ರವಿಚಂದ್ರನ್‌ ಅಶ್ವಿನ್ ಯಶಸ್ಸಿನಲ್ಲಿ ಧೋನಿಗೂ ಸಲ್ಲಬೇಕು ಕ್ರೆಡಿಟ್..! ಭಜ್ಜಿಗೆ ಸರಿಯಾಟಿ ಅಶ್ವಿನ್‌ ಬೆಳೆಸಿದ್ದು ಮಹಿ

Published : Jul 15, 2023, 02:42 PM IST
ರವಿಚಂದ್ರನ್‌ ಅಶ್ವಿನ್ ಯಶಸ್ಸಿನಲ್ಲಿ ಧೋನಿಗೂ ಸಲ್ಲಬೇಕು ಕ್ರೆಡಿಟ್..! ಭಜ್ಜಿಗೆ ಸರಿಯಾಟಿ ಅಶ್ವಿನ್‌ ಬೆಳೆಸಿದ್ದು ಮಹಿ

ಸಾರಾಂಶ

* ಟೆಸ್ಟ್‌ ಕ್ರಿಕೆಟ್‌ನಲ್ಲಿ 700+ ವಿಕೆಟ್ ಸಾಧನೆ ಮಾಡಿದ ರವಿಚಂದ್ರನ್ ಅಶ್ವಿನ್‌ * ರವಿಚಂದ್ರನ್ ಅಶ್ವಿನ್‌ ಯಶಸ್ಸಿನ ಹಿಂದಿದೆ ಕ್ಯಾಪ್ಟನ್ ಕೂಲ್ ಧೋನಿ ಪಾತ್ರ * ಹರ್ಭಜನ್​ಗೆ ಸರಿಸಾಟಿಯಾಗಿ ಅಶ್ವಿನ್​ನ ಬೆಳೆಸಿದ ಮಹಿ..!

ಬೆಂಗಳೂರು(ಜು.15) ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ಟೀಂ ಇಂಡಿಯಾ ಫುಲ್ ಕಂಟ್ರೋಲ್ ಸಾಧಿಸಿದೆ. ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಪಡೆ ಇನಿಂಗ್ಸ್‌ ಹಾಗೂ 141 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ.  ಇದಕ್ಕೆ ಕಾರಣ, ತಂಡದ ಬೌಲರ್ಸ್. ಮೊದಲ ಇನ್ನಿಂಗ್ಸ್​​ನಲ್ಲಿ ಭಾರತೀಯ ಬೌಲರ್ಸ್ ಅದ್ಭುತ ದಾಳಿ ನಡೆಸಿದ್ರು. ಆ ಮೂಲಕ ವಿಂಡಿಸ್​​ನ ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ್ರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ವಿಂಡೀಸ್ ತಂಡವನ್ನು ಕೇವಲ 130 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಅದರಲ್ಲೂ ಆಫ್ ಸ್ಪಿನ್ನರ್ ಆರ್​. ಅಶ್ವಿನ್ ಸ್ಪಿನ್ ದಾಳಿಗೆ ಕೆರಿಬಿಯನ್ ಪಡೆ ತತ್ತರಿಸಿ ಹೋಯ್ತು. 

ಅಶ್ವಿನ್ ಬೌಲಿಂಗ್​ನಲ್ಲಿ ಬ್ಯಾಟ್ ಬೀಸಲು ವಿಂಡೀಸ್ ಬ್ಯಾಟರ್ಸ್ ಪರದಾಡಿದ್ರು. ಟೆಸ್ಟ್​ ಕ್ರಿಕೆಟ್​​​ನಲ್ಲಿ ಅಶ್ವಿನ್, 33ನೇ ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ರು. ಅಲ್ಲದೇ, ಅಲ್ಜಾರಿ ಜೋಸೆಫ್​ನ ಔಟ್ ಮಾಡೋ ಮೂಲಕ ಇಂಟರ್​ನ್ಯಾಷನಲ್ ಕ್ರಿಕೆಟ್​​ನಲ್ಲಿ 700 ವಿಕೆಟ್ ಬೇಟೆಯಾಡಿದ್ರು. ಇದರೊಂದಿಗೆ ಭಾರತದ ಪರ ಈ ಸಾಧನೆ ಮಾಡಿದ 3ನೇ ಬೌಲರ್ ಅನ್ನೋ ದಾಖಲೆ ಬರೆದ್ರು. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 700 ವಿಕೆಟ್ಸ್​ ಅಂದ್ರೆ ಸಾಮಾನ್ಯ ಅಲ್ಲ. ಆದ್ರೆ, ಇಂತಹ ಅದ್ಭುತ ಸಾಧನೆ ಮಾಡಿರೋ ಅಶ್ವಿನ್​ನ ತಂಡಕ್ಕೆ ಆಯ್ಕೆ ಮಾಡಿದ್ದಕ್ಕೆ ಟೀಕೆಗಳು ಕೇಳಿ ಬಂದಿದ್ವು. 

ಹರ್ಭಜನ್​ಗೆ ಸರಿಸಾಟಿಯಾಗಿ ಅಶ್ವಿನ್​ನ ಬೆಳೆಸಿದ ಮಹಿ..!

