ಮತ್ತೆ ಭಾರತೀಯರ ಕೆಣಕಿದ ಅಫ್ರಿದಿ; ಕಾಶ್ಮೀರ ತಂಡಕ್ಕಾಗಿ ಪಾಕ್ ಕ್ರಿಕೆಟ್ ಮಂಡಳಿಗೆ ಮನವಿ!

Suvarna News   | Asianet News
Published : May 19, 2020, 05:39 PM IST
ಮತ್ತೆ ಭಾರತೀಯರ ಕೆಣಕಿದ ಅಫ್ರಿದಿ; ಕಾಶ್ಮೀರ ತಂಡಕ್ಕಾಗಿ ಪಾಕ್ ಕ್ರಿಕೆಟ್ ಮಂಡಳಿಗೆ ಮನವಿ!

ಸಾರಾಂಶ

 ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಆಫ್ರಿದಿ ಪಾಕಿಸ್ತಾನ ಪ್ರಧಾನಿ ಆಗುವ ಕನಸು ಕಾಣುತ್ತಿದ್ದಾರೆ ಅನ್ನೋ ಅನುಮಾನ ಖಚಿತವಾಗುತ್ತಿದೆ.  ಸದಾ ಕಾಶ್ಮೀರ ವಿಚಾರ ಕೆಣಕುತ್ತಿರು ಅಫ್ರಿದಿ, ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧವೂ ಗುಡುಗಿದ್ದರು. ಇದೀಗ ಕಾಶ್ಮೀರ ತಂಡ ಸೇರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮನವಿ ಮಾಡೋ ಮೂಲಕ ಮತ್ತೆ ಭಾರತೀಯರ ಕೆಣಕಿದ್ದಾರೆ.

ಲಾಹೋರ್(ಮೇ.19): ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಇದೀಗ ಭಾರತೀಯರ ಕೆಣಕುತ್ತಲೇ ಇದ್ದಾರೆ. ಈ ಮೂಲಕ ಪಾಕಿಸ್ತಾನ ಜನತೆಯ ಅನುಕಂಪ ಗಿಟ್ಟಿಸು ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಳ್ಳಿಗೆ ಬೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದ್ದ ಅಫ್ರಿದಿ, ಕಾಶ್ಮೀರದ ನಮ್ಮ ಸಹೋದರ ಸಹೋದರಿಯರಿಗೆ ಮೋದಿ ಅನ್ಯಾಯ ಮಾಡುತ್ತಿದ್ದಾರೆ ಎಂದಿದ್ದರು. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ತಕ್ಕ ತಿರುಗೇಟು ನೀಡಿದ್ದರು. ಇದೀಗ ಕಾಶ್ಮೀರ ತಂಡವನ್ನು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಸೇರಿಸಲು ಮನವಿ ಮಾಡಿದ್ದಾರೆ. 

ಕಾಶ್ಮೀರ ಯಾವತ್ತಿದ್ದರೂ ಭಾರತದ್ದೇ: ಅಫ್ರಿದಿಗೆ ಗಬ್ಬರ್​ ಸಿಂಗ್ ವಾರ್ನಿಂಗ್!

