2024ರ IPLನಲ್ಲಿ ಪಂತ್ ಕಮ್‌ಬ್ಯಾಕ್..? ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಡೆಲ್ಲಿ ಡ್ಯಾಶರ್ ಕಣಕ್ಕೆ..?

By Suvarna News  |  First Published Dec 12, 2023, 5:41 PM IST

ಪಂತ್ ಇಂಜುರಿಯಿಂದ ರಿಕವರಿಯಾಗಿದ್ರೂ, ಇನ್ನು ಫುಲ್ ಫಿಟ್ ಆಗಿಲ್ಲ. ಹೀಗಾಗಿ ಪಂತ್ರನ್ನ ಕೇವಲ ಬ್ಯಾಟರ್ ಆಗಿ ಬಳಸಿಕೊಳ್ಳಲು ಡೆಲ್ಲಿ ಫ್ರಾಂಚೈಸಿ ಪ್ಲಾನ್ ಮಾಡಿದೆ. ಈ ಕುರಿತು ಈಗಾಗ್ಲೇ ತಂಡದ ಕೋಚ್ ರಿಕಿ ಪಾಂಟಿಂಗ್ ಮತ್ತು ಡೈರೆಕ್ಟರ್ ಸೌರವ್ ಗಂಗೂಲಿಯೊಂದಿಗೆ ಮಾತುಕತೆ ನಡೆಸಿದೆ. ಆದ್ರೆ, ಈ ಬಗ್ಗೆ ಅಫಿಷಿಯಲ್ ಆಗಿ ಅನೌನ್ಸ್ ಮಾಡಿಲ್ಲ. 


ಬೆಂಗಳೂರು(ಡಿ.12): ಈಗ ನಾವೇಳೋ ಸುದ್ದಿ ಕೇಳಿ ನೀವು ಫುಲ್ ಖುಷ್ ಆಗೋದು ಪಕ್ಕಾ.! ಇಂಜುರಿಯಿಂದಾಗಿ ಟೀಂ ಇಂಡಿಯಾದ ಹೊರಗುಳಿದಿರೋ ಈ ಆಟಗಾರನ ಬಗ್ಗೆ ಹೊಸ ಅಪ್ಟೇಡ್ ಸಿಕ್ಕಿದೆ. ಅಲ್ಲದೇ, ತಂಡಕ್ಕೆ ಅತನ ರೀ ಎಂಟ್ರಿಗೂ ಮುಹೂರ್ತ ಫಿಕ್ಸ್ ಆಗಿದೆ. ಯಾರು ಆ ಆಟಗಾರ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಯೆಸ್, ರಿಷಬ್ ಪಂತ್ ಕಮ್ಬ್ಯಾಕ್ಗೆ ಮುಹೂರ್ತ ಫಿಕ್ಸ್ ಆಗಿದೆ. 2024ರ IPLನಲ್ಲಿ ಡೆಲ್ಲಿ ಡ್ಯಾಶರ್ ಕಮ್ಬ್ಯಾಕ್ ಮಾಡಲಿದ್ದಾರೆ. ಆದ್ರೆ, ಕಂಪ್ಲೀಟ್ ಪ್ಲೇಯರ್ ಆಗಿ ಅಲ್ಲ. ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಪಂತ್ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ಕೇಳಿ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ..! 

Latest Videos

undefined

ಪಂತ್ ಇಂಜುರಿಯಿಂದ ರಿಕವರಿಯಾಗಿದ್ರೂ, ಇನ್ನು ಫುಲ್ ಫಿಟ್ ಆಗಿಲ್ಲ. ಹೀಗಾಗಿ ಪಂತ್ರನ್ನ ಕೇವಲ ಬ್ಯಾಟರ್ ಆಗಿ ಬಳಸಿಕೊಳ್ಳಲು ಡೆಲ್ಲಿ ಫ್ರಾಂಚೈಸಿ ಪ್ಲಾನ್ ಮಾಡಿದೆ. ಈ ಕುರಿತು ಈಗಾಗ್ಲೇ ತಂಡದ ಕೋಚ್ ರಿಕಿ ಪಾಂಟಿಂಗ್ ಮತ್ತು ಡೈರೆಕ್ಟರ್ ಸೌರವ್ ಗಂಗೂಲಿಯೊಂದಿಗೆ ಮಾತುಕತೆ ನಡೆಸಿದೆ. ಆದ್ರೆ, ಈ ಬಗ್ಗೆ ಅಫಿಷಿಯಲ್ ಆಗಿ ಅನೌನ್ಸ್ ಮಾಡಿಲ್ಲ. 

Sports Flashback 2023: ರೊನಾಲ್ಡೋನಿಂದ ಜೋಕೋವರೆಗೆ ಜನವರಿಯಲ್ಲಿ ಸದ್ದು ಮಾಡಿದ ಸ್ಪೋರ್ಟ್ಸ್ ಸುದ್ದಿಗಳಿವು..!

