ಕಣ್ಣೀರು ಹಾಕುತ್ತಲೇ ಕೋಲ್ಕತಾ ತಂಡವನ್ನು ಅಭಿನಂದಿಸಿದ ಕಾವ್ಯಾ ಮಾರನ್..! ಇಲ್ಲಿದೆ ಎಮೋಷನಲ್ ವಿಡಿಯೋ

By Naveen Kodase  |  First Published May 27, 2024, 5:04 PM IST

ಸನ್‌ರೈಸರ್ಸ್‌ನ ಆಕ್ರಮಣಕಾರಿ ಆಟ ನಮ್ಮೆದುರು ನಡೆಯಲ್ಲ ಎಂಬಂತೆ ಅಬ್ಬರಿಸಿ ಬೊಬ್ಬಿರಿದ ಶ್ರೇಯಸ್‌ ಅಯ್ಯರ್‌ ಪಡೆ, ಭಾನುವಾರ ಚೆಪಾಕ್‌ನಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ 8 ವಿಕೆಟ್‌ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.


ಚೆನ್ನೈ: ಟೂರ್ನಿಯುದ್ದಕ್ಕೂ ಪರಾಕ್ರಮ ಮೆರೆದು ಎದುರಾಳಿಗಳ ನಿದ್ದೆಗೆಡಿಸಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ 17ನೇ ಆವೃತ್ತಿ ಐಪಿಎಲ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇನ್ನು ಸನ್‌ರೈಸರ್ಸ್ ಎದುರು ಕೋಲ್ಕತಾ ನೈಟ್ ರೈಡರ್ಸ್‌ ಫೈನಲ್ ಪಂದ್ಯವನ್ನು ಜಯಿಸುತ್ತಿದ್ದಂತೆಯೇ ಹೈದರಾಬಾದ್ ತಂಡದ ಓನರ್ ಕಾವ್ಯಾ ಮಾರನ್, ಕಣ್ಣೀರು ಹಾಕುತ್ತಲ್ಲೇ ಕೆಕೆಆರ್ ತಂಡವನ್ನು ಅಭಿನಂದಿಸಿದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಸನ್‌ರೈಸರ್ಸ್‌ನ ಆಕ್ರಮಣಕಾರಿ ಆಟ ನಮ್ಮೆದುರು ನಡೆಯಲ್ಲ ಎಂಬಂತೆ ಅಬ್ಬರಿಸಿ ಬೊಬ್ಬಿರಿದ ಶ್ರೇಯಸ್‌ ಅಯ್ಯರ್‌ ಪಡೆ, ಭಾನುವಾರ ಚೆಪಾಕ್‌ನಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ 8 ವಿಕೆಟ್‌ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಇದರೊಂದಿಗೆ ಕೆಕೆಆರ್‌ 3ನೇ ಬಾರಿ ಐಪಿಎಲ್‌ ಕಿರೀಟ ಧರಿಸಿದರೆ, ಸನ್‌ರೈಸರ್ಸ್‌ನ 2ನೇ ಟ್ರೋಫಿ ಗೆಲ್ಲುವ ಕನಸು ನುಚ್ಚುನೂರಾಯಿತು. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಐಪಿಎಲ್ ಚಾಂಪಿಯನ್ ಆಗಿತ್ತು. ಇದೀಗ ಮತ್ತೊಮ್ಮೆ ಕಪ್‌ ಗೆಲ್ಲುವ ಕನವರಿಕೆಯಲ್ಲಿದ್ದ ಆರೆಂಜ್ ಆರ್ಮಿಗೆ ಕೆಕೆಆರ್ ಶಾಕ್ ನೀಡಿದೆ.

Latest Videos

undefined

IPL 2024: ಆರೆಂಜ್ ಕ್ಯಾಪ್,ಗೆದ್ದ ಕೊಹ್ಲಿಗೆ ₹10 ಲಕ್ಷ ನಗದು, ಮತ್ತ್ಯಾರಿಗೆ ಸಿಕ್ತು ಯಾವೆಲ್ಲಾ ಅವಾರ್ಡ್?

