ಭಾರತದ ದಾಳಿಗೆ ಬಾಂಗ್ಲಾ ಖಲ್ಲಾಸ್; ಮೂರೇ ದಿನಕ್ಕೆ ಪಂದ್ಯ ಕ್ಲೋಸ್!

By Web Desk  |  First Published Nov 16, 2019, 3:39 PM IST

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಬಾಂಗ್ಲಾ ತಂಡವನ್ನು ಮೂರೇ ದಿನಕ್ಕೆ ಕಟ್ಟಿಹಾಕಿ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ.


ಇಂದೋರ್(ನ.16): ಭಾರತ ಹಾಗೂ  ಬಾಂಗ್ಲಾದೇಶ ನಡುವಿನ ಇಂದೋರ್ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಕ್ಕೆ ಮುಕ್ತಾಯಗೊಂಡಿದೆ. ಟೀಂ ಇಂಡಿಯಾ ಮಾರಾಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ 2ನೇ ಇನಿಂಗ್ಸ್‌ನಲ್ಲಿ ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 130 ರನ್ ಗೆಲುವು ಸಾಧಿಸಿದೆ. 2 ಪಂದ್ಯದ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್!.

Tap to resize

Latest Videos

ಮೂರನೇ ದಿನದಾಟದಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ದಿಟ್ಟ ಪ್ರದರ್ಶನ ನೀಡಲು ವಿಫಲವಾಯಿತು. 343 ರನ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ಶಾಕ್ ನೀಡಿದರು. ಇಮ್ರುಲ್ ಕೈಸ್ 6, ಶದ್ಮಾನ್ ಇಸ್ಲಾಂ 6, ನಾಯಕ ಮಮಿನಲ್ ಹಕ್ 7 ರನ್ ಸಿಡಿಸಿ ನಿರ್ಗಮಿಸಿದರು. ಮೊಹಮ್ಮದ್ ಮಿಥುನ್ 18 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಮಿಂಚಿದ ಬಳಿಕ ಕ್ರಿಕೆಟಿಗನ ಸಹೋದರಿಗೆ ಬಾಲಿವುಡ್‌ಲ್ಲಿ ಬಹು ಬೇಡಿಕೆ!

ಮೊಹಮ್ಮದುಲ್ಲಾ 15 ರನ್ ಸಿಡಿಸಿ ಔಟಾದರು.  ಮುಶ್ಫಿಕರ್ ರಹೀಮ್ ಹಾಗೂ ಲಿಟ್ಟನ್ ದಾಸ್ ಜೊತೆಯಾಟದಿಂದ ಬಾಂಗ್ಲಾ ಚೇತರಿಕೆ ಕಂಡಿತು. ದಾಸ್ 35 ರನ್ ಕಾಣಿಕೆ ನೀಡಿದರು. ಮೆಹೆದಿ ಹಸನ್ ಜೊತೆ ಸೇರಿದ ರಹೀಮ್ ಭಾರತದ ಸುಲಭ ಗೆಲುವನ್ನು ತಪ್ಪಿಸಿದರು. ರಹೀಮ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ಮೆಹದಿ ಹಸನ್ 38 ರನ್  ಸಿಡಿಸಿ ಔಟಾದರು. ತೈಜುಲ್ ಇಸ್ಲಾಂ 6 ರನ್‌ಗೆ ಸುಸ್ತಾದರು. ಏಕಾಂಗಿ ಹೋರಾಟ ನೀಡಿದ ಮುಶ್ಫಿಕರ್ ರಹೀಮ್ 64 ರನ್ ಸಿಡಿಸಿ ಔಟಾದರು. ಎಬಾದತ್ ಹುಸೈನ್ ವಿಕೆಟ್ ಪತನದೊಂದಿಗೆ ಬಾಂಗ್ಲಾದೇಶ 213 ರನ್‌ಗೆ ಆಲೌಟ್ ಆಯಿತು. ಭಾರತದ ಪರ 2ನೇ ಇನಿಂಗ್ಸ್‌ನಲ್ಲಿ ಮೊಹಮ್ಮದ್ ಶಮಿ 4, ಉಮೇಶ್ ಯಾದವ್ 2, ಆರ್ ಅಶ್ವಿನ್ 3,  ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಕಬಳಿಸಿ ಮಿಂಚಿದರು. 

ನವೆಂಬರ್ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!