ಒಂದು ವೇಳೆ ಪಂತ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿದಲ್ಲಿ, ಡಿಸಿ ಬ್ಯಾಟಿಂಗ್ ಬಲ ಹೆಚ್ಚಲಿದೆ. ಯಾಕಂದ್ರೆ, ಡೆಲ್ಲಿ ಮಿಡಲ್ ಆರ್ಡರ್ ತುಂಬಾನೇ ವೀಕ್ ಆಗಿದೆ. ಕಳೆದ ಸೀಸನ್ನಲ್ಲಿ ಒಂದೇ ಒಂದು ಪಂದ್ಯದಲ್ಲೂ ಮಿಡಲ್ ಆರ್ಡರ್ ಬ್ಯಾಟರ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿರಲಿಲ್ಲ. ಆದ್ರೆ, ರಿಷಬ್ ಆ ಕೊರತೆಯನ್ನ ನೀಗಿಸೋ ಸಾಮರ್ಥ್ಯ ಹೊಂದಿದ್ದಾರೆ. 

2022ರ ಡಿಸೆಂಬರ್ನಲ್ಲಿ ಪಂತ್ ರಸ್ತೆ ಅಪಘಾತದಲ್ಲಿ ತೀವ್ರ ಗಾಯ ಗೊಂಡಿದ್ರು. ಆದ್ರೆ, ಪವಾಡದ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ರು. ಡೆಡ್ಲಿ ಆ್ಯಕ್ಸಿಡೆಂಟ್ ನಂತರ  ಪಂತ್ ಕರಿಯರ್ ಮುಗಿದೇ  ಹೋಯ್ತು ಅಂತ ಎಲ್ಲಾ  ಅಂದುಕೊಂಡಿದ್ರು.  ಆದ್ರೆ, ಈ ಎಲ್ಲಾ ಮಾತುಗಳನ್ನ ಪಂತ್ ಸುಳ್ಳಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದು, ಸದ್ಯ ಚೇತರಿಸಿಕೊಳ್ತಿದ್ದಾರೆ. ಅಲ್ಲದೇ, ನೆಟ್ಸ್ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸುತ್ತಿದ್ದಾರೆ.  

Sports Flashback 2023: ನೂರನೇ ಟೆಸ್ಟ್‌ ಅಡಿದ ಪೂಜಾರ, ದಾಂಪತ್ಯ ಕಾಲಿಟ್ಟ ಪಾಕ್ ಆಟಗಾರ: ಫೆಬ್ರವರಿ ಸ್ಪೋರ್ಟ್ಸ್‌ ಅಪ್‌ಡೇಟ್

ಹಂತ ಹಂತವಾಗಿ ಚೇತರಿಸಿಕೊಳ್ತಿರೋ ಪಂತ್ ಈಗ, ಲೋಅರ್ ಬಾಡಿ ಸ್ಟ್ರೆಂಥ್ ಮೇಲೆ ವರ್ಕೌಟ್ ಮಾಡ್ತಿದ್ದಾರೆ. ಮುಂದಿನ ವರ್ಷ ನಡೆಯುವ T20 ವಿಶ್ವಕಪ್ ವೇಳೆಗೆ ಪಂತ್ರನ್ನ ರೆಡಿ ಮಾಡಬೇಕು ಅನ್ನೋದು BCCI ಪ್ಲಾನ್ ಆಗಿದೆ. ಅದಕ್ಕೆ ತಕ್ಕಂತೆ  ಪಂತ್ ರೆಡಿಯಾಗ್ತಿದ್ದಾರೆ. 

ಟೀಂ ಇಂಡಿಯಾಗೆ ಕಾಡ್ತಿದೆ ಪಂತ್ ಅಲಭ್ಯತೆ

ಯೆಸ್, ಟೀಂ ಇಂಡಿಯಾಗೆ ಪಂತ್ ಅಲಭ್ಯತೆ ಕಾಡ್ತಿದೆ. WTC ಫೈನಲ್, ಸೇರಿದಂತೆ ಏಕದಿನ ವಿಶ್ವಕಪ್ನಲ್ಲೂ ಇದು ಸಾಬೀತಾಗಿದೆ. ವಲ್ಡ್ಕಪ್ ಫೈನಲ್ನಲ್ಲಿ ಪಂದ್ಯದಲ್ಲಿ ಆಸಿಸ್ ವಿರುದ್ಧ ಕೌಂಟರ್ ಅಟ್ಯಾಕ್ ಮಾಡಬಲ್ಲ ಬ್ಯಾಟ್ಸ್ಮನ್ ಕೊರತೆ ಟೀಮ್ ಇಂಡಿಯಾಗೆ ಕಾಡಿತ್ತು. ಅದೇನೆ ಇರಲಿ, ಪಂತ್ ಆದಷ್ಟು ಬೇಗ ಗುಣಮುಖರಾಗಿ, ತಂಡಕ್ಕೆ ಕಮ್ಬ್ಯಾಕ್ ಮಾಡಲಿ ಅನ್ನೋದೆ ಎಲ್ಲರ ಆಶಯವಾಗಿದೆ 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!