ರಾಂಚಿ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅಭಿಮಾನಿಗಳ ನೀರಸ ಪ್ರತಿಕ್ರಿಯೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಇದೀಗ ಬಿಸಿಸಿಐ ಕೊಹ್ಲಿ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ
ರಾಂಚಿ(ಅ.23): ಭಾರತದಲ್ಲಿ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆ ಉಳಿಸಲು ಬಿಸಿಸಿಐ 5 ಪ್ರಮುಖ ಟೆಸ್ಟ್ ಕೇಂದ್ರಗಳನ್ನು ಗುರುತಿಸಿ, ಅಲ್ಲಿ ಮಾತ್ರ ಪಂದ್ಯಗಳನ್ನು ಆಯೋಜಿಸಬೇಕು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಈಗಾಗಲೇ ಈ ಮಾದರಿ ಇದ್ದು, ಅದನ್ನೇ ಅನುಸರಿಸಲು ಸಲಹೆ ನೀಡಿದ್ದಾರೆ. ಇಲ್ಲಿ ನಡೆದ 3ನೇ ಟೆಸ್ಟ್‌ಗೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಕಂಡುಬಂದಿದ್ದಕ್ಕೆ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹರಿಣಗಳ ಶಿಕಾರಿ: ಟೀಂ ಇಂಡಿಯಾಗೆ ಜೈ ಹೋ ಎಂದ ಕ್ರಿಕೆಟ್ ಲವರ್ಸ್!
undefined
ಆಸ್ಪ್ರೇಲಿಯಾದಲ್ಲಿ ಮೆಲ್ಬರ್ನ್, ಪರ್ತ್, ಸಿಡ್ನಿ, ಬ್ರಿಸ್ಬೇನ್ ಹಾಗೂ ಅಡಿಲೇಡ್ನಲ್ಲಿ ಮಾತ್ರ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಅದೇ ರೀತಿ ಇಂಗ್ಲೆಂಡ್‌ನಲ್ಲಿ ಲಾರ್ಡ್ಸ್, ಓವಲ್, ಟ್ರೆಂಟ್ ಬ್ರಿಡ್ಜ್, ಓಲ್ಡ್ ಟ್ರಾಫರ್ಡ್, ಎಡ್ಜ್‌ಬಾಸ್ಟನ್, ಸೌಥಾಂಪ್ಟನ್ ಹಾಗೂ ಹೆಡಿಂಗ್ಲಿ ಕ್ರೀಡಾಂಗಣಗಳು ಪ್ರಮುಖ 7 ಟೆಸ್ಟ್ ಕೇಂದ್ರಗಳಾಗಿವೆ. ಸದ್ಯ ಭಾರತದಲ್ಲಿ 15ಕ್ಕಿಂತ ಹೆಚ್ಚು ಕ್ರೀಡಾಂಗಣಗಳಲ್ಲಿ ಟೆಸ್ಟ್ ನಡೆಸಲಾಗುತ್ತಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಧೋನಿ ಪ್ರತ್ಯಕ್ಷ!
‘ಟೆಸ್ಟ್ ಕ್ರಿಕೆಟ್‌ನ ರೋಚಕತೆ ಉಳಿಸಬೇಕಿದ್ದರೆ, ನಮ್ಮಲ್ಲಿ ಗರಿಷ್ಠ 5 ಟೆಸ್ಟ್ ಕೇಂದ್ರಗಳನ್ನು ನಿಗದಿಪಡಿಸಬೇಕು. ಕೆಲ ನಗರಗಳಲ್ಲಿ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ಆಗಮಿಸುತ್ತಾರೆ, ಕೆಲ ನಗರಗಳಲ್ಲಿ ಆಗಮಿಸುವುದಿಲ್ಲ. 5 ಕ್ರೀಡಾಂಗಣಗಳನ್ನು ನಿಗದಿ ಮಾಡಿದರೆ, ಪ್ರವಾಸಿ ತಂಡಕ್ಕೂ ಎಲ್ಲಿ, ಎಂತಹ ಪಿಚ್‌ನಲ್ಲಿ ಆಡಲಿದ್ದೇವೆ ಎನ್ನುವ ಮಾಹಿತಿ ಇರಲಿದೆ. ಆಗ ಮತ್ತಷ್ಟುಸ್ಪರ್ಧಾತ್ಮಕ ಪಂದ್ಯಗಳನ್ನು ನೋಡಬಹುದು’ ಎಂದು ಕೊಹ್ಲಿ ಹೇಳಿದರು.
ಇದನ್ನೂ ಓದಿ: ಕೊಹ್ಲಿ ಫೋಟೋಗೆ ಅಭಿಮಾನಿಗಳ ಪ್ರತಿಕ್ರಿಯೆ; ಪ್ರಶ್ನೆ ಕೇಳಿದ BCCI ಸುಸ್ತು!
‘ಬಿಸಿಸಿಐ ಸರದಿ ಮಾದರಿ ಅನುಸರಿಸುತ್ತಿದೆ ನಿಜ. ಎಲ್ಲಾ ರಾಜ್ಯ ಸಂಸ್ಥೆಗಳಿಗೂ ಆತಿಥ್ಯ ಅವಕಾಶ ನೀಡಲಾಗುತ್ತಿದೆ. ಅದನ್ನು ಏಕದಿನ, ಟಿ20 ಪಂದ್ಯಗಳಿಗೆ ಸೀಮಿತಗೊಳಿಸಿ, ಟೆಸ್ಟ್ ಪಂದ್ಯಗಳಿಗೆ ನಿರ್ದಿಷ್ಟಕ್ರೀಡಾಂಗಣಗಳನ್ನು ನಿಗದಿ ಪಡಿಸಬೇಕಿದೆ’ ಎಂದು ಕೊಹ್ಲಿ ಅಭಿಪ್ರಾಯಿಸಿದ್ದಾರೆ.