SAvIND T20 ಭಾರತ ವಿರುದ್ದ ಟಾಸ್ ಗೆದ್ದ ಸೌತ್ ಆಫ್ರಿಕಾ, 2ನೇ ಪಂದ್ಯಕ್ಕೂ ಮಳೆ ಭೀತಿ!

By Suvarna News  |  First Published Dec 12, 2023, 8:05 PM IST

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದ  ಸೌತ್ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.ಆದರೆ ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ.


ಗೆಬೆರ್ಹಾ(ಡಿ.12): ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡ ಇದೀಗ 2ನೇ ಟಿ20 ಪಂದ್ಯ ಆಡುತ್ತಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ಟಿ20 ಪಂದ್ಯದ ಬಳಿಕ ಇದೀಗ 2ನೇ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಪಂದ್ಯ ಆರಂಭಕ್ಕೂ ಮುನ್ನವೇ ತುಂತುರ ಮಳೆ ವಕ್ಕರಿಸಿತ್ತು. ಆದರೆ ಟಾಸ್ ಸಮಯದ ವೇಳೆ ಮಳೆ ನಿಂತ ಕಾರಣ ಪಂದ್ಯದ ಸಮಯಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಆದರೆ ಪಂದ್ಯದ ನಡುವೆ ಮತ್ತೆ ಮಳೆ ವಕ್ಕರಿಸುವ ಸಾಧ್ಯತೆ ಇದೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಜೀತೇಶ್ ಶರ್ಮಾ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಮುಕೇಶ್ ಕುಮಾರ್   

Latest Videos

undefined

2023ರಲ್ಲಿ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ್ದೇ ಈಕೆಯನ್ನು! ಎಲ್ಲಾ ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಹಿಂದಿಕ್ಕಿದ ಚೆಲುವೆ ಯಾರು?

ಟಿ20 ವಿಶ್ವಕಪ್ ಟೂರ್ನಿಗೆ 5 ರಿಂದ 6 ತಿಂಗಳು ಬಾಕಿ ಇದೆ. ಹೀಗಾಗಿ 2ನೇ ಟಿ20 ಪಂದ್ಯದಲ್ಲಿ ನಾವು ಮೊದಲು ಬ್ಯಾಟಿಂಗ್ ಮಾಡುತ್ತಿರುವುದು ಎಲ್ಲರಿಗೂ ಅವಕಾಶ ಕಲ್ಪಿಸಿದೆ. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್ ಟೂರ್ನಿ ತಯಾರಿಗೆ ಸಜ್ಜಾಗಲಿದ್ದೇವೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಬಳಿಕ ಹೇಳಿದ್ದಾರೆ.

ಸೌತ್ ಆಫ್ರಿಕಾ ಪ್ಲೇಯಿಂಗ್ 11
ಮ್ಯಾಥ್ಯೂ ಬ್ರೀಟ್ಜ್‌ಕೆ, ರೀಜಾ ಹೆಂಡ್ರಿಕ್ಸ್, ಆ್ಯಡಿನ್ ಮರ್ಕ್ರಮ್(ನಾಯಕ), ಹೆನ್ರಿಚ್ ಕಾಲ್ಸಿನ್, ಡೇವಿಡ್ ಮಿಲ್ಲರ್, ತ್ರಿಸ್ಟನ್ ಸ್ಟಬ್ಸ್, ಮಾರ್ಕಾ ಜಾನ್ಸೆನ್, ಆ್ಯಂಡಿಲೆ ಫೆಲುಕ್‌ವಾಯೊ, ಗೆರಾಲ್ಡ್ ಕೊಯೆಟ್ಜೀ, ಲಿಜಾಡ್ ವಿಲಿಯಮ್ಸ್, ತಬ್ರೈಜ್ ಶಮ್ಸಿ 

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು 4-1 ಅಂತರದಲ್ಲಿ ಕೈವಶ ಮಾಡಿದ ಟೀಂ ಇಂಡಿಯಾ ಇದೀಗ ಸೌತ್ ಆಫ್ರಿಕಾ ವಿರುದ್ಧ ಶುಭಾರಂಭದ ವಿಶ್ವಾಸದಲ್ಲಿದೆ. ಸೌತ್ ಆಫ್ರಿಕಾ ವಿರುದ್ದ ಡಿಸೆಂಬರ್ 10 ರಂದು ಡರ್ಬನ್‌ನಲ್ಲಿ ಆಯೋಜನೆಗೊಂಡಿದ್ದ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು.  ಹೀಗಾಗಿ ಮೊದಲ ಟಿ20 ಪಂದ್ಯ ರದ್ದಾಗಿತ್ತು.  

ಮತ್ತೊಮ್ಮೆ ಪ್ರೂವ್ ಆಯ್ತು ಕೊಹ್ಲಿ ಕ್ರೇಝ್..! ಲಾ ಎಂಟ್ರೆನ್ಸ್ ಎಕ್ಸಾಂನಲ್ಲೂ ವಿರಾಟ್ ಕುರಿತು ಪ್ರಶ್ನೆ..!

ಟಿ20 ಮಾದರಿಯಲ್ಲಿ ಭಾರತ ಹಾಗೂ ಸೌತ್ ಆಫ್ರಿಕಾ ಒಟ್ಟು 24 ಬಾರಿ ಮುಖಾಮುಖಿಯಾಗಿದೆ. ಈ ಪೈಕಿ 13 ಪಂದ್ಯಗಳನ್ನು ಭಾರತ ಗೆದ್ದುಕೊಂಡಿದ್ದರೆ, ಸೌತ್ ಆಫ್ರಿಕಾ 10 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇನ್ನು ಒಂದು ಪಂದ್ಯ ಫಲಿತಾಂಶ ಕಾಣದ ರದ್ದಾಗಿದೆ.

ಕ್ರೀಡಾಂಗಣದ ಸುತ್ತಮುತ್ತ ಮಂಗಳವಾರ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ವೇಳೆ ಮಳೆ ಸುರಿಯುವ ಮುನ್ಸೂಚನೆಯಿದೆ. ಟಾಸ್‌ಗೂ ಮೊದಲು ತುಂತುರ ಮಳೆ ವಕ್ಕರಿಸಿ ಆತಂಕ ಹೆಚ್ಚಿಸಿತ್ತು. ಇದೀಗ ಮಳೆ ನಿಂತಿದೆ. ಆದರೆ ಮಳೆ ಭೀತಿ ಮಾತ ನಿಂತಿಲ್ಲ. 

click me!