ಟೀಂ ಇಂಡಿಯಾ ಗೆಲುವಿಗೆ 4 ಮೆಟ್ಟಿಲು ಮಾತ್ರ ಬಾಕಿ!

Published : Nov 16, 2019, 01:38 PM IST
ಟೀಂ ಇಂಡಿಯಾ ಗೆಲುವಿಗೆ 4 ಮೆಟ್ಟಿಲು ಮಾತ್ರ ಬಾಕಿ!

ಸಾರಾಂಶ

ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯ ಎರಡೂವರೆ ದಿನಕ್ಕೆ ಅಂತ್ಯವಾಗುತ್ತಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಟೀಂ ಇಂಡಿಯಾ ಗೆಲುವಿಗೆ ಇನ್ನು ಕೇವಲ 4 ಮೆಟ್ಟಿಲುಗಳು ಮಾತ್ರ ಬಾಕಿ.

ಇಂದೋರ್(ನ.16): ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಹಾಗೂ ಗೆಲುವಿನತ್ತ ದಾಪುಗಾಲಿಡುತ್ತಿದೆ. ಪಂದ್ಯದ  ಮೂರನೇ ದಿನ ವಿರಾಟ್ ಕೊಹ್ಲಿ ಸೈನ್ಯ ಸಂಭ್ರಮ ಆಚರಿಸಲು ಸಜ್ಜಾಗುತ್ತಿದೆ. 343 ರನ್ ಭಾರಿ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್‌ ಆರಂಭಿಸಿದ ಬಾಂಗ್ಲಾದೇಶ 6 ವಿಕೆಟ್ ಕಳೆದುಕೊಂಡು  ಸೋಲಿನತ್ತ ಜಾರಿದೆ.

ಇದನ್ನೂ ಓದಿ: INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್!

ಮೊದಲ ಇನಿಂಗ್ಸ್‌ನಲ್ಲಿ ಭಾರತ 493 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ 3ನೇ ದಿನ 2ನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ, ಟೀಂ ಇಂಡಿಯಾ ದಾಳಿಗೆ ತತ್ತರಿಸಿದೆ. ಮೊಹಮ್ಮದ್ ಶಮಿ ಮತ್ತೆ ವೇಗಕ್ಕೆ ಬಾಂಗ್ಲಾ ಪತರುಗುಟ್ಟಿದ್ದು, ವಿಕೆಟ್ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.

ಇದನ್ನೂ ಓದಿ: ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!

ಇಮ್ರುಲ್ ಕೈಸ್ 6, ಶದ್ಮನ್ ಇಸ್ಲಾಂ 6, ನಾಯಕ ಮೊಮಿನಲ್ ಹಕ್ 7 ಹಾಗೂ ಮೊಹಮ್ಮದ್ ಮಿಥುನ್ 18 ರನ್ ಸಿಡಿಸಿ ಔಟಾದರು. ಮುಶ್ಫಿಕರ್ ರಹೀಮ್ ಹಾಗೂ ಲಿಟ್ಟನ್ ದಾಸ್ ಹೋರಾಟ ನೀಡಿದರು. ಆದರೆ ಮೊಹಮ್ಮದುಲ್ಲಾ 15 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ದಿಟ್ಟ ಪ್ರದರ್ಶನ ನೀಡಿದ ಲಿಟ್ಟನ್ ದಾಸ್ 35 ರನ್ ಸಿಡಿಸಿ ಔಟಾದರು. ಮುಶ್ಫಿಕರ್ ಏಕಾಂಗಿ ಹೋರಾಟ ಮುಂದುವರಿಸಿದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸ ಲುಕ್‌ನಲ್ಲಿ ವಿರಾಟ್ ಕೊಹ್ಲಿ, ಪಾಸ್ಟೆಲ್ ಹೇರ್‌ಸ್ಟೈಲ್‌ನಲ್ಲಿ ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಂಡ ಕ್ರಿಕೆಟರ್
ಮುಂಬೈನ ಅತ್ಯಂತ ದುಬಾರಿ ಏರಿಯಾದಲ್ಲಿ ಶ್ರೇಯಸ್ ಅಯ್ಯರ್ ಹೊಸ ಮನೆ: ತಿಂಗಳ ಬಾಡಿಗೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