ಭಾರತೀಯ ಸೇನಾ ವಾಹನ ನಿಸಾನ್ ಜೊಂಗಾ ಖರೀದಿಸಿದ ಧೋನಿ!

By Web Desk  |  First Published Oct 22, 2019, 8:32 PM IST

ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ವಾಹನ ಸಂಗ್ರಹಾಲಯಕ್ಕೆ ಹೊಸ ವಾಹನ ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ ಧೋನಿ ಜೀಪ್ ಕಂಪಾಸ್ ಟಾಪ್ ಮಾಡೆಲ್ ಖರೀದಿಸಿದ್ದರು. ಇದರ ಬೆನ್ನಲ್ಲೇ ದುಬಾರಿ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿರುವ ಭಾರತೀಯ ಸೇನಾ ವಾಹನ ಖರೀದಿಸಿದ್ದಾರೆ. 


ರಾಂಚಿ(ಅ.22): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಗೆ ಕಾರು, ಬೈಕ್ ಮೇಲೆ ಪ್ರೀತಿ ಹೆಚ್ಚು. ಹೀಗಾಗಿ ಧೋನಿ ಬಳಿ  ಹಮ್ಮರ್ ಜೀಪ್, ಹ್ಯಾಲ್ಕಟ್ ಬೈಕ್ ಸೇರಿದಂತೆ ದುಬಾರಿ ಮೌಲ್ಯದ ವಾಹನಗಳಿವೆ. ಇತ್ತೀಚೆಗಷ್ಟೇ ಭಾರತೀಯ  ಸೇನೆಯಲ್ಲಿ ಸೇವೆ ಸಲ್ಲಿಸಿದ ಧೋನಿ, ಇದೀಗ ಭಾರತೀಯ ಸೇನಾ ವಾಹನವನ್ನು ಖರೀದಿಸಿದ್ದಾರೆ.

Latest Videos

undefined

ಇದನ್ನೂ ಓದಿ: ಧೋನಿ ಮನೆ ಸೇರಿತು ಭಾರತದ ಮೊದಲ ಜೀಪ್ ಗ್ರ್ಯಾಂಡ್ ಚೆರೊಕಿ ಕಾರು!

ನಿಸಾನ್ ಜೊಂಗಾ 1 ಟನ್ ವಾಹನವನ್ನು ಧೋನಿ ಖರೀದಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಬಳಸಿದ ಈ ವಾಹನ ಕೆಲ ವರ್ಷಗಳ ಹಿಂದೆ ಭಾರತೀಯ ಸೇನೆಯು ನಿಸಾನ್ ಜೊಂಗಾ ವಾಹನವನ್ನು ಸೇವೆಯಿಂದ ಮುಕ್ತಗೊಳಿಸಿತ್ತು. ಸೇನಾ ವಾಹನ ಸಂಗ್ರಹಾಲಯ ಸೇರಿದ ಜೊಂಗಾ ಇದೀಗ ಧೋನಿ ಖರೀದಿಸಿದ್ದಾರೆ.

 

. marked his presence at JSCA in style as he took his new car 'Jonga' for a spin!💙😇 pic.twitter.com/HKNmT5KavZ

— MS Dhoni Fans Official (@msdfansofficial)

ದುಬಾರಿ ಬೆಲೆಯ ಈ ವಾಹನ ಇದೀಗ ಧೋನಿ ಕಾರು ಸಂಗ್ರಹಾಲಯ ಸೇರಿದೆ. ಸೇನಾ ವಾಹನ ಖರೀದಿಸಿ ಕೆಲ ಬದಲಾವಣೆ ಮಾಡಲಾಗಿದೆ. ಈ ಭಾರಿ ಗಾತ್ರದ ವಾಹನದ ಜೊತೆ ಧೋನಿ ರಾಂಚಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾರೆ. 

 

Here's All What MSDians Look Out For Always ❤️😍
Today's Glimpse of Match
N Outside Stadium, Lt Colonel DHONI with recently purchased Nissan Jonga Jeep, It was used by the Indian Army in 1990's. 😍❤️🇮🇳 pic.twitter.com/lUQAE7hv47

— Omkar Anpat💛🔥#91📱 (@IamOmkarAnpat)

ಇದನ್ನೂ ಓದಿ: ಸೈನಿಕರ ಜತೆ ಧೋನಿ ವಾಲಿಬಾಲ್‌!..

ಜೊಂಗಾ ಹೆಸರು ಬರಲು ಕಾರಣವೇನು?
ನಿಸಾನ್ ಕಂಪನಿ ಈ ವಾಹನ್ನು ಭಾರತೀಯ ಸೇನೆಗಾಗಿ ನಿರ್ಮಾಣ ಮಾಡಿದೆ. ಸೇನೆ ಅಗತ್ಯಕ್ಕೆ ಅನುಗುಣವಾಗಿ ಈ ವಾಹವನ್ನು ನಿರ್ಮಿಸಲಾಗಿತ್ತು. ಈ ನಿಸಾನ್ 1 ಟನ್ ವಾಹನವನ್ನು ಭಾರತೀಯ ಸೇನೆಯ ಜಬಲಾಪುರ್ ಓರ್ಡನೆನ್ಸ್  ಅಂಡ್ ಗನ್‌ಕ್ಯಾರೇಜ್ ಅಸೆಂಬ್ಲಿ(Jabalpur Ordnance and Guncarriage Assembly (JONGA) ಬಳಸಿತ್ತು. ಹೀಗಾಗಿ ಜೊಂಗಾ ಹೆಸರು ಬಳಕೆಗೆ ಬಂತು.

ಇದನ್ನೂ ಓದಿ: ಸೇನಾ ಸಮವಸ್ತ್ರದಲ್ಲಿ ಹೀಗೆ ಮಿಂಚುತ್ತಾರೆ ಲೆಫ್ಟಿನೆಂಟ್ ಕರ್ನಲ್ ಎಂ. ಎಸ್ ಧೋನಿ!

ಇದು ಪೆಟ್ರೋಲ್ ಎಂಜಿನ್ ವಾಹನ. ಈ ವಾಹನ ಸುಲಭವಾಗಿ ಮಾರಾಟಕ್ಕೂ ಸಿಗುವುದಿಲ್ಲ. ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿರುವ ಧೋನಿ, ಪ್ಯಾರ ರೆಜಿಮೆಂಟ್ ವಿಭಾಗದಲ್ಲಿ ಸಕ್ರೀಯರಾಗಿದ್ದಾರೆ. ಇತ್ತೀಚೆಗಷ್ಟೆ ಭಾರತೀಯ ಸೇನೆ ಜೊತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರು. ಇದೀಗ ಸೇನಾ ವಾಹನ ಖರೀದಿಸಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ. ಆದರೆ ಈ ವಾಹನದ ಬೆಲೆ, ಹಾಗೂ ಇತರ ಮಾಹಿತಿ ಬಹಿರಂಗವಾಗಿಲ್ಲ.

click me!