ಪುಣೆ ಟೆಸ್ಟ್; ಅಶ್ವಿನ್ ಮ್ಯಾಜಿಕ್, 4 ವಿಕೆಟ್ ಕಳೆದುಕೊಂಡ ಸೌತ್ ಆಫ್ರಿಕಾ!

By Web DeskFirst Published Oct 13, 2019, 11:54 AM IST
Highlights

ಪುಣೆ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ. ಸೌತ್ ಆಫ್ರಿಕಾ ತಂಡದ 4 ವಿಕೆಟ್ ಕಬಳಿಸಿರುವ ಭಾರತ, ಗೆಲುವಿನತ್ತ ಹೆಜ್ಜೆ ಇಟ್ಟಿದೆ.

ಪುಣೆ(ಅ.13): ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನತ್ತ ಹೆಜ್ಜೆ ಇಟ್ಟಿದೆ. ಸೌತ್ ಆಫ್ರಿಕಾ ತಂಡವನ್ನು 275ರನ್‌ಗಳಿಗೆ ಆಲೌಟ್ ಮಾಡಿ ಫಾಲೋ ಆನ್ ಹೇರಿದ ಟೀಂ ಇಂಡಿಯಾ ಇದೀಗ 2ನೇ ಇನಿಂಗ್ಸ್‌ನಲ್ಲಿ ಹರಿಗಣಗಳ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಬೋಜನ ವಿರಾಮದ ವೇಳೆಗೆ ಸೌತ್ ಆಫ್ರಿಕಾ 252  ರನ್ ಹಿನ್ನಡೆಯಲ್ಲಿದೆ.

ಇದನ್ನೂ ಓದಿ: ಹರಿಣಗಳ ವಿರುದ್ಧ ಸ್ಪಿನ್ ಮೋಡಿ; ಕುಂಬ್ಳೆ ಸಾಲಿಗೆ ಸೇರಿದ ಅಶ್ವಿನ್!

3ನೇ ದಿನದಾಟದ ಅಂತ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 275 ರನ್‌ಗಳಿಗೆ ಆಲೌಟ್ ಮಾಡಿತ್ತು. 4ನೇ ದಿನದಾಟದಲ್ಲಿ ಫಾಲೋ ಆನ್ ಹೇರಿದ ಭಾರತ, ಸೌತ್ ಆಫ್ರಿಕಾಗೆ ಮತ್ತೆ ಶಾಕ್ ನೀಡಿತು. ಬ್ಯಾಟಿಂಗ್ ಆರಂಭಿಸಿ ಆ್ಯಡಿನ್ ಮಾರ್ಕ್ರಂ ಶೂನ್ಯ ಸುತ್ತಿದರು. 

ಇದನ್ನೂ ಓದಿ: ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ರೋಹಿತ್ ಪಾದಕ್ಕೆರಗಿದ ಅಭಿಮಾನಿ!

ಥೆನಿಸ್ ಡೆ ಬ್ರುಯಿನ್, ನಾಯಕ ಫಾಫ್ ಢುಪ್ಲೆಸಿಸ್ ಬಂದ ಹಾಗೆ ವಾಪಾಸ್ಸಾದರು. 70 ರನ್‌ಗೆ 3 ವಿಕೆಟ್ ಕಳೆದುಕೊಂಡ  ಸೌತ್ ಆಫ್ರಿಕಾ ತಂಡಕ್ಕೆ ಡೀನ್ ಎಲ್ಗರ್ ಆಸರೆಯಾದರು. ಎಲ್ಗರ್ 48 ರನ್ ಸಿಡಿಸಿ ಔಟಾದರು. ಬೋಜನ ವಿರಾಮದ ವೇಳೆ ಸೌತ್ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 74 ರನ್ ಸಿಡಿಸಿದೆ. ಕ್ವಿಂಟನ್ ಡಿಕಾಕ್ ಹಾಗೂ ತೆಂಬಾ ಬವುಮಾ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರ್ ಅಶ್ವಿನ್ 2, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ತಲಾ 1 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ: ಅಶ್ವಿನ್ ಬೌಲಿಂಗ್‌ಗೆ ತಬ್ಬಿಬ್ಬಾದ ಡಿಕಾಕ್: ವಿಡಿಯೋ ವೈರಲ್

ಭಾರತದ ಗೆಲುವಿಗೆ 6 ವಿಕೆಟ್ ಅವಶ್ಯಕತೆ ಇದೆ. ಆದರೆ ಸೌತ್ ಆಫ್ರಿಕಾ ಸದ್. 252 ರನ್ ಹಿನ್ನಡೆಯಲ್ಲಿದ್ದು, ಪಂದ್ಯ ಉಳಿಸಿಕೊಳ್ಳಲು ಶತಾಯಗತಾಯ ಹೋರಾಟ ನಡೆಸಲಿದೆ.

click me!