
ಗೆಬೆರ್ಹಾ(ಡಿ.12): ಧಾರಾಕಾರ ಮಳೆಯಿಂದಾಗಿ ಟಾಸ್ ಕೂಡಾ ಕಾಣದೆ ಮೊದಲ ಟಿ20 ಪಂದ್ಯ ರದ್ದಾದ ಬಳಿಕ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸದ್ಯ 2ನೇ ಪಂದ್ಯಕ್ಕೆ ಸಜ್ಜಾಗಿವೆ. ಮಂಗಳವಾರ ಗೆಬೆರ್ಹಾ ಕ್ರೀಡಾಂಗಣದಲ್ಲಿ ಪಂದ್ಯ ನಿಗದಿಯಾಗಿದ್ದು, ಮಳೆರಾಯ ಅಡ್ಡಿಪಡಿಸದಿರಲಿ ಎಂದು ಇತ್ತಂಡಗಳ ಆಟಗಾರರು, ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
2024ರ ಜೂನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಅದಕ್ಕೂ ಮುನ್ನ ಭಾರತಕ್ಕೆ ಇನ್ನುಳಿದಿರುವುದು ಕೇವಲ 5 ಅಂತಾರಾಷ್ಟ್ರೀಯ ಟಿ20 ಪಂದ್ಯ. ಆದರೆ ವಿಶ್ವಕಪ್ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ ಎಂಬುದು ಸದ್ಯಕ್ಕೆ ಊಹಿಸಲು ಸಾಧ್ಯವಿಲ್ಲ. ಈ ಸರಣಿಯಲ್ಲಿ ಆಡುತ್ತಿರುವ 17 ಮಂದಿ ಪೈಕಿ ಕೆಲವೇ ಕೆಲವು ಮಂದಿ ಸದ್ಯಕ್ಕೆ ವಿಶ್ವಕಪ್‌ನಲ್ಲಿ ಸ್ಥಾನದ ಭರವಸೆ ಇಟ್ಟುಕೊಂಡಿದ್ದು, ಇತರರು ವಿಶ್ವಕಪ್‌ಗೂ ಮುನ್ನ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಕಾಯುತ್ತಿದ್ದಾರೆ.
ಐಪಿಎಲ್ ಹರಾಜಿಗೆ ಕ್ಷಣಗಣನೆ: 333 ಮಂದಿ ಹೆಸರು ಫೈನಲ್..!
ಶುಭ್‌ಮನ್ ಗಿಲ್ ಈ ವರ್ಷ ಅಭೂತಪೂರ್ವ ಲಯದಲ್ಲಿದ್ದರೂ, ಟಿ20 ತಂಡದಲ್ಲಿ ಅವರು ಇನ್ನಷ್ಟೇ ಸ್ಥಾನ ಗಟ್ಟಿಗೊಳಿಸಬೇಕಿದೆ. ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಆರಂಭಿಕ ಸ್ಥಾನದ ರೇಸ್‌ನಲ್ಲಿದ್ದಾರೆ. ಜಿತೇಶ್ ಶರ್ಮಾ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಸ್ಪಿನ್ನರ್ ಸ್ಥಾನಕ್ಕೆ ಬಿಷ್ಣೋಯ್ ಹಾಗೂ ಕುಲ್ದೀದ್ ಯಾದವ್ ನಡುವೆ ಪೈಪೋಟಿ ಏರ್ಪಡಬಹುದು.
ಮತ್ತೊಂದೆಡೆ ದ.ಆಫ್ರಿಕಾಕ್ಕೂ ವಿಶ್ವಕಪ್‌ಗೂ ಮುನ್ನ ಕೇವಲ 5 ಪಂದ್ಯ ಬಾಕಿಯಿದೆ. ತಂಡ ಹಲವು ಹೊಸ ಮುಖಗಳಿಗೆ ಸರಣಿಯಲ್ಲಿ ಅವಕಾಶ ನೀಡಿದ್ದು, ಅನುಭವಿಗಳೂ ತಂಡದಲ್ಲಿದ್ದಾರೆ. ಭಾರತಕ್ಕೆ ತವರಿನಲ್ಲಿ ಆಘಾತ ನೀಡಿ ಪಂದ್ಯ ಗೆಲ್ಲಲು ಎದುರು ನೋಡುತ್ತಿದೆ.
ಜನರು ಈ ಕ್ರಿಕೆಟಿನಲ್ಲಿ ಮುಂದಿನ ಯುವರಾಜ್ ಸಿಂಗ್ ನಿರೀಕ್ಷಿಸುತ್ತಿದ್ದಾರೆ: ಸನ್ನಿ
ಒಟ್ಟು ಮುಖಾಮುಖಿ: 24
ಭಾರತ: 13
ಆಸ್ಟ್ರೇಲಿಯಾ: 10
ಫಲಿತಾಂಶವಿಲ್ಲ: 01
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್/ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ರವೀಂದ್ರ ಜಡೇಜಾ, ದೀಪಕ್ ಚಹರ್, ಕುಲ್ದೀಪ್ ಯಾದವ್/ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್/ಮುಕೇಶ್ ಕುಮಾರ್.
ದ.ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಬ್ರೀಟ್ಕೆ, ಏಯ್ಡನ್ ಮಾರ್ಕ್‌ರಮ್(ನಾಯಕ), ಸ್ಟಬ್ಸ್/ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಫೆರ್ರೀರಾ, ಮಾರ್ಕೊ ಯಾನ್ಸೆನ್, ಕೇಶವ್ ಮಹರಾಜ್, ಗೆರಾಲ್ಡ್ ಕೋಟ್ಜೀ, ಬರ್ಗರ್, ತಬ್ರೀಜ್ ಶಮ್ಸಿ.
ಪಂದ್ಯ ಆರಂಭ: ಸಂಜೆ 8.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್.
ಮಳೆ ಮುನ್ಸೂಚನೆ
ಮೊದಲ ಪಂದ್ಯದಂತೆಯೇ ಈ ಪಂದ್ಯಕ್ಕೂ ಮಳೆ ಭೀತಿ ಇದ್ದು, ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚು. ಕ್ರೀಡಾಂಗಣದ ಸುತ್ತಮುತ್ತ ಮಂಗಳವಾರ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ವೇಳೆ ಮಳೆ ಸುರಿಯುವ ಮುನ್ಸೂಚನೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.