ಸ್ಟಾರ್ಕ್‌ ಬೇಕೆಂದು ಪಟ್ಟು ಹಿಡಿದಿದ್ದ ಗಂಭೀರ್..! ಕೆಕೆಆರ್ ಗೆಲುವಿನ ಹಿಂದಿದೆ ಹಲವು ಕಾಣದ ಕೈಗಳು..!

By Suvarna News  |  First Published May 28, 2024, 12:55 PM IST

ಈ ಬಾರಿಯ IPLನಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು, 3ನೇ ಬಾರಿ IPL ಕಪ್ ಎತ್ತಿಹಿಡಿದಿದೆ. ಕೋಲ್ಕತಾ ನೈಟ್‌ರೈಡರ್ಸ್ ಅದೃಷ್ಟದಿಂದ ಕಪ್ ಗೆದ್ದಿಲ್ಲ. ಟೂರ್ನಿಯ ಆರಂಭದಿಂದಲೂ KKR ಪ್ರಶಸ್ತಿ ಗೆಲ್ಲೋ ಫೇವರಿಟ್ ಆಗಿತ್ತು. 


ಬೆಂಗಳೂರು(ಮೇ.28): ಕೋಲ್ಕತಾ ನೈಟ್‌ ರೈಡರ್ಸ್ ಐಪಿಎಲ್‌ ಸೀಸನ್ 17ರ ಕಿರೀಟ ಮುಡಿಗೇರಿಸಿಕೊಂಡಿದೆ. ಇದಕ್ಕೆ ಕಾರಣ ತಂಡದ ಆಟಗಾರರ ಅದ್ಭುತ ಪ್ರದರ್ಶನವೇ ಕಾರಣ. ಆದ್ರೆ. ಆಟಗಾರರು ಆನ್ಫೀಲ್ಡ್ ಹೀರೋಗಳಷ್ಟೇ, ಆಫ್ ಫೀಲ್ಡ್ನಲ್ಲಿದ್ದು  ಕೋಲ್ಕತಾ ನೈಟ್ ರೈಡರ್ಸ್ ಗೆಲುವಿಗೆ ಕಾರಣವಾದವರು ಈ ನಾಲ್ವರು. ಯಾರವರು ಅಂತೀರಾ..? ಈ ಸ್ಟೋರಿ ನೋಡಿ. 

ಆನ್‌ ಫೀಲ್ಡ್‌ನಲ್ಲಿ ಆಟಗಾರರ ಅದ್ಭುತ ಪ್ರದರ್ಶನ..! 

Latest Videos

undefined

ಈ ಬಾರಿಯ IPLನಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು, 3ನೇ ಬಾರಿ IPL ಕಪ್ ಎತ್ತಿಹಿಡಿದಿದೆ. ಕೋಲ್ಕತಾ ನೈಟ್‌ರೈಡರ್ಸ್ ಅದೃಷ್ಟದಿಂದ ಕಪ್ ಗೆದ್ದಿಲ್ಲ. ಟೂರ್ನಿಯ ಆರಂಭದಿಂದಲೂ KKR ಪ್ರಶಸ್ತಿ ಗೆಲ್ಲೋ ಫೇವರಿಟ್ ಆಗಿತ್ತು. ಯಾಕಂದ್ರೆ, ಬೌಲಿಂಗ್, ಬ್ಯಾಟಿಂಗ್ ಸೇರಿದಂತ ಪ್ರತಿಯೊಂದು ವಿಭಾಗದಲ್ಲೂ ಶ್ರೇಯಸ್ ಅಯ್ಯರ್ ಪಡೆ ಜಬರ್ದಸ್ತ್ ಪ್ರದರ್ಶನ ನೀಡಿತ್ತು. ಇದರ ಜೊತೆಗೆ KKRನ ಸೂಪರ್ ಸಕ್ಸಸ್ನಲ್ಲಿ  ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್‌ಗೂ ಪಾಲು ಸಲ್ಲಬೇಕು. 

ಕನ್ನಡ ನಿರ್ದೇಶಕನೊಂದಿಗೆ ಅನುಷ್ಕಾ ಶೆಟ್ಟಿ ಮದ್ವೆ? ಈ ಕ್ರಿಕೆಟಿಗನ ಮೇಲೆ ಬಾಹುಬಲಿ ನಟಿ ಲವ್ವಲ್ಲಿ ಬಿದ್ದಿದ್ದರಂತೆ!

ಶ್ರೇಯಸ್ ಪಡೆಯ ಮಾಸ್ಟರ್ ಮೈಂಡ್ ಗಂಭೀರ್..!

