ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ಭಾರತೀಯ ಕ್ರಿಕೆಟಿಗ; ಕೊಹ್ಲಿನಾ, ರೋಹಿತ್ ಶರ್ಮಾನ?

Published : Nov 18, 2023, 03:29 PM IST
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ಭಾರತೀಯ ಕ್ರಿಕೆಟಿಗ; ಕೊಹ್ಲಿನಾ, ರೋಹಿತ್ ಶರ್ಮಾನ?

ಸಾರಾಂಶ

ವಿಶ್ವಕಪ್ ಎಲ್ಲರನ್ನೂ ರೋಮಾಂಚನಗೊಳಿಸಿದೆ. ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಪ್ರತಿಯೊಬ್ಬರೂ ಕುತೂಹಲದಿಂದ ಕಾಯುವಂತೆ ಮಾಡಿದೆ. ಆದರೆ ಈ ಪಂದ್ಯಗಳಿಗೆ ಆಡೋ ಆಟಗಾರರು ಪಡೆಯೋ ಸಂಭಾವನೆ ಎಷ್ಟೂಂತ ನಿಮ್ಗೆ ಗೊತ್ತಿದ್ಯಾ? ಅತಿ ಹೆಚ್ಚು ಸಂಭಾವನೆ ಪಡೆಯೋ ಭಾರತೀಯ ಆಟಗಾರ ಯಾರು?

ಭಾರತದ ಪಾಲಿಗೆ ಕ್ರಿಕೆಟ್ ಎಂಬುದು ಕೇವಲ ಆಟವಲ್ಲ. ಬದಲಿಗೆ ಭಾವನೆಯಾಗಿದೆ. ವಿಶೇಷವಾಗಿ ವಿಶ್ವಕಪ್ ಎಲ್ಲರನ್ನೂ ರೋಮಾಂಚನಗೊಳಿಸಿದೆ. ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಪ್ರತಿಯೊಬ್ಬರೂ ಕುತೂಹಲದಿಂದ ಕಾಯುವಂತೆ ಮಾಡಿದೆ. ವಿಶ್ವಕಪ್ ಪಂದ್ಯಾವಳಿಗಾಗಿ  ಪ್ರತಿಯೊಬ್ಬರೂ ಕುತೂಹಲದಿಂದ ಕಾಯುತ್ತಿದ್ದಾರೆ. ಪ್ರತಿ ವಿಜಯವನ್ನು ವೈಯಕ್ತಿಕ ಮೈಲಿಗಲ್ಲಿನಂತೆ ಆಚರಿಸುತ್ತಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಅತ್ಯಧಿಕ ಸಂಭಾವನೆ ಪಡೆಯುವ ಕ್ರೀಡೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಬೋರ್ಡ್ ಆಫ್ ಕ್ರಿಕೆಟ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (BCCI) ಈ ಕ್ರಿಕೆಟಿಗರು ಪ್ರತಿ ವರ್ಷ ಕೋಟಿಗಳನ್ನು ಗಳಿಸಲು ಸಹಾಯ ಮಾಡುವ ಬಹು ಆದಾಯದ ಮೂಲಗಳನ್ನು ಒದಗಿಸುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಪ್ರತಿ ಪಂದ್ಯದ ಶುಲ್ಕದ ಜೊತೆಗೆ, ಭಾರತೀಯ ಕ್ರಿಕೆಟಿಗರು (Indian Cricketers) ತಮ್ಮ ಒಪ್ಪಂದದ ಭಾಗವಾಗಿ ವಾರ್ಷಿಕ ವೇತನ (Salary)ವನ್ನು ಪಡೆಯುತ್ತಾರೆ. ವರದಿಯ ಪ್ರಕಾರ ಗ್ರೇಡ್‌ಗೆ ಅನುಕ್ರಮವಾಗಿ ಆಟಗಾರರಿಗೆ ಸಂಭಾವನೆ ದೊರಕುತ್ತದೆ. ಗ್ರೇಡ್ A+ ಒಪ್ಪಂದಗಳು ವರ್ಷಕ್ಕೆ 7 ಕೋಟಿ, ಗ್ರೇಡ್ A ಯಲ್ಲಿರುವವರು ವಾರ್ಷಿಕವಾಗಿ 5 ಕೋಟಿ ಗಳಿಸುತ್ತಾರೆ. ಮತ್ತೊಂದೆಡೆ, ಗ್ರೇಡ್ ಬಿ ಮತ್ತು ಸಿ ಒಪ್ಪಂದ ಮಾಡಿದವರು  ವಾರ್ಷಿಕ 3 ಕೋಟಿ ರೂ. ಮತ್ತು 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಈಗ ಯಾವ ಕ್ರಿಕೆಟಿಗ ಎಷ್ಟು ಸಂಭಾವನೆ ಪಡೆಯುತ್ತಾರೆ ತಿಳಿಯೋಣ.

