ವಿಜಯ್ ಹಜಾರೆ: ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ!

By Web DeskFirst Published Oct 13, 2019, 10:11 AM IST
Highlights

ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ 6 ಗೆಲುವು ಸಾಧಿಸೋ ಮೂಲಕ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಇಟ್ಟಿದೆ. 24 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಕಾಪಾಡಿಕೊಂಡಿದೆ.
 

ಬೆಂಗಳೂರು(ಅ.13): 2019ರ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಆತಿಥೇಯ ಕರ್ನಾಟಕ ತಂಡ, 6ನೇ ಗೆಲುವು ಪಡೆಯಿತು. ಇದರೊಂದಿಗೆ ಮನೀಶ್‌ ಪಡೆ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು. ಶನಿವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎಲೈಟ್‌ ‘ಎ’ ಮತ್ತು ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ, ಸೌರಾಷ್ಟ್ರ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು. 24 ಅಂಕಗಳಿಸಿದ ಕರ್ನಾಟಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಇದನ್ನೂ ಓದಿ: ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಸಂಜು ಸಾಮ್ಸನ್!

ಸೌರಾಷ್ಟ್ರ ತಂಡ ನೀಡಿದ 213 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ ದೇವದತ್‌್ತ ಪಡಿಕ್ಕಲ್‌ (103*) ಶತಕ ಹಾಗೂ ನಾಯಕ ಮನೀಶ್‌ ಪಾಂಡೆ (67*) ಭರ್ಜರಿ ಬ್ಯಾಟಿಂಗ್‌ ನೆರವಿನಿಂದ 36.4 ಓವರಲ್ಲಿ 2 ವಿಕೆಟ್‌ ಕಳೆದುಕೊಂಡು 213 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಸೌರಾಷ್ಟ್ರ ಪರ ಪ್ರೇರಕ್‌ ಮಂಕಡ್‌ 2 ವಿಕೆಟ್‌ ಪಡೆದರು.

ಇದನ್ನೂ ಓದಿ: ಪುಣೆ ಟೆಸ್ಟ್: ಸೌತ್ ಆಫ್ರಿಕಾ 275 ರನ್‌ಗೆ ಆಲೌಟ್; ಭಾರತಕ್ಕೆ ಭರ್ಜರಿ ಮೇಲುಗೈ

ಪ್ರಸಿದ್ಧ್ ಮಿಂಚಿನ ದಾಳಿ:
ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಸೌರಾಷ್ಟ್ರ ಕರ್ನಾಟಕದ ವೇಗದ ದಾಳಿಗೆ ತತ್ತರಿಸಿತು. ಯುವ ವೇಗಿ ಪ್ರಸಿದ್ಧ್ ಕೃಷ್ಣ (5-19), ವಿ. ಕೌಶಿಕ್‌ (3-23) ಮಾರಕ ದಾಳಿಗೆ ಸೌರಾಷ್ಟ್ರ ತರಗೆಲೆಯಂತೆ ಉದುರಿ ಹೋಯಿತು. ಒಂದು ಹಂತದಲ್ಲಿ 37 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡ ಸೌರಾಷ್ಟ್ರ ಸಂಕಷ್ಟದಲ್ಲಿ ಸಿಲುಕಿತು. ಪ್ರೇರಕ್‌ ಮಂಕಡ್‌ (86), ಚಿರಾಗ್‌ (66) ರನ್‌ಗಳಿಸಿದ್ದರಿಂದ ಸೌರಾಷ್ಟ್ರ 47.2 ಓವರಲ್ಲಿ 212 ರನ್‌ಗಳಿಸಿತು.

ಸ್ಕೋರ್‌: ಸೌರಾಷ್ಟ್ರ 212/10, ಕರ್ನಾಟಕ 213/2

click me!