ಯೆಸ್, ಗೌತಮ್ ಗಂಭೀರ್ ಮೆಂಟರ್ ಆಗಿ ಎಂಟ್ರಿ ಕೊಟ್ಟಿದ್ದೇ ತಡ KKR ತಂಡದ ಹಣೆಬರಹವೇ ಚೇಂಜ್ ಆಯ್ತು. ಈ ಹಿಂದೆ ನಾಯಕರಾಗಿ KKRಗೆ ಎರಡು ಬಾರಿ ಕಪ್ ಗೆದ್ದುಕೊಟ್ಟಿದ್ದ ಗೌತಿ, ಈ ಸಲ ಮೆಂಟರ್ ಆಗಿ ಕಪ್ ಗೆದ್ದುಕೊಡೋ ಪಣತೊಟ್ಟಿದ್ರು. ಅದಕ್ಕಾಗಿ ಭರ್ಜರಿ ಗೇಮ್‌ ಪ್ಲಾನ್ ರೂಪಿಸಿದ್ರು. ಗಂಭೀರ್‌ ಅವರ ರಣತಂತ್ರಗಳು ಸಖತ್ತಾಗಿ ವರ್ಕೌಟ್ ಆದ್ವು. ಸುನಿಲ್ ನರೈನ್, ಈ ಸಲ KKR ಬ್ಯಾಟಿಂಗ್ ವಿಭಾಗದ ಮೇನ್ ಶಕ್ತಿಯಾಗಿ ಹೊರಹೊಮ್ಮಿದ್ರು.. 2023ರ IPLನಲ್ಲಿ ನರೈನ್ 7ನೇ ಕ್ರಮಾಂಕದಲ್ಲಿ ಆಡಿ, ಕಂಪ್ಲೀಟ್ ಫೇಲ್ ಆಗಿದ್ರು. ಇದ್ರಿಂದ ತಂಡಕ್ಕೆ ಹಿನ್ನಡೆಯಾಗಿತ್ತು. ಆದ್ರೆ, ಗಂಭೀರ್ ಕೆಕೆಅರ್ ತಂಡ ಸೇರಿದ್ಮೇಲೆ, ನರೈನ್ನ ಓಪನರ್ ಆಗಿ ಕಣಕ್ಕಿಳಿಸಿದ್ರು.

ಮಿನಿ ಆಕ್ಷನ್ನಲ್ಲಿ  ಸ್ಟಾರ್ಕ್ ಬೇಕೆ ಬೇಕು ಅಂತ ಪಟ್ಟು..! 

ಐಪಿಎಲ್ ಮಿನಿ ಆಕ್ಷನ್ನಲ್ಲಿ ಮಿಚೆಲ್ ಸ್ಟಾರ್ಕ್ ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ರು. ಅದೇ ಕಾರಣಕ್ಕೆ ಫ್ರಾಂಚೈಸಿ  ಸ್ಟಾರ್ಕ್‌ಗೆ ₹24.75 ಕೋಟಿ ನೀಡಿ ಖರೀದಿಸಿತ್ತು. ಅಂದು ಫ್ಯಾನ್ಸ್ ಮತ್ತು ಕ್ರಿಕೆಟ್ ಎಕ್ಸ್‌ಪರ್ಟ್ಸ್ ಗಂಭೀರ್‌ಗೆ ತಲೆಕೆಟ್ಟಿದೆ ಅಂದಿದ್ರು. ಅಂದು ಟೀಕಿಸಿದವರೇ, ಇಂದು ಗಂಭೀರ್ ಅವರನ್ನ ಹೊಗಳ್ತಿದ್ದಾರೆ. ಯಾಕಂದ್ರೆ, ಅದೇ ಸ್ಟಾರ್ಕ್ ಪ್ಲೇ ಆಫ್ ಪಂದ್ಯಗಳಲ್ಲಿ ಅದ್ಭುತ ಬೌಲಿಂಗ್ ಮೂಲಕ KKRಗೆ ಗೆಲುವು ತಂದುಕೊಟ್ರು

ಭಾರತ ತಂಡದ ಕೋಚ್‌ ಹುದ್ದೆಗೆ ಅರ್ಜಿ ಹಾಕಲು ಗಡುವು ಮುಕ್ತಾಯ..! ಯಾರಾಗ್ತಾರೆ ಹೊಸ ಕೋಚ್?

ಓನರ್ ಶಾರುಖ್ ಖಾನ್ ಎಲ್ಲದರಲ್ಲೂ ಫುಲ್ ಫ್ರೀಡಮ್..!

