Duleep Trophy Final: ಪಶ್ಚಿಮ ವಲಯಕ್ಕೆ ಗೆಲ್ಲಲು ಕಠಿಣ ಗುರಿ ನೀಡಿದ ದಕ್ಷಿಣ ವಲಯ

By Naveen KodaseFirst Published Jul 15, 2023, 11:24 AM IST
Highlights

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದಕ್ಷಿಣ ವಲಯ-ಪಶ್ಚಿಮ ವಲಯ ಫೈಟ್
ಉತ್ತರ ವಲಯಕ್ಕೆ ಗೆಲ್ಲಲು 298 ರನ್‌ ಗುರಿ ನೀಡಿದ ದಕ್ಷಿಣ ವಲಯ
ಮೊದಲ ಇನಿಂಗ್ಸ್‌ನಲ್ಲಿ 67 ರನ್ ಮುನ್ನಡೆ ಗಳಿಸಿದ್ದ ದಕ್ಷಿಣ ವಲಯ

ಬೆಂಗಳೂರು(ಜು.15): ದುಲೀಪ್ ಟ್ರೋಫಿ ಫೈನಲ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ವಲಯ ತಂಡವು ದಿಟ್ಟ ಹೋರಾಟ ತೋರುವಲ್ಲಿ ಯಶಸ್ವಿಯಾಗಿದೆ. ದಕ್ಷಿಣ ವಲಯದ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಎರಡನೇ ಇನಿಂಗ್ಸ್‌ನಲ್ಲಿ ಹನುಮ ವಿಹಾರಿ ಪಡೆ 230 ರನ್‌ ಗಳಿಸಿ ಸರ್ವಪತನ ಕಂಡಿದೆ. ಈ ಮೂಲಕ ಪಶ್ಚಿಮ ವಲಯ ಚಾಂಪಿಯನ್ ಆಗಲು 298 ರನ್‌ಗಳ ಗುರಿ ನೀಡಿದೆ.

ಮೂರನೇ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿದ್ದ ದಕ್ಷಿಣ ವಲಯ ತಂಡಕ್ಕೆ ನಾಲ್ಕನೇ ದಿನದಾಟ ಆರಂಭದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ವೈಶಾಕ್ ವಿಜಯ್‌ಕುಮಾರ್ ಜೋಡಿ 8ನೇ ವಿಕೆಟ್‌ಗೆ 51 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕರ್ನಾಟಕದ ವೇಗಿ ವೈಶಾಕ್ ವಿಜಯ್‌ಕುಮಾರ್ ಸಮಯೋಚಿತ 23 ರನ್‌ ಬಾರಿಸಿ ತಂಡಕ್ಕೆ ಉತ್ತಮ ರನ್ ಕಾಣಿಕೆ ನೀಡಿದರು.

𝗜𝗻𝗻𝗶𝗻𝗴𝘀 𝗕𝗿𝗲𝗮𝗸!

A 5️⃣-wicket haul for Dharmendrasinh Jadeja 👏

South Zone are bowled out for 230 and set a Target 🎯 of 298

West Zone will begin their chase shortly! | | pic.twitter.com/gcZJMfPFi2

— BCCI Domestic (@BCCIdomestic)

 ಇನ್ನು ಇದಕ್ಕೂ ಮೊದಲು ವೇಗಿಗಳ ಮಾರಕ ದಾಳಿ ನೆರವಿನಿಂದ ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಪಶ್ಚಿಮ ವಲಯದ ವಿರುದ್ಧ ದಕ್ಷಿಣ ವಲಯ ತಂಡ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ದಕ್ಷಿಣದ 213 ರನ್‌ಗೆ ಉತ್ತರವಾಗಿ ಪಶ್ಚಿಮ ವಲಯ ಶುಕ್ರವಾರ 146 ರನ್‌ಗೆ ಸರ್ವಪತನ ಕಂಡಿತು. 67 ರನ್‌ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ 3ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 181 ರನ್‌ ಗಳಿಸಿದ್ದು, ಒಟ್ಟು 248 ರನ್‌ ಮುನ್ನಡೆ ಪಡೆದಿತ್ತು

Ind vs WI ಕೆರಿಬಿಯನ್ನರ ಬೇಟೆಯಾಡಿದ ಭಾರತದ ಹುಲಿಗಳು..! ಟೀಂ ಇಂಡಿಯಾಗೆ ಇನಿಂಗ್ಸ್‌ ಜಯಭೇರಿ..!

2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 129 ರನ್‌ ಗಳಿಸಿದ್ದ ಪಶ್ಚಿಮ ತಂಡಕ್ಕೆ ಶುಕ್ರವಾರವೂ ದಕ್ಷಿಣದ ವೇಗಿಗಳು ಮಾರಕವಾಗಿ ಪರಿಣಮಿಸಿದರು. ಹಿಂದಿನ ದಿನದ ಮೊತ್ತಕ್ಕೆ 17 ರನ್‌ ಸೇರಿಸಿ ಇನ್ನಿಂಗ್ಸ್‌ ಕೊನೆಗೊಳಿಸಿತು. ಕನ್ನಡಿಗ ವಿದ್ವತ್‌ ಕಾವೇರಪ್ಪ 53 ರನ್‌ ನೀಡಿ 7 ವಿಕೆಟ್‌ ಕಬಳಿಸಿದರು.

ಮತ್ತೆ ಬ್ಯಾಟಿಂಗ್‌ ವೈಫಲ್ಯ: ದಕ್ಷಿಣ ವಲಯ 2ನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು. ಆರ್‌.ಸಮರ್ಥ್‌(05), ತಿಲಕ್‌ ವರ್ಮಾ(03) ಬೇಗನೇ ಔಟಾದರೂ, ಮಯಾಂಕ್‌ ಅಗರ್‌ವಾಲ್‌ 35 ಹಾಗೂ ನಾಯಕ ಹನುಮ ವಿಹಾರಿ 42 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಬಳಿಕ ಕೆಲ ಕಾಲ ಕ್ರೀಸ್‌ನಲ್ಲಿ ನೆಲೆಯೂರಿದ್ದ ಸಚಿನ್‌ ಬೇಬಿ(37) ಹಾಗೂ ರಿಕ್ಕಿ ಭುಯಿ(28) ಸತತ ಎಸೆತಗಳಲ್ಲಿ ವಿಕೆಟ್‌ ಕಳೆದುಕೊಳ್ಳುವುದರೊಂದಿಗೆ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು.

ಎಸ್‌.ಅರವಿಂದ್‌ ಬರೋಡಾ ತಂಡಕ್ಕೆ ಬೌಲಿಂಗ್‌ ಕೋಚ್‌

ಬೆಂಗಳೂರು: ಕರ್ನಾಟಕದ ಮಾಜಿ ವೇಗಿ ಶ್ರೀನಾಥ್‌ ಅರವಿಂದ್‌ 2023-24ರ ಋತುವಿನಲ್ಲಿ ಬರೋಡಾ ಹಿರಿಯರ ತಂಡಕ್ಕೆ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 2007ರಿಂದ ಕರ್ನಾಟಕ ಪರ 56 ಪ್ರಥಮ ದರ್ಜೆ ಪಂದ್ಯಗಳಲ್ಲಿ 186 ವಿಕೆಟ್‌ ಪಡೆದಿರುವ ಅರವಿಂದ್‌ ರಾಜ್ಯ ತಂಡಕ್ಕೆ 2018ರಿಂದ ಬೌಲಿಂಗ್‌ ಕೋಚ್‌ ಕಾರ್ಯನಿರ್ವಹಿಸಿದ್ದರು.

click me!