
ದುಬೈ[ನ.01]: 2020ರ ಐಸಿಸಿ ಟಿ20 ವಿಶ್ವಕಪ್ಗೆ ಒಮಾನ್ ಪ್ರವೇಶ ಪಡೆದಿದೆ. ಇದರೊಂದಿಗೆ 2020ರ ಅ.18ರಿಂದ ನ.15ರ ವರೆಗೂ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಲಭ್ಯವಿದ್ದ ಎಲ್ಲಾ 16 ಸ್ಥಾನಗಳು ಭರ್ತಿಯಾಗಿವೆ.
ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದ ನಮೀಬಿಯಾ, ಸ್ಕಾಟ್ಲೆಂಡ್
ಇಲ್ಲಿ ನಡೆಯುತ್ತಿರುವ ಅರ್ಹತಾ ಟೂರ್ನಿಯ ಪ್ಲೇ-ಆಫ್ ಪಂದ್ಯದಲ್ಲಿ ಒಮಾನ್, ಹಾಂಕಾಂಗ್ ವಿರುದ್ಧ 12 ರನ್‌ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆಗಿಟ್ಟಿಸಿದ 16ನೇ ತಂಡ ಎನಿಸಿಕೊಂಡಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 8 ಸ್ಥಾನಗಳಲ್ಲಿದ್ದ ತಂಡಗಳು ನೇರವಾಗಿ ಸೂಪರ್ 12 ಹಂತಕ್ಕೆ ಪ್ರವೇಶಿಸಿದ್ದರೆ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಗುಂಪು ಹಂತಕ್ಕೇರಿದ್ದವು.
T20 ವಿಶ್ವಕಪ್ ಟ್ರೋಫಿ ಅನಾವರಣ ಮಾಡಲಿದ್ದಾರೆ ಬಾಲಿವುಡ್ ನಟಿ!
ಸದ್ಯ ನಡೆಯುತ್ತಿರುವ ಅರ್ಹತಾ ಟೂರ್ನಿಯಲ್ಲಿ 6 ಸ್ಥಾನಗಳು ಲಭ್ಯವಿದ್ದವು. ಒಮಾನ್ ಜತೆ ಸ್ಕಾಟ್ಲೆಂಡ್, ನಮೀಬಿಯಾ, ನೆದರ್‌ಲೆಂಡ್ಸ್, ಪಪುವಾ ನ್ಯೂ ಗಿನಿ ಹಾಗೂ ಐರ್ಲೆಂಡ್ ತಂಡಗಳು ವಿಶ್ವಕಪ್ಗೆ ಪ್ರವೇಶ ಪಡೆದವು. ಇನ್ನು 5 ಹಾಗೂ 6ನೇ ಸ್ಥಾನಕ್ಕೆ ಸ್ಕಾಟ್’ಲ್ಯಾಂಡ್ ಹಾಗೂ ಓಮನ್ ತಂಡಗಳು ಕಾದಾಡಲಿವೆ.
ದೆಹಲಿಯಲ್ಲೇ ನಡೆಯುತ್ತೆ ಮೊದಲ ಟಿ20!
ಇದೇ ಶುಕ್ರವಾರ ನಡೆಯಲಿರುವ ಮೊದಲ ಸೆಮಿಫೈನಲ್’ನಲ್ಲಿ ಐರ್ಲೆಂಡ್ ಹಾಗೂ ನೆದರ್ಲೆಂಡ್ ತಂಡಗಳು ಕಾದಾಡಿದರೆ, ಇದೇ ದಿನ ನಡೆಯಲಿರುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಪುವಾ ನ್ಯೂ ಗಿನಿ ಹಾಗೂ ನಮೀಬಿಯಾ ತಂಡಗಳು ಫೈನಲ್’ಗಾಗಿ ಕಾದಾಡಲಿವೆ. ಇನ್ನು ಅರ್ಹತಾ ಸುತ್ತಿನ ಫೈನಲ್ ಪಂದ್ಯವು ಶನಿವಾರ[ಅ.02] ನಡೆಯಲಿದ್ದು, ದುಬೈ ಅಂತಾರಾಷ್ಟ್ರೀಯ ಮೈದಾನ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ಆತಿಥೇಯ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಪ್ರಶಸ್ತಿ ಗೆಲ್ಲುವ ಹಾಟ್ ಫೇವರೇಟ್ ತಂಡಗಳೆನಿಸಿವೆ. ಇದರ ಜತೆಗೆ ವಿಶ್ವ ನಂ.1 ಶ್ರೇಯಾಂಕಿತ ತಂಡ ಪಾಕಿಸ್ತಾನ ಹಾಗೂ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಗಳು ಅಚ್ಚರಿಯ ಫಲಿತಾಂಶ ನೀಡಲು ಎದುರು ನೋಡುತ್ತಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.