ಇದೀಗ ಈ ಬೇಟಿಯಲ್ಲಿ ಮಾತನಾಡಿದ ಮತ್ತೊಂದು ವಿಡಿಯೋ ಬಹಿರಂಗಗೊಂಡಿದೆ. ಈ ವಿಡಿಯೋದಲ್ಲಿ ಶಾಹಿದ್ ಆಫ್ರಿದಿ ಮತ್ತೆ ಕಾಶ್ಮೀರ ವಿಚಾರ ಕೆದಕಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(POK) ಹಲವು ಕ್ರಿಕೆಟ್ ಕ್ಲಬ್‌ಗಳಿವೆ ಅನ್ನೋದು ಅರಿತು ಸಂತಸವಾಯಿತು. POKಯಲ್ಲಿ ಕ್ರಿಕೆಟ್ ಕ್ರೀಡಾಂಗಣ ಇದ್ದರೆ ಇಲ್ಲಿ ಅಕಾಡಮಿ ಆರಂಭವಾಗುತ್ತದೆ. ಹೀಗಿದ್ದರೆ ನಾನು ಕರಾಚಿಯಿಂದ ಇಲ್ಲಿಗೆ ಆಗಮಿಸಿ ಇಲ್ಲಿನ ಯುವಕರಿಗೆ ಕ್ರಿಕೆಟ್ ತರಬೇತಿ ನೀಡುತ್ತಿದ್ದೆ. ನನಗೆ ಇಲ್ಲಿಗೆ ಬೇಟಿ ನೀಡಿ ನಿಮ್ಮ ಪಂದ್ಯ ನೋಡಲು ಉತ್ಸುಕನಾಗಿದ್ದೇನೆ. ಉತ್ತಮ ಕ್ರಿಕೆಟಿಗರನ್ನು ಆಯ್ಕೆ ಮಾಡಿ ನಾನು ಕರಾಚಿಗೆ ಕರೆದೊಯ್ದು ತರಬೇತಿ ನೀಡುತ್ತೇನೆ. ನನ್ನ ಜೊತೆ ತಂಗಲು ಅವಕಾಶ ಮಾಡಿಕೊಡುತ್ತೇನೆ. ಇಷ್ಟೇ ಅಲ್ಲ ಅಭ್ಯಾಸ ಜೊತೆ ಅವರ ಶಿಕ್ಷಣದ ಜವಾಬ್ದಾರಿಯನ್ನೂ ನೋಡಿಕೊಳ್ಳುತ್ತೇನೆ ಎಂದು ಅಫ್ರಿದಿ ಹೇಳಿದ್ದಾರೆ.

ಮೊದಲು ಫೇಲ್ ಆದ ನಿನ್ನ ದೇಶ ನೋಡ್ಕೋ: ಕಾಶ್ಮೀರ ಎಂದ ಅಫ್ರಿದಿಗೆ ಬಡಿದ ರೈನಾ!.

ಬಳಿಕ ನಾನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಮನವಿ ಮಾಡುತ್ತೇನೆ. ನನ್ನ ಅಂತಿಮ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ನಾನು ಕಾಶ್ಮೀರ ತಂಡವನ್ನು ಮುನ್ನಡೆಸಲು ಇಚ್ಚಿಸುತ್ತೇನೆ. ಇದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಾಶ್ಮೀರ ಫ್ರಾಂಚೈಸಿಯನ್ನು ಸೇರಿಸಿ ಎಂದು ಮನವಿ ಮಾಡುತ್ತೇನೆ ಎಂದು ಅಫ್ರಿದಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನತೆಗೆ ಭರವಸೆ ನೀಡಿದ್ದಾರೆ.

ಮೋದಿ ವಿರುದ್ಧ ಅಫ್ರಿದಿ ಹೇಳಿಕೆಗೆ ಯುವರಾಜ್ ಗರಂ; ಇನ್ನೆಂದು ಸಹಾಯ ಮಾಡುವುದಿಲ್ಲ!.

ಸದಾ ಕಾಶ್ಮೀರ ವಿಚಾರ ಕೆಣಕುತ್ತಿರುವ ಅಫ್ರಿದಿ ಪ್ರತಿ ಹೇಳಿಕೆಯಲ್ಲೂ ಭಾರತೀಯರ ಕೆಣಕುತ್ತಿದ್ದಾರೆ. ಅತ್ತ ಪಾಕಿಸ್ತಾನ ಸೇನೆ ಗಡಿ ಪ್ರದೇಶದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಜೊತೆಗೆ ಒಳನುಸುಳಿರುವ ಉಗ್ರರು ಭಾರತೀಯ ಸೇನೆ ಮೇಲೆ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