ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ರಾಜಕೀಯ; ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮಾ ರಾಜೀನಾಮೆ!

By Web DeskFirst Published Nov 16, 2019, 1:00 PM IST
Highlights

ದೆಹಲಿ ಕ್ರಿಕೆಟ್ ಸಂಸ್ಥೆಯೊಳಗಿನ ಬಿಕ್ಕಟ್ಟು ಮತ್ತೆ ಬಹಿರಂಗವಾಗಿದೆ. ಕ್ರಿಕಟ್ ಆಡಳಿತ  ಸೂಸುತ್ರವಾಗಿ ನಡೆಯುತ್ತಿಲ್ಲ. ಒಳಜಗಳ ಹೆಚ್ಚಾಗುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮಾ ದಿಢೀರ್ ರಾಜೀನಾಮೆ ನೀಡಿದ್ದಾರೆ.
 

ನವದೆಹಲಿ(ನ.16): ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಎಲ್ಲವೂ ಶಾಂತವಾಗಿದೆ ಅನ್ನುವಾಗಲೇ ಮತ್ತೆ ವಿವಾದ ಹೊರಬಂದಿದೆ. ಅತೀವ ಒತ್ತಡದಲ್ಲಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮಾ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸುಮಾರು 17 ತಿಂಗಳ ರಜತ್ ಶರ್ಮಾ ಆಡಳಿತ ಅಂತ್ಯಗೊಂಡಿದೆ. 2018ರ ಜುಲೈ ತಿಂಗಳಲ್ಲಿ ರಜತ್ ಶರ್ಮಾ ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. 

ಇದನ್ನೂ ಓದಿ: ಎಂದೆಂದಿಗೂ ನೀ ಕನ್ನಡವಾಗಿರು; ಸವಾಲು ಸ್ವೀಕರಿಸಿ ಕುವೆಂಪು ಕವನ ಓದಿದ ಕುಂಬ್ಳೆ!

ಪತ್ರಕರ್ತ ರಜತ್ ಶರ್ಮಾ ರಾಜೀನಾಮೆಯಿಂದ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಸಂಸ್ಥೆಯೊಳಗೆ ರಾಜಕೀಯ ನಡೆಯುತ್ತಿದೆ. ಪಾರದರ್ಶಕವಾಗಿ, ಮೌಲ್ಯಯುತ ಆಡಳಿತ ನಡೆಸಲು ಅನುಮತಿ ಸಿಗುತ್ತಿಲ್ಲ.  ಮೌಲ್ಯಗಳನ್ನು ಹೊಂದಾಣಿಕೆ ಮಾಡಿಕೊಂಡು ಮುಂದುವರಿಯಲು ಸಾಧ್ಯವಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಜತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.

 

Today I have tendered my resignation from the post of President, DDCA and has sent it to the Apex Council. I thank all of you for your overwhelming support, respect and affection during my tenure. My best wishes to

— Rajat Sharma (@RajatSharmaLive)

ಇದನ್ನೂ ಓದಿ: IPL ಅವಕಾಶ ತಿರಸ್ಕರಿಸಿದ ಐವರು ಸ್ಟಾರ್ ಕ್ರಿಕೆಟರ್ಸ್!.

ರಜತ್ ಶರ್ಮಾ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಜನರಲ್ ಸೆಕ್ರೆಟರಿ ವಿನೋದ್ ತಿಹಾರ ಜೊತೆ ವೈಮನಸ್ಸು ತಾರಕಕ್ಕೇರಿತು. ಬಿಜೆಪಿ ಹಿರಿಯ ನಾಯಕ, ಇತ್ತೀಚೆಗೆ ನಿಧನರಾದ ಅರುಣ್ ಜೇಟ್ಲಿ ಸಹಾಕಾರದಿಂದ ರಜತ್ ಶರ್ಮಾ ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಜೇಟ್ಲಿ ಇರುವವರೆಗೂ ರಜತ್ ಶರ್ಮಾ ಹೆಚ್ಚಿನ ಯಾವುದೇ ಒತ್ತಡ ಹಾಗೂ ಅಪಾಯ ಎದುರಿಸಲಿಲ್ಲ. ಆದರೆ ಜೇಟ್ಲಿ ನಿಧನದ ನಂತರ  ರಜತ್ ಶರ್ಮಾ ಮೇಲೆ ಒತ್ತಡಗಳು ಹೆಚ್ಚಾಯಿತು. ಹೀಗಾಗಿ ರಾಜೀನಾಮೆ ನೀಡಿದ್ದಾರೆ.
 

click me!