ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಮೇಲೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮುಗಿಬಿದ್ದಿದ್ದಾರೆ. ತಮ್ಮ ತೇಜೋವಧೆ ಮಾಡುತ್ತಿರುವುದರ ಬಗ್ಗೆ ಮಾಜಿ ವಿಕೆಟ್ ಕೀಪರ್ ಮೇಲೆ ಹರಿಹಾಯ್ದಿದ್ದಾರೆ. ಅಷ್ಟಕ್ಕೂ ಏನಿದು ವಿವಾದ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ನವದೆಹಲಿ[ನ.01]: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಫಾರೂಖ್ ಎಂಜಿನಿಯರ್ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ಬಿಸಿಸಿಐ ಆಯ್ಕೆಗಾರರು ಏಕದಿನ ವಿಶ್ವಕಪ್ ವೇಳೆ ಕ್ರೀಡಾಂಗಣದಲ್ಲಿ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಚಹಾ ತಂದುಕೊಡುತ್ತಿದ್ದನ್ನು ನೋಡಿ ಬೇಸರವಾಯಿತು’ ಎಂದಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಉಗ್ರರ ಹಿಟ್ ಲಿಸ್ಟ್'ನಲ್ಲಿ ಕೊಹ್ಲಿಯೇ ಟಾರ್ಗೆಟ್..!
undefined
ಇದಕ್ಕೆ ಟ್ವೀಟರ್‌ನಲ್ಲಿ ಸಿಟ್ಟಿನಿಂದ ಪ್ರತಿಕ್ರಿಯಿಸಿರುವ ಅನುಷ್ಕಾ ‘ಇಷ್ಟು ದಿನ ಅನವಶ್ಯಕವಾಗಿ ನನ್ನ ಹೆಸರನ್ನು ಬಳಸಿಕೊಂಡು, ಭಾರತ ಕ್ರಿಕೆಟ್ ತಂಡದ ವಿವಾದಗಳಿಗೆ ಟೀಕೆ ಮಾಡುತ್ತಿದ್ದನ್ನು ಸಹಿಸಿಕೊಳ್ಳುತ್ತಿದ್ದೆ. ಆದರೆ ಇನ್ನುಂದೆ ಹಾಗಾಗಲು ನಾನು ಬಿಡುವುದಿಲ್ಲ. ಸುಳ್ಳಿನ ಮೇಲೆ ಸುಳ್ಳು ಹೇಳಲು ಬಿಟ್ಟರೆ ಒಂದು ದಿನ ಸುಳ್ಳನ್ನೇ ನಿಜವೆಂದು ನಂಬಿಸಲಾಗುತ್ತದೆ. ವಿಶ್ವಕಪ್ ವೇಳೆ ನಾನು, ಆಯ್ಕೆಗಾರರು ಕುಳಿತಿದ್ದ ಕಡೆ ಕುಳಿತಿರಲಿಲ್ಲ. ನನ್ನ ಪತಿ ಕೊಹ್ಲಿ ಜತೆ ಪಂದ್ಯಗಳಿಗೆ ಹೋಗುವಾಗ ವಿಮಾನ, ಪಂದ್ಯದ ಟಿಕೆಟ್‌ಗಳನ್ನು ನಾನೇ ಖರೀದಿಸುತ್ತೇನೆ’ ಎಂದು ಬರೆದಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರೊಬ್ಬರು ಸಹ ಪ್ರತಿಕ್ರಿಯಿಸಿದ್ದು, ಎಂಜಿನಿಯರ್ ಹೇಳಿಕೆ ಕಟ್ಟು ಕಥೆ, ದುರುದ್ದೇಶದಿಂದ ಅವರು ಈ ರೀತಿ ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.
ಇಟಲಿಯಲ್ಲೇ ಅನುಷ್ಕಾ- ವಿರಾಟ್ ಮದುವೆಯಾಗಿದ್ದೇಕೆ : ಇಲ್ಲಿದೆ ಇಂಟರೆಸ್ಟಿಂಗ್ ಕಾರಣ
ಈ ಹಿಂದೆ ಅನುಷ್ಕಾ ಶರ್ಮಾ ಬ್ರಿಟೀಷ್ ಹೈಕಮೀಷನರ್ ಕಚೇರಿಯಲ್ಲಿ ಭಾರತ ತಂಡದೊಟ್ಟಿಗೆ ಕಾಣಿಸಿಕೊಂಡಾಗ ವ್ಯಾಪಕ ಟೀಕೆಗೆ ಅನುಷ್ಕಾ ಗುರಿಯಾಗಿದ್ದರು. ಅನುಷ್ಕಾ ಕ್ರಿಕೆಟ್ ನೋಡಲು ಬಂದಾಗ ತಂಡ ಸೊತರೂ, ಕೊಹ್ಲಿಯ ಪತ್ನಿಯೇ ಟಾರ್ಗೆಟ್ ಆಗುತ್ತಿದ್ದರು. ಇದರಿಂದ ಬೇಸತ್ತು, ಕೊನೆಗೂ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.