ಭಾರತದ ಸ್ಟಾರ್‌ ಕ್ರಿಕೆಟಿಗರು ಮತ್ತವರ ಮುದ್ದಾದ ಪತ್ನಿಯರ ವಯಸ್ಸಿನ ಅಂತರವೆಷ್ಟು ಗೊತ್ತಾ? ಇಲ್ಲಿದೆ ಜನ್ಮದಿನಾಂಕ ವಿವರ!

ರೋಹಿತ್ ಶರ್ಮಾ 
ಖ್ಯಾತ ಕ್ರಿಕೆಟಿಗ ಮತ್ತು ಪ್ರಸ್ತುತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾರನ್ನು ಅತ್ಯುತ್ತಮ ಗೇಮಿಂಗ್ ಕೌಶಲ್ಯದಿಂದಾಗಿ ಲಕ್ಷಾಂತರ ಜನರು ಪ್ರೀತಿಸುತ್ತಾರೆ. 36 ವರ್ಷದ ಕ್ರಿಕೆಟಿಗ ತಂಡವನ್ನು ಹಲವು ಐತಿಹಾಸಿಕ ಗೆಲುವಿನತ್ತ (Win) ಮುನ್ನಡೆಸಿದ್ದಾರೆ. 2023ರಲ್ಲಿ BCCI ದ ಗ್ರೇಡ್ A+ ಒಪ್ಪಂದವನ್ನು ಪಡೆದುಕೊಂಡ ಭಾರತದ ನಾಲ್ಕು ಕ್ರಿಕೆಟಿಗರಲ್ಲಿ ಒಬ್ಬರು. ಮತ್ತು ಇದು ಅವರಿಗೆ ವಾರ್ಷಿಕ ರೂ. 7 ಕೋಟಿ. ಕ್ರಿಕೆಟಿಗ ಹಲವಾರು ಅಂತಾರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಅಪಾರ ಪರಿಶ್ರಮದಿಂದ ವಿರಾಟ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರನ್ನು ಸೃಷ್ಟಿಸಿದರು, ಸಚಿನ್ ತೆಂಡೂಲ್ಕರ್ ಅವರ 49 ODI ಶತಕಗಳ ದಾಖಲೆಯನ್ನು ಮುರಿದರು. ವಿರಾಟ್ ನಾಯಕತ್ವದ ಸ್ಥಾನದಿಂದ ಕೆಳಗಿಳಿದಿದ್ದರೂ, ಅವರು ಪ್ರಮುಖ ಆಟಗಾರರಾಗಿ ಉಳಿದಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಕೌಶಲ್ಯ ಮತ್ತು ಪಿಚ್‌ನಲ್ಲಿ ಅಸಾಧಾರಣ ಫೀಲ್ಡಿಂಗ್‌ನಿಂದ, BCCI ಅವರಿಗೆ ಗ್ರೇಡ್ A+  ನೀಡಿತು. ಕೊಹ್ಲಿ ಕೂಡ ವಾರ್ಷಿಕ  7 ಕೋಟಿ ರೂ. ಪಡೆಯುತ್ತಾರೆ.

world Cup 2023: ಈ ಕ್ರಿಕೆಟಿಗರ ಹೆಂಡತಿಯರೂ ಫೇಮಸ್‌ ಕ್ರೀಡಾಪಟುಗಳು

ರವೀಂದರ್ ಜಡೇಜಾ
ರವೀಂದರ್ ಜಡೇಜಾ ಅವರನ್ನು ಅತ್ಯದ್ಭುತ ಸ್ಪಿನ್ನರ್ ಎಂದು ಪ್ರಶಂಸಿಸಲಾಗುತ್ತದೆ. ಅವರು 2023ರ ವಿಶ್ವಕಪ್‌ನಲ್ಲಿ ಭಾರತದ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ, ರವೀಂದ್ರ ಜಡೇಜಾ ಅವರನ್ನು ಬಿಸಿಸಿಐ ಗ್ರೇಡ್ A ನಿಂದ ಗ್ರೇಡ್ A+ ಗೆ ಬಡ್ತಿ ನೀಡಿತ್ತು. ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಈಗಾಗಲೇ ನಡೆಯುತ್ತಿರುವ ICC ವಿಶ್ವಕಪ್ 2023 ರಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ವಾರ್ಷಿಕ ರೂ. 7 ಕೋಟಿಗಳು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ಗಳಿಸಿದವರಲ್ಲಿ ಒಂದಾಗಿದೆ.

ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ ಭಾರತ ಕ್ರಿಕೆಟ್ ತಂಡದ ಮತ್ತೊಬ್ಬ ಪ್ರಮುಖ ಆಟಗಾರ. ಅದ್ಭುತ ಬೌಲರ್ ಕೂಡಾ ಹೌದು. ಈ ಕ್ರಿಕೆಟಿಗನಿಗೆ 2023ರ ಆರಂಭದಲ್ಲಿ BCCI ಯಿಂದ ಗ್ರ್ಯಾಡ್ A+ ಒಪ್ಪಂದವನ್ನು ನೀಡಿತು. ವರ್ಷಕ್ಕೆ ಇವರ ಸಂಭಾವನೆ 7 ಕೋಟಿ ರೂ. ಆಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?