ಯೆಸ್, KKR ಈ ಸಲ ಕಪ್ ಎತ್ತಲು ತಂಡದ ಓನರ್ ಶಾರುಖ್ ಖಾನ್ ಕೂಡ ಪ್ರಮುಖ ಕಾರಣ. ಮಿನಿ ಆಕ್ಷನ್ನಲ್ಲಿ ಆಟಗಾರರನ್ನ ಖರೀದಿ ಮಾಡುವುದರಿಂದ ಹಿಡಿದು, ತಂಡದ ಆಯ್ಕೆ ಸ್ಟ್ರಾಟಜಿಗಳನ್ನು ರೂಪಿಸುವಲ್ಲಿ ಸೇರಿದಂತೆ ಎಲ್ಲದರಲ್ಲೂ ಶಾರೂಖ್, ಟೀಮ್ ಮ್ಯಾನೇಜ್ಮೆಂಟ್ ಫುಲ್  ಫ್ರೀಡಮ್ ನೀಡಿದ್ರು. 

ಲೋಕಲ್ ಟ್ಯಾಲೆಂಟ್‌ಗಳನ್ನ ಹುಡುಕಿ ತಂದ ನಾಯರ್..!

ಗಂಭೀರ್ ಜೊತೆಗೆ KKR ಸಕ್ಸಸ್ನಲ್ಲಿ ತಂಡದ ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಪಾತ್ರವೂ ದೊಡ್ಡದಿದೆ. IPLನಂತ ದೊಡ್ಡ ಚಾಂಪಿಯನ್‌ಶಿಪ್‌ ಗೆಲ್ಲಲು ಕೇವಲ ವಿದೇಶಿ ಆಟಗಾರರಿದ್ದರಷ್ಟೇ ಸಾಲಲ್ಲ. ಲೋಕಲ್ ಟ್ಯಾಲೆಂಟೆಡ್ ಪ್ಲೇಯರ್ಸ್ ಕೂಡ ಬೇಕು. ರಿಂಕು ಸಿಂಗ್, ಹರ್ಷಿತ್ ರಾಣಾ, ಅಂಗ್‌ಕೃಷ್ ರಘುವಂಶಿಯಂತ ಯಂಗ್‌ಸ್ಟರ್‌ಗಳನ್ನ ಅಭಿಷೇಕ್ ನಾಯರ್ ಹುಡುಕಿ ತಂದ್ರು. ಅವರನ್ನ ಮ್ಯಾಚ್ ವಿನ್ನರ್ಗಳನ್ನಾಗಿ ರೂಪಿಸಿದ್ರು.

ಲಾಸ್ಟ್ ಬಟ್ ನಾಟ್ ಲೀಸ್ಟ್ ಎನ್ನುವಂತೆ ತಂಡದ ಹೆಡ್ ಕೋಚ್ ಚಂದ್ರಕಾಂತ್ ಪಂಡಿತ್ ಬಗ್ಗೆ ಹೇಳಲೇಬೇಕು. ಟೀಂ ಇಂಡಿಯಾದ ಈ ಮಾಜಿ ಆಟಗಾರ ದೇಶಿಯ ಕ್ರಿಕೆಟ್ನಲ್ಲಿ ಮೋಸ್ಟ್  ಸಕ್ಸಸ್ಫುಲ್ ಕೋಚ್. ಚಂದ್ರಕಾಂತ್ ಕೋಚಿಂಗ್‌ನಲ್ಲಿ ಮುಂಬೈ, ವಿದರ್ಭ, ಮಧ್ಯಪ್ರದೇಶ ತಂಡಗಳು ರಣಜಿ ಕಪ್ ಮುಡಿಗೇರಿಸಿಕೊಂಡಿವೆ. ಈಗ ತಂಡ ಸೇರಿದ ಎರಡೇ ವರ್ಷಗಳಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ IPL ಕಪ್ ಗೆದ್ದಿದೆ. 

ಒಟ್ಟಿನಲ್ಲಿ ಆಟಗಾರರು KKR ಕಪ್ ಗೆಲುವಿನ ಆನ್‌ಫೀಲ್ಡ್ ಹೀರೋಗಳು. ಆದ್ರೆ, ಆಫ್ ದಿ ಫೀಲ್ಡ್‌ನಲ್ಲಿ ತಂಡದ ಓನರ್, ಕೋಚಿಂಗ್ ಸ್ಟಾಫ್  ಆಫ್‌ಫೀಲ್ಡ್ ಹೀರೋಗಳು ಅಂದ್ರೆ ತಪ್ಪಿಲ್ಲ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!