ಸರ್‌’ ಎಂದು ಗಂಭೀರ್‌ ಕರೆದಿದ್ದಾಗಿ ಎಲ್ಲೂ ಉಲ್ಲೇಖಿಸಿಲ್ಲ ಎಂದು ತಿಳಿದುಬಂದಿದೆ.

ಸೂರತ್‌(ಡಿ.09): ಗೌತಮ್‌ ಗಂಭೀರ್‌ ತಮ್ಮನ್ನು ಫಿಕ್ಸರ್‌ ಎಂದು ಕರೆದಿದ್ದಾರೆ ಎಂದಿದ್ದ ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್‌ಗೆ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌(ಎಲ್‌ಎಲ್‌ಸಿ) ಆಯುಕ್ತರು ನೋಟಿಸ್‌ ಜಾರಿಗೊಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಶ್ರೀಶಾಂತ್‌ ನಿಯಮ ಉಲ್ಲಂಘಿಸಿದ್ದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದ್ದು, ತಾವು ಹಾಕಿರುವ ವಿಡಿಯೋವನ್ನು ಸಾಮಾಜಿಕ ತಾಣಗಳಿಂದ ಅಳಿಸಿ ಹಾಕುವಂತೆ ಸೂಚಿಸಿದ್ದಾರೆ. ಈ ನಡುವೆ ಅಂಪೈರ್‌ಗಳು ಕೂಡಾ ಇಬ್ಬರ ನಡುವಿನ ವಾಗ್ವಾದದ ಬಗ್ಗೆ ವರದಿ ಸಲ್ಲಿಸಿದ್ದು, ‘ಫಿಕ್ಸರ್‌’ ಎಂದು ಗಂಭೀರ್‌ ಕರೆದಿದ್ದಾಗಿ ಎಲ್ಲೂ ಉಲ್ಲೇಖಿಸಿಲ್ಲ ಎಂದು ತಿಳಿದುಬಂದಿದೆ.

ಭಾರತ ಕಿರಿಯರ ಶುಭಾರಂಭ

ಕೌಲಾಲಂಪುರ: ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ 8 ಬಾರಿ ಚಾಂಪಿಯನ್‌ ಭಾರತ ಭರ್ಜರಿ ಶುಭಾರಂಭ ಮಾಡಿದೆ. ಶುಕ್ರವಾರ ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ ಗೆಲುವು ಲಭಿಸಿತು.

ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌, ಭಾರತದ ದಾಳಿಗೆ ತತ್ತರಿಸಿ 50 ಓವರಲ್ಲಿ 173ಕ್ಕೆ ಆಲೌಟಾಯಿತು. ಜಂಶೀದ್‌ ಜದ್ರಾನ್‌ 43, ಯೂನುಸ್‌ 26 ರನ್‌ ಸಿಡಿಸಿದರು. ಭಾರತದ ಪರ ಅರ್ಶಿನ್‌ ಕುಲಕರ್ಣಿ ಹಾಗೂ ರಾಜ್‌ ಲಿಂಬಾನಿ ತಲಾ 3 ವಿಕೆಟ್‌ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಭಾರತ 37.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. 76 ರನ್‌ಗೆ 3 ವಿಕೆಟ್‌ ಕಳೆದುಕೊಂಡ ಬಳಿಕ ಅರ್ಶಿನ್‌ ಹಾಗೂ ಮುಶೀರ್ ಖಾನ್‌ ಮುರಿಯದ 4ನೆ ವಿಕೆಟ್‌ಗೆ 98 ರನ್‌ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿದರು. ಅರ್ಶಿನ್‌ 70, ಮುಶೀರ್‌ 48 ರನ್‌ ಸಿಡಿಸಿದರು. ಭಾರತ ತನ್ನ 2ನೇ ಪಂದ್ಯದಲ್ಲಿ ಡಿ.10ರಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ.

Pro Kabaddi League: ತವರಲ್ಲೂ ಬೆಂಗಳೂರು ಬುಲ್ಸ್‌ಗಿಲ್ಲ ಗೆಲುವಿನ ಸಿಹಿ!