ಅಶ್ವಿನ್ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಾಗ ಮತ್ತೊಬ್ಬ ಸ್ಪಿನ್ನರ್ ಹರ್ಭಜನ್ ​ಸಿಂಗ್ ತಂಡದಲ್ಲಿದ್ರು. ಇದರಿಂದ ಬಜ್ಜಿಯನ್ನ ಸೈಡ್​ಲೈನ್ ಮಾಡಲು ಅಶ್ವಿನ್​ನ ಆಯ್ಕೆ ಮಾಡಲಾಗಿದೆ ಅಂತ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ರು.  ಆದ್ರೆ, ಧೋನಿ ಮಾತ್ರ ಅಶ್ವಿನ್​ನ  ಬಿಟ್ಟುಕೊಡಲಿಲ್ಲ. IPL​ನಲ್ಲಿ ಸಿಎಸ್​ಕೆ ಪರ ಅಶ್ವಿನ್ ಆಡ್ತಿದ್ದರಿಂದ ಧೋನಿಗೆ ಅಶ್ವಿನ್ ಟ್ಯಾಲೆಂಟ್ ಮತ್ತು ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಅರಿವಿತ್ತು. ಇದರಿಂದ ಧೋನಿ ಜಿದ್ದಿಗೆ ಬಿದ್ದು ಅಶ್ವಿನ್​ರನ್ನ ತಂಡಕ್ಕೆ ಸೇರಿಸಿಕೊಂಡ್ರು. 

Ind vs WI ಕೆರಿಬಿಯನ್ನರ ಬೇಟೆಯಾಡಿದ ಭಾರತದ ಹುಲಿಗಳು..! ಟೀಂ ಇಂಡಿಯಾಗೆ ಇನಿಂಗ್ಸ್‌ ಜಯಭೇರಿ..!

ಅವತ್ತು ಧೋನಿ ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನ ಅಶ್ವಿನ್ ಇವತ್ತಿಗೂ ಉಳಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ಮ್ಯಾಚ್​ ವಿನ್ನರ್ ಆಗಿ ಬದಲಾಗಿದ್ದಾರೆ. ಆವತ್ತು ಯಾರು ಅಶ್ವಿನ್​ ತಂಡ ಬೇಡ ಅಂದಿದ್ರೋ ಅವ್ರೇ ಈಗ ಅಶ್ವಿನ್​ನ ಕೊಂಡಾಡ್ತಿದ್ದಾರೆ. 

ಅಪ್ಪ-ಮಗನ ವಿಕೆಟ್ ಪಡೆದ ಅಶ್ವಿನ್​

ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ಅಶ್ವಿನ್ ವಿಶೇಷ ದಾಖಲೆ ಬರೆದಿದ್ದಾರೆ. 2011ರಲ್ಲಿ ಶಿವನಾರಾಯಣ್ ಚಂದ್ರಪಾಲ್ ವಿಕೆಟ್​ ಪಡೆದುಕೊಂಡಿದ್ರು. ಇನ್ನು ಈಗ ಚಂದ್ರಪಾಲ್ ಮಗ ಟಾಗೆನರೈನ್ ಚಂದ್ರಪಾಲ್​ರನ್ನ ಔಟ್ ಮಾಡೋ ಮೂಲಕ ಅಪ್ಪ- ಮಗ ಇಬ್ಬರನ್ನು ಔಟ್ ಮಾಡಿದ ಬೌಲರ್​ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

Asian Games 2023: ಭಾರತ ಕ್ರಿಕೆಟ್‌ ತಂಡ ಪ್ರಕಟ, ಗಾಯಕ್ವಾಡ್‌ಗೆ ನಾಯಕ ಪಟ್ಟ, ರಿಂಕು ಸಿಂಗ್‌ಗೆ ಜಾಕ್‌ಪಾಟ್

ಒಟ್ಟಿನಲ್ಲಿ ಇವತ್ತು ಅಶ್ವಿನ್​ ಭಾರತದ ಸ್ಪಿನ್ ಲೆಜಂಡ್ ಆಗಿರೋದ್ರಲ್ಲಿ ಧೋನಿಯ ಪಾತ್ರವೂ ಇದೆ. ಅಂದು ಧೋನಿ ಅಶ್ವಿನ್​ ಬೆನ್ನಿಗೆ ನಿಲ್ಲದೇ ಇದ್ರೆ, ಅಶ್ವಿನ್ ಟೀಂ ಇಂಡಿಯಾಗೆ ಎಂಟ್ರಿ ನೀಡ್ತಿರಲಿಲ್ಲ. 700 ವಿಕೆಟ್ ಬೇಟೆಯಾಡ್ತಿರಲಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

33 ಎಸೆತದಲ್ಲಿ ಅಲೆನ್ ಶತಕ ದಾಖಲೆ, ಸೌತ್ ಆಫ್ರಿಕಾ ಮಣಿಸಿ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್
ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ರೆ ಭಾರತಕ್ಕೆ ಟ್ರೋಫಿ ಖಚಿತ, ಟಿ20 ವಿಶ್ವಕಪ್‌ನಲ್ಲಿದೆ ಸಂಪ್ರದಾಯ