ಭಾರತ ತಂಡದ ವೇಗಿಗಳ ಪ್ರದರ್ಶನದ ಬಗ್ಗೆ ಪ್ರಶ್ನಿಸಿದಾಗ ರಿಚರ್ಡ್ಸ್ ಪ್ರಮುಖವಾಗಿ ಮೊಹಮದ್ ಶಮಿಯನ್ನು ಶ್ಲಾಘಿಸಿದರು. ‘ಸದ್ಯಕ್ಕೆ ಶಮಿಯಷ್ಟು ನಿಖರ, ಮೊನಚಾದ ದಾಳಿ ನಡೆಸುತ್ತಿರುವ ಮತ್ತೊಬ್ಬ ವೇಗಿ ಇಲ್ಲ. ಭಾರತ ಯಶಸ್ಸಿನಲ್ಲಿ ಅವರ ಪಾತ್ರ ಅತ್ಯಂತ ಮುಖ್ಯವಾದದ್ದು’ ಎಂದು ರಿಚರ್ಡ್ಸ್ ಹೇಳಿದರು.
ಬೆಂಗಳೂರು(ನ.18): ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿಯನ್ನು ಕೊಂಡಾಡಿದ ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್, ಕೊಹ್ಲಿ ಈ ಭೂಮಿಯಲ್ಲಿ ಹುಟ್ಟಿದವರಲ್ಲ ಬೇರೆ ಗ್ರಹದಿಂದಲೇ ಬಂದಿದ್ದಾರೆ ಎಂದರು. ಶುಕ್ರವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಿಚರ್ಡ್ಸ್ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ದೊಂದಿಗೆ ಈ ವಿಶ್ವಕಪ್ ಟೂರ್ನಿ ಬಗ್ಗೆ ಮುಕ್ತವಾಗಿ ಮಾತನಾಡಿದರು.
ವಿರಾಟ್‌ರ ದಾಖಲೆಯ 50ನೇ ಏಕದಿನ ಶತತಕ್ಕೆ ವಾಂಖೇಡೆ ಕ್ರೀಡಾಂಗಣದಲ್ಲಿ ಸಾಕ್ಷಿಯಾದ ಬಗ್ಗೆ ಮಾತನಾಡಿದ ರಿಚರ್ಡ್ಸ್ ‘ಕೊಹ್ಲಿ ಈಗಿನ ಎಲ್ಲಾ ಬ್ಯಾಟರ್‌ಗಳಿಗಿಂತ ಎತ್ತರದ ಸ್ಥಾನದಲ್ಲಿದ್ದಾರೆ. ಅವರ ಆಟ ನೋಡುವುದೇ ಖುಷಿ. ಭಾರತೀಯ ಕ್ರಿಕೆಟ್ ನಿಜಕ್ಕೂ ಅದೃಷ್ಟ ಮಾಡಿದೆ. ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಯಂತಹ ಮೂವರು ಅಸಾಮಾನ್ಯ ಸಾಧಕರನ್ನು ಭಾರತ ಪಡೆದಿದೆ’ ಎಂದರು. ಭಾರತ ತಂಡದ ವೇಗಿಗಳ ಪ್ರದರ್ಶನದ ಬಗ್ಗೆ ಪ್ರಶ್ನಿಸಿದಾಗ ರಿಚರ್ಡ್ಸ್ ಪ್ರಮುಖವಾಗಿ ಮೊಹಮದ್ ಶಮಿಯನ್ನು ಶ್ಲಾಘಿಸಿದರು. ‘ಸದ್ಯಕ್ಕೆ ಶಮಿಯಷ್ಟು ನಿಖರ, ಮೊನಚಾದ ದಾಳಿ ನಡೆಸುತ್ತಿರುವ ಮತ್ತೊಬ್ಬ ವೇಗಿ ಇಲ್ಲ. ಭಾರತ ಯಶಸ್ಸಿನಲ್ಲಿ ಅವರ ಪಾತ್ರ ಅತ್ಯಂತ ಮುಖ್ಯವಾದದ್ದು’ ಎಂದು ರಿಚರ್ಡ್ಸ್ ಹೇಳಿದರು.
ಏಕದಿನ ಕ್ರಿಕೆಟ್‌ನ ಜನಪ್ರಿಯತೆ ಕಡಿಮೆಯಾಗುತ್ತಿದೆ ಎನ್ನುವವರಿಗೆ ಈ ವಿಶ್ವಕಪ್ ತೋರಿಸಬೇಕು ಎಂದ ರಿಚರ್ಡ್ಸ್, ಟಿ20ಯಿಂದಾಗಿ ಟೆಸ್ಟ್ ಕ್ರಿಕೆಟ್‌ನತ್ತ ಆಸಕ್ತಿ ಕಡಿಮೆಯಾಗುತ್ತಿದೆ ಎನ್ನುವುದನ್ನು ತಾವು ಒಪ್ಪುವುದಿಲ್ಲ ಎಂದರು.
ಈ ವಿಶ್ವಕಪ್‌ಗೆ ವೆಸ್ಟ್‌ಇಂಡೀಸ್ ಅರ್ಹತೆ ಪಡೆಯದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ‘ವಿಂಡೀಸ್ ಆಟಗಾರರು ವಿಶ್ವಕಪ್ ಪಂದ್ಯಗಳನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿರುತ್ತಾರೆ. ವಿಂಡೀಸ್‌ನಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಇನ್ನು 6-7 ತಿಂಗಳಲ್ಲಿ ಕೆರಿಬಿಯನ್‌ನಲ್ಲೇ ಟಿ20 ವಿಶ್ವಕಪ್ ನಡೆಯಲಿದೆ. ವಿಂಡೀಸ್‌ಗೆ ವಿಶ್ವಕಪ್ ಗೆಲ್ಲಲು ಉತ್ತಮ ಅವಕಾಶವಿದೆ’ ಎಂದರು.
ರನ್ ಮೆಷಿನ್ ಕೊಹ್ಲಿ ಮೈ ಮೇಲಿದೆ 12 ಟ್ಯಾಟೂ, ಅಬ್ಬರದ ಆಟಕ್ಕೆ ಇದುವೇ ಸ್ಫೂರ್ತಿನಾ?
ಭಾರತೀಯ ಮಾರುಕಟ್ಟೆಗೆ ವರ್ಚಸ್ ವಿಸ್ಕಿ
ಅಮೆರಿಕದ ಮಿಷಿಗನ್‌ನಲ್ಲಿರುವ ಶಂಕರ್ ಡಿಸ್ಟಿಲರಿಸ್‌ನ ಮಾಲಿಕ, ಕನ್ನಡಿಗ ವರ್ಚಸ್ವಿ ಶಂಕರ್ ‘ವರ್ಚಸ್’ ಹೆಸರಿನ ವಿಸ್ಕಿ ಬ್ರ್ಯಾಂಡ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಬ್ರ್ಯಾಂಡ್‌ನ ಅನಾವರಣ ಕಾರ್ಯಕ್ರಮ ಶುಕ್ರವಾರ ಬೆಂಗಳೂರಿನ ಮಾಲ್‌ವೊಂದರಲ್ಲಿ ನಡೆಯಿತು. ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್ ಈ ಬ್ರ್ಯಾಂಡ್‌ನ ರಾಯಭಾರಿಯಾಗಿದ್ದಾರೆ.