ಸ್ಕೋರ್‌: ಅಫ್ಘಾನಿಸ್ತಾನ 50 ಓವರಲ್ಲಿ 173/10 (ಜಂಶೀದ್‌ 43, ಅರ್ಶಿನ್‌ 3-29, ರಾಜ್‌ 3-46), ಭಾರತ 37.3 ಓವರ್‌ಗಳಲ್ಲಿ 174/3(ಅರ್ಶಿನ್‌ 70*, ಮುಶೀರ್‌ 48*, ಖಲೀಲ್‌ 1-28)

ದಕ್ಷಿಣ ಆಫ್ರಿಕಾ ಟಿ20ಗೆ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ

ಡರ್ಬನ್‌: ಭಾನುವಾರದಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಆಟಗಾರರು ಶುಕ್ರವಾರ ಆಭ್ಯಾಸ ಆರಂಭಿಸಿದರು. ಇಲ್ಲಿನ ಕಿಂಗ್ಸ್‌ಮೀಡ್‌ ಕ್ರೀಡಾಂಗಣದಲ್ಲಿ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಜೊತೆ ಮಾತುಕತೆಯಲ್ಲಿ ತೊಡಗಿಸಿಕೊಂಡಿರುವ ಭಾರತದ ಆಟಗಾರರ ಫೋಟೋವನ್ನು ಬಿಸಿಸಿಐ ಟ್ವೀಟರ್‌ನಲ್ಲಿ ಪ್ರಕಟಿಸಿದೆ. ಸೂರ್ಯಕುಮಾರ್‌ ನಾಯಕತ್ವದ ಭಾರತ ತಂಡ ಸರಣಿಯ ಮೊದಲ ಪಂದ್ಯವನ್ನು ಡರ್ಬನ್‌ನಲ್ಲಿ ಆಡಲಿದೆ. ಇನ್ನೆರಡು ಪಂದ್ಯಗಳು ಡಿ.12 ಮತ್ತು 14ಕ್ಕೆ ನಿಗದಿಯಾಗಿದೆ.

ಧೋನಿ, ರೋಹಿತ್, ಜಡೇಜಾ ಜೊತೆ ಆಡಿ ಕ್ರಿಕೆಟ್ ತ್ಯಜಿಸಿ, ಖ್ಯಾತ ಗಾಯಕನಾದ ಸ್ಟಾರ್ ಆಟಗಾರ!

ಬಾಂಗ್ಲಾ ವಿರುದ್ಧ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ ಕಿವೀಸ್‌

ಮೀರ್‌ಪುರ: ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. 55 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಿವೀಸ್‌ಗೆ ಗ್ಲೆನ್ ಫಿಲಿಪ್ಸ್‌ರ ಆಕರ್ಷಕ 87 ರನ್‌ ಆಟ ನೆರವಾಯಿತು. ಬಾಂಗ್ಲಾದ 172 ರನ್‌ಗೆ ಉತ್ತರವಾಗಿ ಕಿವೀಸ್‌ 180ಕ್ಕೆ ಆಲೌಟಾಯಿತು. 2ನೇ ಇನ್ನಿಂಗ್ಸ್‌ ಆರಂಭಿಸಿರುವ ಬಾಂಗ್ಲಾ 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 38 ರನ್‌ ಗಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಜಯ್ ಹಜಾರೆ ಸೆಮಿಫೈನಲ್: ಒಂದಂಕಿ ಮೊತ್ತಕ್ಕೆ ಮಯಾಂಕ್, ಪಡಿಕ್ಕಲ್ ಔಟ್; ಮತ್ತೆ ಕರ್ನಾಟಕಕ್ಕೆ ಆಸರೆಯಾದ ಅನುಭವಿ ಕ್ರಿಕೆಟಿಗ!
ಸಂಜು ಸ್ಯಾಮ್ಸನ್ ಬ್ಯಾಟರ್‌ ಆಗಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಅಗತ್ಯವೇ ಇರಲಿಲ್ಲ ಎಂದ ಮಾಜಿ ಕ್ರಿಕೆಟಿಗ! ಹೀಗೆ ಹೇಳಲು ಕಾರಣವೂ ಇದೆ