ಈ ಬಾರಿ ಐಪಿಎಲ್‌ ಬೃಹತ್‌ ಮೊತ್ತಗಳಿಗೆ ಸಾಕ್ಷಿಯಾದರೂ, ರೋಚಕತೆಗೇನೂ ಕಮ್ಮಿಯಿರಲಿಲ್ಲ. ಆದರೆ ಫೈನಲ್‌ ಪಂದ್ಯ ಯಾರೂ ನಿರೀಕ್ಷಿಸದ ರೀತಿ ಕೆಕೆಆರ್‌ನ ಪರಾಕ್ರಮದ ಮುಂದೆ ಏಕಪಕ್ಷೀಯವಾಗಿ ನಡೆಯಿತು. ಯಾವುದೇ ಪೈಪೋಟಿ, ರೋಚಕತೆ ಇಲ್ಲದೆ ಫೈನಲ್‌ ಕೊನೆಗೊಂಡಿತು.

ICYMI!

That special run to glory 💫💜

Recap the on and 💻📱 | | pic.twitter.com/qUDfUFHpka

— IndianPremierLeague (@IPL)

ಬೃಹತ್‌ ಮೊತ್ತದ ಕನಸಿನೊಂದಿಗೆ ಬ್ಯಾಟಿಂಗ್‌ ಆಯ್ದುಕೊಂಡ ಸನ್‌ರೈಸರ್ಸ್‌, ಕೆಕೆಆರ್‌ನ ಬೆಂಕಿ ದಾಳಿ ಮುಂದೆ ತತ್ತರಿಸಿ 18.3 ಓವರಲ್ಲಿ 113ಕ್ಕೆ ಗಂಟುಮೂಟೆ ಕಟ್ಟಿತು. ಇದು ಕೆಕೆಆರ್‌ಗೆ ಯಾವುದಕ್ಕೂ ಸಾಲಲಿಲ್ಲ. ಕಡಿಮೆ ಮೊತ್ತವಾದರೂ ಸ್ಫೋಟಕ ಆಟಕ್ಕೆ ಒತ್ತುಕೊಟ್ಟ ಕೆಕೆಆರ್‌ 10.3 ಓವರಲ್ಲೇ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡಿತು.

2ನೇ ಓವರಲ್ಲೇ ನರೈನ್‌(06) ವಿಕೆಟ್‌ ಉರುಳಿದರೂ, 2ನೇ ವಿಕೆಟ್‌ಗೆ ಜೊತೆಯಾದ ಗುರ್ಜಾಜ್‌ ಹಾಗೂ ವೆಂಕಟೇಶ್‌ ಅಯ್ಯರ್‌ 45 ಎಸೆತಗಳಲ್ಲಿ 91 ರನ್‌ ಸೇರಿಸಿದರು. 39 ರನ್‌ ಗಳಿಸಿದ್ದ ಗುರ್ಬಾಜ್‌ಗೆ 9ನೇ ಓವರಲ್ಲಿ ಶಾಬಾಜ್‌ ಪೆವಿಲಿಯನ್ ಹಾದಿ ತೋರಿದರೂ, ವೆಂಕಟೇಶ್‌(26 ಎಸೆತಗಳಲ್ಲಿ ಔಟಾಗದೆ 52) ತಂಡವನ್ನು ಗೆಲುವಿನ ದಡ ಸೇರಿಸಿದರು.

ಗೌತಮ್‌ ಗಂಭೀರ್‌ಗೆ ಖಾಲಿ ಚೆಕ್‌ ನೀಡಿ ಕೆಕೆಆರ್‌ಗೆ ಸ್ವಾಗತಿಸಿದ್ದ ಶಾರುಖ್‌? ಆದ್ರೆ ಒಂದು ಕಂಡೀಷನ್ ಹಾಕಿದ್ದ ಕಿಂಗ್ ಖಾನ್

ಕೆಕೆಆರ್ ತಂಡವು ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗುತ್ತಿದ್ದಂತೆಯೇ ಮಾಲೀಕ ಶಾರುಖ್ ಖಾನ್ ತಮ್ಮ ತಂಡದ ಆಟಗಾರರ ಜತೆ ಮೈದಾನದಲ್ಲೇ ಸೆಲಿಬ್ರೇಟ್ ಮಾಡಿದರೆ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಓನರ್ ಕಾವ್ಯಾ ಮಾರನ್ ಕಣ್ಣೀರು ಹಾಕುತ್ತಲೇ ಕೆಕೆಆರ್ ತಂಡವನ್ನು ಅಭಿನಂದಿಸಿದರು.

ಹೀಗಿತ್ತು ನೋಡಿ ಆ ವಿಡಿಯೋ:

Kavya Maran was hiding her tears. 💔

- She still appreciated KKR. pic.twitter.com/KJ88qHmIg6

— Mufaddal Vohra (@mufaddal_vohra)

 

 

click me!